ಮಳವಳ್ಳಿ ಸುಂದ್ರಮ್ಮ[೧೯೦೫-೧೯೯೬]:-ಶೇ.೯೦ರಷ್ಟು ನಾಟಕಗಳಲ್ಲಿ ಸ್ತ್ರೀ ಪಾತ್ರವನ್ನು ಗಂಡಸರೆ ನಿರ್ವಹಿಸುತ್ತಿದ್ದ ಕಾಲ! ಅಂತಹ ನಟಿಯರ ಕ್ಷಾಮದ ಕಾಲದಲ್ಲಿ ಮಂಡ್ಯಜಿಲ್ಲೆ ಮಳವಳ್ಳಿಯಲ್ಲಿ ಜನಿಸಿದ ಗ್ರಾಮೀಣ ಪ್ರತಿಭೆ ಶೀಮತಿ ಸುಂದ್ರಮ್ಮ! ಇವರು ಧೈರ್ಯೆ ಸಾಹಸೆ ಲಕ್ಷ್ಮೀ ಎಂಬಂತೆ ಚಂದನವನಕ್ಕೆ ಪಾದಾರ್ಪಣೆ ಮಾಡಿದರು. ಯಾವುದೇ ಕಾರಣವಿಲ್ಲದೆ ಮಹಿಳೆಯರು ಸುಖಾಸುಮ್ಮನೆ ಮನೆಯಿಂದ ಹೊರಗೆ ತಮ್ಮ ಕಾಲಿಡದ ತೀರ ಸಂಪ್ರದಾಯ ಬದ್ಧದ ಮೌಢ್ಯ ಮುಗ್ಧ ಹೆಂಗಸರ ಕಾಲವದು. ಹೆಣ್ಣುಮಕ್ಕಳು ಶಾಲಾ ಕಾಲೇಜು ನಾಟಕ ಸಿನಿಮಾ ಸಂತೆ ಜಾತ್ರೆ ಮದುವೆ ಮುಂಜಿ ಮುಂತಾದ ಸಂಭ್ರಮದ ಸಂದರ್ಭದಲ್ಲಿ ಮಾತ್ರವೆ ಸಾರ್ವಜನಿಕ ಸ್ಥಳಗಳಲ್ಲಿ ಬಹಳ ಅಪರೂಪಕ್ಕೆ ಕಾಣಿಸಿಕೊಳ್ಳುತ್ತಿದ್ದ ಕಾಲ. ಅಂಥ ಮಡಿವಂತಿಕೆ ತುಂಬಿದ್ದ ಕಾಲದಲ್ಲಿ ನಟನಾ ಕ್ಷೇತ್ರಕ್ಕೆ ಎಂಟ್ರಿ ನೀಡಿದ ಧೀರಮಹಿಳೆ. ಹಳೇ ಮೈಸೂರು ಪ್ರಾಂತ್ಯದ ರಂಗಭೂಮಿ ಕ್ಷೇತ್ರದ ಆದಿನಟಿ ಇವರು! ಬಹುಶಃ ನಾಟಕ ಮತ್ತು ಮೂಕಿ ಚಿತ್ರರಂಗದ ಪ್ರಥಮ ಮಹಿಳಾ ಅಭಿನೇತ್ರಿ!
ಮಳವಳ್ಳಿ ಸುಂದ್ರಮ್ಮನವರ ಸಮಕಾಲೀನ ನಟಿಯರೆಂದರೆ ತ್ರಿಪುರಾಂಭ, ಬಿ.ಜಯಮ್ಮ, ಕಮಲಾಬಾಯಿ, ಲಕ್ಷ್ಮೀಬಾಯಿ ಹಾಗೂ ಎಸ್.ಕೆ.ಪದ್ಮಾದೇವಿ, ಮುಂತಾದ ಬೆರಳೆಣಿಕೆಯಷ್ಟು ಮಂದಿ ಸ್ತ್ರೀ-ಕಲಾವಿದರು! ಸಿನಿಮಾಗಿಂತ ನಾಟಕಕ್ಕೆ ಹೆಚ್ಚು ಪ್ರಾಧಾನ್ಯತೆ ಅಥವ ಮಾನ್ಯತೆ ಇದ್ದಂತಹ ಕಾಲ ಅದಾಗಿತ್ತು. ಈಗಿನಂತೆ ಯಾ[ರ]ವ ಅಭಿಮಾನಿ[ಸಂಘ]ಗಳು ಇರಲಿಲ್ಲ! ಸಂಭಾವನೆಯಂತೂ ಗೋವಿಂದನೇ ಬಲ್ಲ! ದೇವರಿಗೇ ಸಮರ್ಪಿತ ಎನ್ನುವಷ್ಟರ ಮಟ್ಟಿಗೆ ಬೆಳ್ಳಿರೂಪಾಯಿ ಮೂಲಕ ತೀರ ಕಡಿಮೆ ಹಣ ನೀಡಲಾಗುತ್ತಿತ್ತು. ’ಕಲೆಯೇ-ಸರ್ವಸ್ವ’ ಎನ್ನುತ್ತಿದ್ದ ಕಾಲದಲ್ಲಿ ಕಲಾವಿದರಿಗೆ, ವಿಶೇಷವಾಗಿ ನಟಿಯರಿಗೆ ಸಿಗುತ್ತಿದ್ದ ಗೌರವ ಅಷ್ಟಕ್ಕಷ್ಟೆ? ಮಹಿಳಾ ಸಮುದಾಯವೆ ಇವರನ್ನು ನಾಟಕ ಸಿನಿಮಾದ ಬಣ್ಣ ಬಳಿದುಕೊಂಡು ಕುಣಿವ ಸೂ….? ಎಂದು ಬ್ರಾಂಡ್ ಮಾಡಿ ಸಂಭೋದಿಸುತ್ತಿದ್ದರು
ಮಳವಳ್ಳಿ ಸುಂದ್ರಮ್ಮನವರಿಗೆ ಒಂದೇಒಂದು ಬಾರಿ ಹೀರೋಯಿನ್ ಛಾನ್ಸ್ ದೊರಕಿ, ಕಡೇಘಳಿಗೆಯಲ್ಲಿ ಕೈತಪ್ಪಿಹೋಗಿ ಎರಡನೆ ಹೀರೋಯಿನ್ ಪಾತ್ರಕ್ಕೇ ತೃಪ್ತಿ ಪಡಬೇಕಾಯಿತು! ಅದಾದ ನಂತರವೂ ಪಾಪ ಮತ್ತೆಂದೂ ನಾಯಕಿನಟಿ ಪಟ್ಟ ಸಿಗಲೇ ಇಲ್ಲ! ಆದರೂ ಇದ್ದುದರಲ್ಲೇ ತೃಪ್ತಿ ಪಟ್ಟುಕೊಳ್ಳುತ್ತಿದ ಇವರು ತಮಗೆ ದೊರೆತ ತಾಯಿ ಅತ್ತೆ ಮಲತಾಯಿ ಅಥವ ಇನ್ನಿತರೆ ಸಣ್ಣ ಪುಟ್ಟ ಪಾತ್ರವನ್ನು ನೀಡಿದರೂ ಸಹ ಉದಾಸೀನ ತೋರದೆ ಖುಷಿಯಿಂದಲೆ ಪ್ರಾಮಾಣಿಕವಾಗಿ ಮತ್ತು ಅಚ್ಚುಕಟ್ಟಾಗಿ ನಟಿಸಿ ಎಲ್ಲರ ಪ್ರೀತಿ ವಿಶ್ವಾಸ ಗೌರವ ಹಾಗೂ ಮೆಚ್ಚುಗೆ ಪಡೆದರು! ೭೨ ವರ್ಷಕಾಲ ತಮ್ಮ ಬಣ್ಣದ ಜೀವನದ ಹಾದಿಯಲ್ಲಿ ನೂರಾರು ನಾಟಕಗಳಲ್ಲಿ ಮತ್ತು ಹತ್ತಾರು ಸಿನಿಮಾ ಗಳಲ್ಲಿ ನಟಿಸಿ ಜನಪ್ರಿಯ ಕಲಾವಿದೆ ಎನಿಸಿದರು. ಮೈಸೂರು-ತಿರುವಾಂಕೂರು ಮಹಾರಾಜರು ಮೊದಲ್ಗೊಂಡು ದಿವಾನರು, ಕಲೆಕ್ಟರ್ಗಳು, ಸಾಹುಕಾರರು, ಗಣ್ಯಾತಿಗಣ್ಯರು, ಸಂಘ ಸಂಸ್ಥೆಗಳು ಇವರನ್ನು ಗೌರವಿಸಿ ಅನೇಕ ಬಿರುದು ಬಹುಮಾನ ಸನ್ಮಾನ ನೀಡಿದ್ದಾರೆ. ಕಲೆಯೆ ಜೀವನ ಎಂದು ತಿಳಿದಿದ್ದ ಮಳವಳ್ಳಿ ಸುಂದ್ರಮ್ಮನವರು ತಮ್ಮ ಅಂತಿಮ ಕಾಲದಲ್ಲೂ ಸಿನಿಮಾವೊಂದರಲ್ಲಿ ದೊರಕಿದ ಚಿಕ್ಕ ಪಾತ್ರವನ್ನು ಅತ್ಯಂತ ಭಯ ಭಕ್ತಿ ಗೌರವದಿಂದ ಸ್ವೀಕರಿಸಿ ಅಮೋಘವಾದ ಅಭಿನಯ ನೀಡಿ ತಮ್ಮ ತುಂಬು ಜೀವನದ ೯೨ನೇ ವಯಸ್ಸಲ್ಲಿ ಕಣ್ಮರೆಯಾದರು! ನಾಟಕ-ಸಿನಿಮ ಎರಡೂ ಕ್ಷೇತ್ರದಲ್ಲಿ ಕನ್ನಡನಾಡು ಮರೆಯದ ಹಿರಿಯ ಕಲಾವಿದೆ ಸುಂದ್ರಮ್ಮನವರು ನಟಿಸಿದ್ದ ಕೆಲವು ಚಿತ್ರಗಳು:-
ಮಳವಳ್ಳಿ ಸುಂದ್ರಮ್ಮ ನಟಿಸಿದ ಚಿತ್ರಗಳು
ಕ್ರ.ಸಂ. ಫಿಲಂ ಹೆಸರು ಕ್ರ.ಸಂ. ಫಿಲಂ ಹೆಸರು
೧ ಚಿರಂಜೀವಿ/೧೯೩೬ ೯ ದಲ್ಲಾಳಿ/೧೯೫೩
೨ ರಾಜಸೂಯಯಾಗ/೧೯೩೭ ೧೦ ಅಣ್ಣತಂಗಿ/೧೯೫೮
೩ ಸುಭದ್ರಾ/೧೯೪೧ ೧೧ ಮಹಾಕವಿ ಕಾಳಿದಾಸ/೧೯೫೫
೪ ಜೀವನ ನಾಟಕ/೧೯೪೨ ೧೨ ಭಕ್ತ ಮಲ್ಲಿಕಾರ್ಜುನ/೧೯೫೫
೫ ಬರ್ತೃಹರಿ[ತ]/೧೯೪೪ ೧೩ ಜಗಜ್ಯೋತಿ ಬಸವೇಶ್ವರ/೧೯೫೯
೬ ಹೇಮರೆಡ್ಡಿ ಮಲ್ಲಮ್ಮ/೧೯೪೫ ೧೪ ಭಾಗೀರಥಿ/೧೯೬೯
೭ ದಸರ/೧೯೪೯ ೧೫ ಮುಯ್ಯಿ/೧೯೭೯
೮ ಜಾತಕಫಲ/೧೯೫೩ ೧೬ ಸೂರ್ಯೋದಯ/೧೯೯೩[ಅಂತಿಮ ಚಿತ್ರ]
ಕುಮಾರಕವಿ ಬಿ.ಎನ್.ನಟರಾಜ್
೯೦೩೬೯೭೬೪೭೧
ಬೆಂಗಳೂರು-೫೬೦೦೭೨
