ವರದಿ.ಮಹೇಶ್ ನಾಯಕ್.
ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಹೂಳುವ ಸ್ಮಶಾನವನ್ನೊಮ್ಮೆ ನೋಡಿದ ಮೇಲೆ ಹೆಚ್ಚಿನವರು ಕೇಳುವ ಪ್ರಶ್ನೆ ಈ ಸ್ಮಶಾನವನ್ನೇಕೆ ಅಭಿವೃದ್ಧಿ ಮಾಡಿಲ್ಲ ಎಂಬುದಾಗಿದೆ.ಈ ಸ್ಮಶಾನದ ಬಳಿಗೆ ಹೋದರೆ ನಿರ್ಲಕ್ಷ್ಯ ಎದ್ದು ಕಾಣುತ್ತದೆ. ಪ್ರವೇಶ ದ್ವಾರಕ್ಕೆ ಅಳವಡಿಸಲಾಗಿರುವ ಗೇಟ್ ಮುರಿದು ಬಿದ್ದಿದೆ.
ಅದನ್ನು ದುರಸ್ತಿ ಮಾಡದೆ ತುಕ್ಕು ಹಿಡಿಯುತ್ತಿದೆ. ಶವ ಸಂಸ್ಕಾರಕ್ಕಾಗಿ ಬರುವವರಿಗೆ ಕುಡಿಯುವ ನೀರು, ಶೌಚಾಲಯ ಇಲ್ಲದೆ ಪರದಾಡುವ ಪರಿಸ್ಥಿತಿ ಇಲ್ಲಿದೆ.ಇನ್ನೇನಾದರೂ ಸಂಜೆ ಹೊತ್ತಿನಲ್ಲಿ ಸಂಸ್ಕಾರಕ್ಕೆ ಶವ ತಂದರೆ ನಿಜವಾಗಲು ಹರ ಸಾಹಸವೇ ಪಡಬೇಕಾಗುತ್ತದೆ. ಬೀದಿ ದೀಪದ ಕಂಬವಿದೆಯಾದರೂ ದೀಪವೇ ಇಲ್ಲದ ಕಾರಣ ಬೆಳಕಿಗಾಗಿ ಮೊಬೈಲ್ ಟಾರ್ಚ್ ಲೈಟ್ ಹಿಡಿದು ಕೊಂಡು ಸಂಸ್ಕಾರ ಮಾಡುವ ಪರಿಸ್ಥಿತಿ ಬಂದೊದಗಿದೆ. ಮನುಷ್ಯನ ಚಿರಶಾಂತಿ ಧಾಮವಾಗಿರುವ ಸ್ಮಶಾನಗಳು ಪುಣ್ಯಭೂಮಿ ಕ್ಷೇತ್ರದ ರೀತಿಯಲ್ಲಿ ಸ್ವಚ್ಛವಾಗಿರಬೇಕು. ಅಲ್ಲಿ ಅಭಿವೃದ್ಧಿಯನ್ನು ಮಾಡಬೇಕು.ಆದರೆ ಈ ಮಸಣ ಜೂಜುಕೋರರ, ಕಳ್ಳ ಕಾಕರ, ಗಾಂಜಾ ಸೇದುವವರ ಅಡ್ಡೆಯಾಗಿ ಮಾರ್ಪಟ್ಟಿರುವುದು ಬೇಸರದ ಸಂಗತಿಯಾಗಿದೆ.
ಸ್ಮಶಾನದ ಬಗ್ಗೆ ಸಂಬಂಧಿಸಿದವರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದಂತು ಸತ್ಯ. ಇದನ್ನು ನೋಡಿದರೆ ಮನುಷ್ಯ ಸಾಯುವವರೆಗೂ ಹೋರಾಡುತ್ತಾನೆ. ಸತ್ತ ನಂತರವೂ ಮಣ್ಣಿಗೆ ಬೀಳಲು ಹೋರಾಡಬೇಕಿರುವುದು ದುರ್ದೈವವೇ ಸರಿ. ಈಗಲಾದರೂ ಎಚ್ಚೆತ್ತಕೊಂಡು ಸಂಬಂಧ ಪಟ್ಟ ಅಧಿಕಾರಿಗಳು, ಸ್ಥಳೀಯ ಶಾಸಕರು ಹಾಗೂ ನಗರ ಪಾಲಿಕೆ ಸದಸ್ಯರು ಇದರ ಅಭಿವೃದ್ದಿಗೆ ಮುಂದಾಗಬೇಕು ಸಾರ್ವಜನಿಕರ ಒತ್ತಾಯವಾಗಿದೆ.
ಆರ್.ಎಸ್. ನಾಯ್ಡು ಟ್ರಸ್ಟ್ ಕಾರ್ಯಧರ್ಶಿ ರಮೇಶ್ ಅವರು, ಸ್ಮಶಾನಕ್ಕೆ ಯಾವೊಬ್ಬ ಸ್ಥಳೀಯ ಶಾಸಕ ಅಧಿಕಾರಿಗಳು ಭೇಟಿ ನೀಡುವುದಿಲ್ಲ. ಏಕೆಂದರೆ ಇಲ್ಲಿಗೆ ಬರುವವರು ಯಾರು ಕೂಡ ಮತ ಹಾಕಲ್ಲ. ಆದ್ದರಿಂದ ಯಾವುದೇ ಪ್ರಯೋಜನ ಇಲ್ಲ ಎಂಬ ಕಾರಣಕ್ಕೆ ಯಾರು ಕೂಡ ಇತ್ತ ಗಮನಹರಿಸುತ್ತಿಲ್ಲ ಎಂದು ದೂರಿದ್ದಾರೆ.
ವಿಕಾಶ್ ಶಾಸ್ತ್ರಿ ವಿ.ಕೆ.ಎಸ್. ಪೌಂಡೇಷನ್ ಮೈಸೂರಿಗೆ ಸ್ವಚ್ಛ ನಗರಿ ಎನ್ನುವ ಗರಿಯನ್ನು ಯಾವ ರೀತಿ ಕೊಟ್ಟಿದ್ದಾರೆ ಎನ್ನುವುದೆ ಸಂಶಯವಾಗಿದೆ. ಸರ್ವೇ ಮಾಡಿದ ಅಧಿಕಾರಿಗಳು ಇಲ್ಲಿ ಸರ್ವೆ ಮಾಡಿಲ್ಲ. ಇವರು ಸರ್ವೆ ಮಾಡುವುದು ಬರಿ ಪ್ರವಾಸಿತಾಣವನ್ನ. ಇಲ್ಲಿನ ಸಮಸ್ಯೆ ಯಾವೊಬ್ಬ ನಗರ ಪಾಲಿಕೆ ಸದಸ್ಯನ ಕಣ್ಣಿಗೂ ಬಿದ್ದಿಲ್ಲ. ಇನ್ನಾದರೂ ಸ್ಮಶಾನದಲ್ಲಿ ಶವಸಂಸ್ಕಾರ ಮಾಡಿ ಬಂದ ನಂತರ ಕೈಕಾಲು ತೊಳೆದು ಕೊಳ್ಳಲು ನೀರಿನ ವ್ಯವಸ್ಥೆ ಮಾಡಬೇಕು.ಈ ಸಂದರ್ಭದಲ್ಲಿ ಒಂದು ಚಿತ್ರದ ನೆನೆಪು ಬರುತ್ತಿದೆ. ಒಂದೆ ಬಳ್ಳಿಯ ಹೂವುಗಳು ಮಹಮದ್ ರಫಿ ಅವರು ಹಾಡು ನಿಜವಾಗಲೂ ಅರ್ಥ ಪೂರ್ಣವಾಗಿದೆ. ನೀನೆಲ್ಲಿ ನಡೆವೆ ದೂರ ಎಲ್ಲೆಲ್ಲೂ ಲೋಕವೇ ಈ ಲೋಕವೆಲ್ಲ ಘೋರ, ಎಲ್ಲೆಲ್ಲೂ ಶೋಕವೇ ನಗುವಾಗ ಎಲ್ಲ ನೆಂಟರು, ಅಳುವಾಗ ಯಾರೂ ಇಲ್ಲ ಮುಳ್ಳಲ್ಲಿ ನಿನ್ನ ನಡೆಸಿ ನಲಿವಾ ನಗುವೆ ವಿಕಾರನೆರಳನ್ನು ನೀಡುವಂತಹ ಮರವನ್ನೇ ಕಡಿವರಲ್ಲ ನಿಸ್ವಾರ್ಥ ಜೀವಿಗಳಿಗೆ ಜಗದೇ ಕಹಿಯೇ ಅಪಾರ ಅಪಕಾರವನ್ನೇ ಕಾಣುವೆ, ಉಪಕಾರವನ್ನು ಕಾಣೆ ಅನುರಾಗವಿಲ್ಲಿ ಇಲ್ಲವೆ? ಮನದೆ ಇದುವೇ ವಿಚಾರ.