ಚಾಮರಾಜನಗರ: ಜಿಲ್ಲಾಡಳಿತ ಚಾಮರಾಜನಗರ ಹಾಗೂ ದಸರಾ ಮಹೋತ್ಸವ ಸಮಿತಿ ಮೈಸೂರು ವತಿಯಿಂದ ನಡೆದ ನಾಲ್ಕು ದಿನಗಳ ಚಾಮರಾಜನಗರ ದಸರಾ ಮಹೋತ್ಸವ ಇಂದು ವರ್ಣರಂಜಿತ ತೆರೆ ಕಂಡಿತು.
ನಗರದ ಚಾಮರಾಜೇಶ್ವರ ದೇವಾಲಯದ ಮುಂಭಾಗದ ಪ್ರಧಾನ ವೇದಿಕೆಯಲ್ಲಿ ದಸರಾ ಸಮಾರೋಪ ಸಮಾರಂಭ ಇಂದು ಸಂಜೆ ನಡೆಯಿತು.
ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಮಾತನಾಡಿ ಕಳೆದ ನಾಲ್ಕು ದಿನಗಳ ಕಾಲ ನಡೆದ ಚಾಮರಾಜನಗರ ದಸರಾ ಮಹೋತ್ಸವ ಯಶಸ್ವಿಯಾಗಿ ನಡೆದಿದೆ. ಇದಕ್ಕೆ ಕಾರಣರಾದ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ದಸರಾ ಸಮಿತಿಯ ಸದಸ್ಯರು, ಮಾಧ್ಯಮ ಪ್ರತಿನಿಧಿಗಳು, ಜಿಲ್ಲೆಯ ಜನತೆಗೆ ಜಿಲ್ಲಾಡಳಿತ ಹಾಗೂ ದಸರಾ ಮಹೋತ್ಸವ ಸಮಿತಿಯಿಂದ ಧನ್ಯವಾದಗಳನ್ನು ಅರ್ಪಿಸುವುದಾಗಿ ತಿಳಿಸಿದರು.
ಕಾವೇರಿ ಅಚ್ಚುಕಟ್ಟು ಪ್ರಾದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಜಿ. ನಿಜಗುಣರಾಜು ಅವರು ಮಾತನಾಡಿ, ಇಡೀ ವಿಶ್ವವೇ ಗಮನಸೆಳೆಯುವ ಹಬ್ಬ ದಸರಾ ಆಗಿದೆ. ನಾಡಿನ ರಕ್ಷಣೆಗಾಗಿ ದು?ರ ಸಂಹಾರಕ್ಕಾಗಿ ನವರಾತ್ರಿಯಲ್ಲಿ ದುರ್ಗಾಪೂಜೆ ಮಹತ್ವ ಪಡೆದುಕೊಂಡಿದೆ. ಕಳೆದ ೨ ವ?ಗಳಿಂದ ಕೋವಿಡ್ ನಿಂದಾಗಿ ದಸರಾ ಅದ್ದೂರಿಯಾಗಿ ಆಚರಣೆಯಾಗಿರಲಿಲ್ಲ. ಈ ಬಾರಿ ಜಿಲ್ಲೆಯಲ್ಲಿ ವಿಜೃಂಭಣೆಯಿಂದ ದಸರಾ ಆಚರಿಸಲಾಗಿದೆ. ಜನರ ಪ್ರತಿಕ್ರಿಯೆಯು ಚೆನ್ನಾಗಿದೆ ಎಂದರು.
ಜನಪದ ಸಾಹಿತ್ಯದ ತವರೂರಾದ ಚಾಮರಾಜನಗರ ಜಿಲ್ಲೆ ವಿಶಿ?ವಾದದ್ದು, ಜಿಲ್ಲೆಯಲ್ಲಿ ಶೇ. ೫೨ರ? ಅರಣ್ಯ ಪ್ರದೇಶವಿದೆ. ಶೇ. ೪೮ರ? ಜನವಸತಿ ಪ್ರದೇಶವಿದೆ. ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶಗಳು ನಮ್ಮ ಜಿಲ್ಲೆಯಲ್ಲಿವೆ. ದಸರಾ ವೇಳೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸ್ಥಳೀಯ ಕಲಾವಿದರಿಗೂ ಆದ್ಯತೆ ನೀಡಿದ್ದು ಅನುಕರಣೀಯವಾಗಿದೆ ಎಂದು ಜಿ. ನಿಜಗುಣರಾಜು ಅವರು ತಿಳಿಸಿದರು.
ನಗರಸಭೆ ಅಧ್ಯಕ್ಷರಾದ ಆಶಾ, ಸದಸ್ಯರಾದ ಅಬ್ರಾರ್ ಅಹಮದ್, ಎ.ಪಿ.ಎಂ.ಸಿ. ಅಧ್ಯಕ್ಷರಾದ ಮನೋಜ್ ಪಟೇಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿ ದೇವಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಗುಡೂರು ಭೀಮಸೇನ, ತಹಸೀಲ್ದಾರ್ ಬಸವರಾಜು ಇತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.