ಚಾಮರಾಜನಗರ: ಕನ್ನಡಧ್ವಜಕ್ಕೆ ಬೆಂಕಿ, ಬೆಳಗಾವಿಯಲ್ಲಿ ಸಂಗೊಳ್ಳಿರಾಯಣ್ಣ ಅವರ ಪ್ರತಿಮೆ ಭಗ್ನ, ಬಸವಣ್ಣನವರ ಭಾವಚಿತ್ರಕ್ಕೆ ಮಸಿಬಳಿದ ವಾಹನಗಳ ಮೇಲೆ ಕಲ್ಲುತೂರಾಟ ನಡೆಸಿರುವ ಎಂಇಎಸ್ ಕಿಡಿಗೇಡಿಗಳನ್ನು ಬಂಧಿಸಿರುವ ವ್ಯಕ್ತಿಗಳನ್ನು ಗಡಿಪಾರು ಮಾಡಬೇಕೇಂದು ಆಗ್ರಹಿಸಿ ನಗರದಲ್ಲಿ ಕನ್ನಡಪರ ಸಂಘಟನೆಗಳ ವತಿಯಿಂದ ನಗರದ ಭುವನೇಶ್ವರಿ ವೃತ್ತದಲ್ಲಿ ಅಣಕು ಪಾದರಕ್ಷೆ ಚಳವಳಿ ನಡೆಯಿತು.
ಕರ್ನಾಟಕ ಸೇನಾಪಡೆ ರಾಜ್ಯಾಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ರಾಜ್ಯದ ಗಡಿಜಿಲ್ಲೆ ಬೆಳಗಾವಿಯಲ್ಲಿಬಸವಣ್ಣನವರ ಭಾವಚಿತ್ರಕ್ಕೆ ಮಸಿಬಳಿದ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಅವರ ಪ್ರತಿಮೆಯನ್ನು ಎಂಇಎಸ್ ಪುಂಡರು ಭಗ್ನಗೊಳಿಸಿದ್ದಾರೆ, ಸಾರ್ವಜನಿಕ ವಾಹನಗಳ ಮೇಲೂಕಲ್ಲುತೂರಾಟ ನಡೆಸಿ ಅಪಾರ ಹಾನಿಮಾಡಿದ್ದಾರೆ. ಅಲ್ಲದೇ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕನ್ನಡಧ್ವಜಕ್ಕೆ ಬೆಂಕಿಹಾಕಿ, ಕನ್ನಡಿಗರ ಸ್ವಾಭಿಮಾನವನ್ನೇ ಕೆಣಕಿದ್ದಾರೆ. ಎಂಇಎಸ್ ಪುಂಡರನ್ನು ಬಂಧಿಸಿರುವವರನ್ನು ಕೂಡಲೇ ಸರಕಾರ ಉಗ್ರಶಿಕ್ಷೆಗೊಳಪಡಿಸಬೇಕು, ಅವರನ್ನು ಗಡಿಪಾರ್ ಮಾಡಬೇಕು ಎಂಇಎಸ್ ಸಂಘಟನೆ ನಿಷೇಧಿಸಬೇಕು, ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ವಜಾಮಾಡಬೇಕು ಎಂದು ಆಗ್ರಹಿಸಿದರು.
ನಿಜಧ್ವನಿಗೋವಿಂದರಾಜು, ಗಡಿನಾಡು ಕನ್ನಡ ರಕ್ಷಣಾವೇದಿಕೆ ಚಾ,ರ ಕುಮಾರ್ ರಾಜು ಪಣ್ಯದ ಹುಂಡಿ ತಾಂಡವಮೂರ್ತಿ, ನಾಗೇಶ್,ಕುಮಾರ್ ಇತರರು ಭಾಗವಹಿಸಿದ್ದರು.
