*ಚೈತನ್ಯ ಪ್ರಭುವಿನ ಪೂರ್ಣಮಿಯಂದು ಚಿಮ್ಮಿದ ಚೈತನ್ಯ*

ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಜಯನಗರದಲ್ಲಿರುವ ಇಸ್ಕಾನ್ ನವಬೃಂದಾವನ ದೇವಾಲಯದಲ್ಲಿ  ಪೂರ್ಣಿಮೆ ಅರ್ಥಾತ್ ಚೈತನ್ಯ ಮಹಾಪ್ರಭುಗಳ ಅವತಾರವೆತ್ತಿದ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಬೆಳಗ್ಗೆಯೇ ನಗರ ಸಂಕೀರ್ತನೆ ಕಾರ್ಯಕ್ರಮವು ಇಸ್ಕಾನ್ ನಿಂದ ಹೊರಟು ಅಕ್ಕಪಕ್ಕದ ರಸ್ತೆಗಳಲ್ಲಿ ಭಕ್ತಸಮೂಹವು ಹರೇಕೃಷ್ಣ ಸಂಕೀರ್ತನೆಯನ್ನು ಹಾಡುತ್ತಾ ಕುಣಿಯುತ್ತ ಶ್ರೀ ಅಮೋಘಲೀಲಾ ಪ್ರಭುಗಳ ಕಂಠದಿಂದ ಹೊಮ್ಮುತ್ತಿದ್ದ ಗಾನವು ಇಡಿಯ ವಾತಾವರಣದಲ್ಲಿ ಚೈತನ್ಯ ಪ್ರಭೆಯನ್ನು ಹರಡಿಸಿದ್ದು ರೋಮಾಂಚನಕಾರಿಯಾಗಿತ್ತು.
ಈ ಗೌರ ಪೂರ್ಣಿಮಾ ಅಂಗವಾಗಿ ಆಚರಣೆಯು ಉಪವಾಸ ವ್ರತದೊಂದಿಗೆ ಭಕ್ತಿ ಭಾವದಲ್ಲಿ ಮಿಂದ ನೂರಾರು ಭಕ್ತರ ಶಕ್ತಿಯು ನೋಡಲು ವಿಶಿಷ್ಟವಾಗಿತ್ತು. ಸಂಜೆ ಅಭಿಷೇಕ ಮತ್ತು ಪೂಜೆ ಹಾಗೂ ಅಹಂ ಭಕ್ತ ಪರಾಧೀನಂ ಎಂಬ ನಾಟಕವನ್ನು ಇಸ್ಕಾನ್ ನ ಯುವಕರ ಫೋಕ್ ಫ್ರೆಂಡ್ಸ್ ಆಫ್ ಲಾರ್ಡ್ ಕೃಷ್ಣ ತಂಡವು ಅದ್ಭುತವಾಗಿ ಕಣ್ಮುಂದೆ ತೆರೆದಿಟ್ಟರು. ಇದಾದ ಬಳಿಕ ಪಲ್ಲಕಿ ಉತ್ಸವ ಸಂಕೀರ್ತನೆಯಲ್ಲಿ ಭಕ್ತರು ಪ್ರಭುಗಳ ಜೊತೆಯಲ್ಲಿ ಜಿಗಿದು ಜಗಮಗಿಸುತ್ತಾ ಚೈತನ್ಯ ಮಹಾಪ್ರಭುಗಳನ್ನು ನೆನೆಯುತ್ತ ಕೊನೆಯಲ್ಲಿ ಪ್ರಸಾದ ಮತ್ತು ಚರಣಾಮೃತ ಸರ್ವರಿಗೂ ದೊರಕಿತು ಹೀಗೆ ಇಸ್ಕಾನ್ ದೇವಾಲಯದಲ್ಲಿ ಚೈತನ್ಯವು ಚಿಮ್ಮಿತು.

By admin