ಕೂರ್ಗ್ ಅನ್ನು ಆಕರ್ಷಿಸಿದ ಸಿಜಿಎಲ್-ಎನ್‌ಆರ್ ಓಪನ್ ಗಾಲ್ಫ್ ಚಾಂಪಿಯನ್‌ಶಿಪ್ ೨೦೨೧
~ ಈ ಪ್ರದೇಶದ ೧೫೦ಕ್ಕೂ ಹೆಚ್ಚಿನ ಗಾಲ್ಫ್ ಉತ್ಸಾಹಿಗಳು ಈ ಮುಕ್ತ ಗಾಲ್ಫ್ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಿದ್ದರು.
ಡಿಸೆಂಬರ್ ೨೧, ೨೦೨೧ :- ಅಗರಬತ್ತಿಯಿಂದ ವೈಮಾನಿಕ ಕ್ಷೇತ್ರದವರೆಗೆ ಹರಡಿರುವ ಸಮೂಹವಾದ ಎನ್‌ಆರ್ ಗ್ರೂಪ್ ಈಗ ಡಿಸೆಂಬರ್ ೧೯, ೨೦೨೧ರಂದು ಕೂರ್ಗ್ ಗಾಲ್ಫ್ ಲಿಂಕ್ಸ್‌ನಲ್ಲಿ ನಡೆದ ಸಿಜಿಎಲ್-ಎನ್‌ಆರ್ ಗಾಲ್ಫ್ ಓಪನ್ ೨೦೨೧ರ ವಿಜೇತರನ್ನು ಪ್ರಕಟಿಸಿದೆ. ಡಿಸೆಂಬರ್ ೧೮ ಮತ್ತು ಡಿಸೆಂಬರ್ ೧೯ ಎರಡು ದಿನಗಳ ಕಾಲ ನಡೆದ ಈ ಚಾಂಪಿಯನ್‌ಶಿಪ್ ಅನ್ನು ಕೂರ್ಗ್ ಗಾಲ್ಫ್ ಲಿಂಕ್ಸ್, ವಿರಾಜಪೇಟೆಯಲ್ಲಿ ಆಯೋಜಿಸಲಾಗಿತ್ತು.

೧೪ ವರ್ಗಗಳಲ್ಲಿ ಸುಮಾರು ೧೫೦ ಗಾಲ್ಫ್ ಉತ್ಸಾಹಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಎನ್‌ಆರ್ ಗ್ರೂಪ್‌ನ ವ್ಯವಸ್ಥಾಪಕ ಪಾಲುದಾರರಾದ ಅರ್ಜುನ್ ರಂಗಾ ಅವರು ವಿಜೇತರಿಗೆ ಟ್ರೋಫಿಗಳನ್ನು ನೀಡಿದರು. ಕೆ.ಎ. ಭರತ್ ಮಂದಣ್ಣ, ಕ್ಯಾಪ್ಟನ್ ಸಿಜಿಎಲ್, ಮೇಜರ್ ಬಿ.ಎ. ನಂಜಪ್ಪ, ಗೌರವಾನ್ವಿತ ಕಾರ್ಯದರ್ಶಿ, ಸಿಜಿಎಲ್ ಮತ್ತು ಕೆ.ಯು. ವಿಕ್ರಾಂತ್, ಟೂರ್ನಮೆಂಟ್ ಉಪಸಮಿತಿ ಚೇರ್‍ಮನ್ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.
ಎನ್‌ಆರ್ ಗ್ರೂಪ್‌ನ ವ್ಯವಸ್ಥಾಪಕ ಪಾಲುದಾರರಾದ ಅರ್ಜುನ್ ರಂಗಾ ಅವರು ವಿಜೇತರ ಹೆಸರುಗಳನ್ನು ಪ್ರಕಟಿಸುತ್ತಾ, ಮಾತನಾಡಿ, ವರ್ಷದಿಂದ ವರ್ಷಕ್ಕೆ ಸಿಜಿಎಲ್-ಎನ್‌ಆರ್ ಗಾಲ್ಫ್ ಓಪನ್ ಗಾಲ್ಫ್ ಚಾಂಪಿಯನ್‌ಶಿಪ್ ಹೆಚ್ಚು ದೊಡ್ಡದಾಗಿ ಮತ್ತು ಉತ್ತಮವಾಗಿ ಬೆಳೆಯುತ್ತಿರುವುದನ್ನು ವೀಕ್ಷಿಸುವುದು ನಮ್ಮ ಅತ್ಯಂತ ದೊಡ್ಡ ಸಾಧನೆಯಾಗಿದೆ. ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುವಿಕೆಯು ಈ ಆಟವನ್ನು ಎಲ್ಲ ಮಟ್ಟಗಳಲ್ಲಿ ದೃಢಪಡಿಸುವ ನಮ್ಮ ಗುರಿಯೊಂದಿಗೆ ಮುಂದುವರಿಯಲು ನಮಗೆ ಪ್ರೇರೇಪಣೆ ನೀಡುತ್ತದೆ. ವಿಜೇತರನ್ನು ನಾವು ಅಭಿನಂದಿಸುತ್ತೇವೆ. ಈ ಟೂರ್ನಿಯನ್ನು ಯಶಸ್ವಿಗೊಳಿಸಿದ್ದಕ್ಕಾಗಿ ಎಲ್ಲಾ ಭಾಗವಹಿಸಿದವರಿಗೆ ನಾವು ವಂದನೆ ಸಲ್ಲಿಸುತ್ತೇವೆ'' ಎಂದರು.
ಈ ಸಂದರ್ಭದಲ್ಲಿ ಸಿಜಿಎಲ್‌ನ ಕ್ಯಾಪ್ಟನ್ ಭರತ್ ಮಂದಣ್ಣ ಅವರು ಮಾತನಾಡಿ,
ಪ್ರಾಯೋಜಕತ್ವದ ಮೂಲಕ ಗಾಲ್ಫ್ ಆಟವನ್ನು ವಿಸ್ತಾರವಾಗಿ ಬೆಂಬಲಿಸುವುದಕ್ಕೆ ಮತ್ತು ರಾಷ್ಟ್ರಮಟ್ಟದ ಟೂರ್ನಿಗಳನ್ನು ಆಯೋಜಿಸಿದ್ದಕ್ಕೆ ಎನ್‌ಆರ್ ಸಮೂಹಕ್ಕೆ ನಾವು ನಮ್ಮ ಕೃತಜ್ಞತೆ ಸಲ್ಲಿಸಲು ಇಚ್ಚಿಸುತ್ತೇವೆ. ಸಿಜಿಎಲ್-ಎನ್‌ಆರ್ ಓಪನ್ ಗಾಲ್ಫ್ ಚಾಂಪಿಯನ್‌ಶಿಪ್ ಎಲ್ಲಾ ಉತ್ಸಾಹಿಗಳಿಗೆ ವೇದಿಕೆಯಾಗಿರುತ್ತದೆ. ಭವಿಷ್ಯದಲ್ಲಿ ಈ ಕ್ರೀಡೆಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸಲು ಮುಂದೆ ಬರುವುದನ್ನು ನಾವು ನೋಡಲು ಇಚ್ಛಿಸುತ್ತೇವೆ” ಎಂದರು.
ಮುಕ್ತ ಆಹ್ವಾನದ ಟೂರ್ನಿಯಿಂದ ಇದಾಗಿದ್ದು, ಮೈಸೂರು, ಬೆಂಗಳೂರು, ಕೂರ್ಗ್, ಚಿಕ್ಕಮಗಳೂರು, ಊಟಿ, ಯುಕೆ ಮತ್ತು ಕೊಡೆಯಿಕೆನಾಲ್‌ಗಳಿಂದ ಬಂದ ಗಾಲ್ಫ್‌ರ್‌ಗಳು ಸಕ್ರಿಯವಾಗಿ ಭಾಗವಹಿಸಿದ್ದರು.