ಸರಗೂರು: ತಾಲೂಕಿನ ಬಿ.ಮಟಕೆರೆ ಗ್ರಾಮ ಪಂಚಾಯಿತಿಗೆ ನೂತನವಾಗಿ ಆಯ್ಕೆಗೊಂಡ ಸದಸ್ಯರಿಗೆ ರೀಟರ್ನಿಂಗ್ ಅಧಿಕಾರಿಗಳಾದ ಜಯರಾಂ, ಪವನ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎನ್.ನಾಗರಾಜ್ ಅವರು ಪ್ರಮಾಣ ಪತ್ರ ವಿತರಿಸಿದರು.
ನಂತರ ಮಾತನಾಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎನ್.ನಾಗರಾಜು, ನೂತನ ತಾಲೂಕು ಸರಗೂರಿನಲ್ಲಿಯೇ ಬಿ.ಮಟಕೆರೆ ಪಂಚಾಯಿತಿಯೂ ವಿಸ್ತೀರ್ಣದಲ್ಲಿ ತುಂಬಾ ಅಗಲವಾಗಿದ್ದು, 33 ಗ್ರಾಮಗಳು ಒಳಪಡಲಿವೆ. ಹೀಗಾಗಿ ನೂತನ ಸದಸ್ಯರು ಗ್ರಾಮಗಳ ಅಭಿವೃದ್ಧಿಗೆ ಸಹಕಾರ ನೀಡಬೇಕು. ಜತೆಗೆ ಗ್ರಾಮಗಳ ಅಭಿವೃದ್ಧಿಗೆ ಪೂರಕವಾದ ಸಲಹೆಗಳ್ನು ನೀಡಬೇಕು ಎಂದು ತಿಳಿಸಿದರು.
ಈಗಾಗಲೇ ಪಂಚಾಯಿತಿಯಿಂದ ಹಲವು ಅಭಿವೃದ್ಧಿ ಚಟುವಟಿಕೆಗಳನ್ನು ನಾನಾ ಕಾರ್ಯಕ್ರಮಗಳ ಯೋಜನೆಯಡಿ ಮಾಡಲಾಗಿದೆ. ಇದೇ ರೀತಿ ಮುಂದುವರಿಸಲು ಎಲ್ಲರೂ ಪಾಲ್ಗೊಳ್ಳಬೇಕು. ಮೂಲ ಸೌಲಭ್ಯ ಕೊರತೆ ಕಂಡು ಬಂದಲ್ಲಿ ಅಧಿಕಾರಿಗಳ ಗಮನಕ್ಕೆ ತಂದು ಸೌಲಭ್ಯ ಒದಗಿಸಿಕೊಡಲು ಯತ್ನಿಸಬೇಕು. ಇಲ್ಲವಾದಲ್ಲಿ ಮತದಾರರಿಗೆ ಮೋಸ ಮಾಡಿದಂತಾಗಲಿದೆ ಎಂದು ಅವರು ಹೇಳಿದರು.
ಬಿ.ಮಟಕೆರೆ ಗ್ರಾಮ ಪಂಚಾಯಿತಿ ಸದಸ್ಯರಾದ ಹಿರೇಹಳ್ಳಿ ದೇವದಾಸ್, ಬಸವರಾಜು ಮೊಳೆಯೂರು, ಕುರ್ಣೇಗಾಲ ಬೆಟ್ಟಸ್ವಾಮಿ, ನಾಗೇಶ್, ನಾಗೇಂದ್ರ, ಭಾರತಿಜಿನ್ನಪ್ಪ, ಅಜೀತ್‍ಕುಮಾರ್, ಸುಮತಿ, ಮೀನಾಕುಮಾರಿ, ವಿನೋದ, ನಾಗಯ್ಯ, ರತ್ನಮ್ಮ, ಅಶ್ವಿನಿ, ಸೋಮ, ರತ್ನಯ್ಯ, ಚಿನ್ನಮ್ಮ, ಕಾಳಸ್ವಾಮಿ, ನಾಗರತ್ನ, ರೂಪಬಾಯಿ, ಬೊಮ್ಮ, ರಾಣಿಬಾಯಿ, ಸುನೀತಾಬಾಯಿ, ಎಚ್.ಕೃಷ್ಣ, ಗೌರಿಬಾಯಿ ಅವರು ಪಂಚಾಯಿತಿ ಸದಸ್ಯತ್ವದ ಪ್ರಮಾಣ ಪತ್ರ ಪಡೆದರು.

By admin