ಆ ದಿನ, ಅಕ್ಟೋಬರ್ 30.1920ರ ರಾತ್ರಿ ಮಾರನೇ ದಿನ ತರಗತಿಗೆ ಮೆದೋಜೀರಕ ಗ್ರಂಥಿ ಹಾಗೂ ಮಧುಮೇಹವೆಂಬ ವಿಷಯದ ಬಗ್ಗೆ ತಯಾರಿ ನಡೆದಿತ್ತು. ಅದುವರೆಗೂ ಬಹಳಷ್ಟು ವಿಜ್ಞಾನಿಗಳು ಆ ವಿಷಯವಾಗಿ ಸಂಶೋಧನೆ ನಡೆಸಿದ್ದರು. ಆದರೆಯಾರಿಗೂ ಮೇದೋಜಿರಕ ಗ್ರಂಥಿಯಿಂದ ಅದರ ದ್ರವ್ಯವನ್ನು ಬೇರ್ಪಡಿಸುವುದು ಹೇಗೆಂದು ತಿಳಿದಿರಲಿಲ್ಲ.
ನಿದಿರೆ ಬಾರದ ರಾತ್ರಿಯದು, ಸಮಯ 12ನ್ನೂ ದಾಟಿ ಮಾರನೇ ದಿನಕ್ಕೆ (ಅಕ್ಟೋಬರ್ 31) ಸಾಗಿತ್ತು. ಯೋಚಿಸುತ್ತಿದ್ದಂತೆ, ವಿಫಲತೆಕಂಡ ಆ ಪ್ರಯೋಗದ ಹೊಸ ವಿಧಾನ ಕಿಡಿಯೊಂದು ಮನದಲ್ಲಿ ಹಚ್ಚಿಕೊಂಡಿತ್ತು. ಕ್ಷಣಕ್ಷಣಕ್ಕೂ ಅವರ ಕುತೂಹಲವನ್ನು ಹೆಚ್ಚಿಸಿತ್ತು. “ಕೆಲವು ವಿಚಾರಧಾರೆಗಳೇ ಹಾಗೆ, ಕುತೂಹಲದೊಡನೆ ಇತಿಹಾಸದ ಸೃಷ್ಠಿಗೆ ಬುನಾದಿ ಹಾಕಿಬಿಡುತ್ತವೆ”. ಸಾಧನೆಯಡೆಗೆ ಸಾಧಿಸಬಯಸುವವರ ಬಂಡವಾಳವೇ ಅದು ಧೃಢಮನಸ್ಸು, ಮನಸ್ಸಿಗೆ ಅನಿಸಿದ್ದನ್ನು ಸಾಧಿಸಿಯೇ ಬಿಡಬೇಕೆಂಬ ಹುಚ್ಚು ಹಂಬಲ. ಬೆಳಗಾಗುತ್ತಿದ್ದಂತೆ ಅದನ್ನು ತನ್ನವರೊಡನೆ ಚರ್ಚಿಸಬೇಕೆಂದುಕೊಂಡ, ಅವರೇ ಫ್ರೆಡೆರಿಕ್ ಬ್ಯಾಂಟಿಂಗ್”.
ಫ್ರೆಡೆರಿಕ್ ಬ್ಯಾಂಟಿಂಗ್ ಕೆನೆಡಿಯನ್ ವೈಧ್ಯವಿಜ್ಞಾನಿ. ಕೆಲವು ವರ್ಷಗಳ ಕಾಲ ಸೇನೆಯಲ್ಲಿ ಸೇವೆಸಲ್ಲಿಸಿ ಹೊರಬಂದ ನಂತರ, ತನ್ನ ಪ್ರೈವೆಟ್ ಪ್ರಾಕ್ಟೀಸ್ ಸರಿರೂಪದ ತಾಳದ ಕಾರಣ, ವೆಸ್ಟರ್ನ್ ಒಂಟಾರಿಯೋ ಯುನಿವರ್ಸಿಟಿಯಲ್ಲಿ ಅರೆಕಾಲಕ ಬೋಧಕನಾಗಿ ಸೇರಿದ. ಮಾರನೇ ದಿನವೇ ಮೆದೋಜೀರಕ ಮತ್ತು ಮಧುಮೇಹ ಕುರಿತು ಉಪನ್ಯಾಸ ನೀಡಬೇಕಿತ್ತು.
ಈ ವಿಷಯವಾಗಿ ಚರ್ಚಿಸಲು ಫಿಜಿಯಾಲಜಿ ಪ್ರಾಧ್ಯಪಕನಾಗಿದ್ದ ಜಾನ್ ಮೆಕ್ಲಾಯ್ಡ್ ಆಫೀಸ್ನತ್ತ ಹೊರಟ. ತನ್ನ ಮನದಿಂಗಿತವನ್ನು ವ್ಯಕ್ತಪಡಿಸಿದಾಗ ಆ ವಿಷಯವಾಗಿ ಅನುಭವವೇ ಇಲ್ಲದ ಈತ ಏನತಾನೇ ಸಾಧಿಸಬಲ್ಲ ಎಂಬ ಅನುಮಾನದೊಡನೆ ಅದು ಸಲ್ಲದು ಎಂದುಬಿಟ್ಟರು. ಆದರೆ ಛಲಬಿಡದೆ ತನ್ನ ಆತ್ಮವಿಶ್ವಾಸದಿಂದ ಒಪ್ಪಸಿಯೇಬಿಟ್ಟರು.
ಶತಮಾನದ ಅಚ್ಚರಿಯ ಆವಿಸ್ಕಾರಕ್ಕೆ ಮೂಹರ್ತವೊಂದನ್ನು ದೃಢಕರಿಸಲಾಯಿತು, ಅಲ್ಲದೇ ಮೆಕ್ಲಾಯ್ಡ್ ತನ್ನ ಪ್ರಯೋಗಾಲಯವನ್ನು ಅದಕ್ಕೆ ಅಗತ್ಯವಾದಗ ಶ್ವಾನಗಳನ್ನು ಹಾಗೂ ಇಬ್ಬರು ಸಹಾಯಕರನ್ನು ನೀಡಲು ಒಪ್ಪಿಕೊಂಡ.
ಕೆಲ ದಿನಗಳಲ್ಲೆ ಪ್ರಯೋಗಾಲಯದಲ್ಲಿ ಸಂಶೋಧನೆ ಆರಂಭವಾಗಿತ್ತು. ಇಬ್ಬರಲ್ಲಿ ತನಗೆ ಬೇಕಿದ್ದ ಒಬ್ಬನೇ ಸಹಾಯಕ ಚಾರ್ಲ್ ಬೆಸ್ಟನ್ನ್ನು ಟಾಸ್ ಮಾಡುವುದರ ಮೂಲಕ ಆಯ್ಕೆ ಮಾಡಲಾಯಿತು. ಅಲ್ಲಿಗೆ ಚಾರ್ಲ್ ಬೆಸ್ಟನ್ ಜೀವನ ಪ್ರಮುಖ ಅಧ್ಯಾಯಕ್ಕೆ ಮುನ್ನುಡಿ ಬರೆದಿತ್ತು ಆ ಕ್ಷಣ…!!
ಮುಂದೆ ಸಮಯ, ಆಹಾರ, ನಿದಿರೆಯ ಪರವೆಯೇ ಇಲ್ಲದೆ, ಹಗಲಿರುಳು ಸಾಗಿತ್ತು. ಪ್ಯಾನ್ಕ್ರಿಯಾಸ್ ಮೇಲಿನ ಸಂಶೋಧನೆಗಳು. ಅದು ಸಫಲತೆಯನ್ನು ಕಂಡಿತ್ತು.
ಶ್ವಾನವೊಂದರಿಂದ ಪ್ಯಾನ್ಕ್ರಿಯಾಸ್ (ಮೇದೋಜೀರಕಗ್ರಂಥಿ) ಯನ್ನು ಹೊರತೆಗೆದು ಅದನ್ನು ಮಧುಮೇಹಕ್ಕೊಳಪಡಿಸಿ ಮತ್ತೊಂದು ಶ್ವಾನದಿಂದ ಪ್ಯಾನ್ಕ್ರಿಯಾಸ್ ದ್ರವ್ಯವನ್ನು ಬೇರ್ಪಡಿಸಿ, ಮಧುಮೇಹವುಳ್ಳ ಶ್ವಾನಕ್ಕೆ ನೀಡಿದಾಗ, ಅದು ಬಹಳ ದಿನಗಳವರೆಗೆ ಬದುಕುಳಿದು ಹೊಸಗಾಥೆಯನ್ನೆ ಬರೆಯಿತು. ನಂತರ ಇವರ ತಂಡಕ್ಕೆ ಕೆಮಿಸ್ಟ್ ಕೋಲಿಸ್ ಸೇರಿದಾಗ, ಶುದ್ಧರೀತಿಯಲ್ಲಿ ಇನ್ಸುಲಿನ್ನನ್ನು ಬೇರ್ಪಡಿಸಲಾಯಿತು. ಇವರೆಲ್ಲರ ಅವಿರತ ಶ್ರಮದಿಂದಾಗಿ ಜ.23.1922 ರಂದು ಟೈಪ್ 1 ಮಧುಮೇಹದಿಂದ ಬಳಲುತ್ತಿದ್ದ 14ನೇ ವರ್ಷದ ಲಿಯೋನಾರ್ಡ್ಥಾಮಸ್ ಇನ್ಸುಲಿನ್ ಪಡೆದ ಮೊದಲಿಗನಾದ. ಜೀವನ್ಮರಣ ಹೋರಾಟದಲ್ಲಿದ್ದ ಮತ್ತೊಬ್ಬ ಟೈಪ್ 1 ರ ಮಧುಮೇಹಿಯಾಗಿದ್ದ ನ್ಯೂಯಾರ್ಕ್ನ ಗವರ್ನರ್ ಮಗಳಾದ ಎಲಿಜೆಬತ್ ಹುಫ್ಗಾಸೆಟ್ಗೆ ಸ್ವರ್ಗವೇ ಸಿಕ್ಕಿದಂತಾಗಿತ್ತು. 1992ರ ಆಗಸ್ಟ್ನಲ್ಲಿ ಸ್ವತಃ ಫ್ರೆ .ಬೆಂಟಿಂಗ್ನಿಂದಲೇ ಶುಶ್ರೂಸೆ ಪಡೆದು ಯಶಸ್ವಿಪೂರ್ಣ ಜೀವನ ನಡೆಸಿ ತನ್ನ 73ನೇ ವಯಸ್ಸಿನಲ್ಲಿ ಹೃದಾಯಘಾತದಿಂದ ಮರಣ ಹೊಂದಿದಳು.
ಇನ್ಸುಲಿನ್ನ ಈ ಅಚ್ಚರಿಯ ಆವಿಷ್ಕಾರಕ್ಕಾಗಿ, ಬೆಂಟಿಂಗ್ ಹಾಗೂ ಮೆಕ್ಲಾಯ್ಢ್ಗೆ 1993 ರಂದು ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದನ್ನು ತಮ್ಮ ಸಹವರ್ತಿಗಳಾದ ಬೆಸ್ಟ್ ಹಾಗೂ ಕೋಲಿಪ್ನೊಡನೆ ಹಂಚಿಕೊಳ್ಳತ್ತಾ ಮಾನವೀಯತೆ ಮೆರೆದರು. ಅಲ್ಲದೆ ಇದುವರೆಗೂ ಅತೀ ಹೆಚ್ಚು ನೊಬೆಲ್ ಪ್ರಶಸ್ತಿಯನ್ನು ಇನ್ಸುಲಿನ್ ಮೇಲಿನ ವಿವಿಧ ಸಂಶೋಧನೆಗಳಿಗೆ ನೀಡಿರುವುದು ವಿಶೇಷ.
ನಂತರ ದಿನಗಳಲ್ಲಿ ಫ್ರೆ.ಬೆಂಟಿಂಗ್ ಬಹಳಷ್ಟು ಸಂಶೋಧನೆಗಳಲ್ಲಿ ತೊಡಗಿಕೊಂಡರು. ಏವಿಯೇಷನ್ ವಿಜ್ಞಾನದಲ್ಲೂ ಸೇವೆಸಲ್ಲಿಸಿದ ಬೆಂಟಿಂಗ್, 1941 ರ ಫೆಬ್ರವರಿಯಲ್ಲಿ ವಿಮಾನ ಅಪಘಾತಯೊಂದರಲ್ಲಿ ವಿಧಿವಶರಾದರು.
ಮಧುಮೇಹ ಕ್ಷೇತ್ರದಲ್ಲಿ ಇವರ ಸೇವೆಗೆ ಗೌರವಾರ್ಥವಾಗಿ ಐಡಿಎಫ್ ಸಂಸ್ಥೆಯು ಪ್ರತಿ ವರ್ಷ ಇವರ ಜನ್ಮದಿನವಾದ ನ. 14 ರಂದು ವಿಶ್ವ ಮಧುಮೇಹ ದಿನವನ್ನಾಗಿ, ವರ್ಷಕೊಂದು ಹೊಸ ಧ್ಯೇಯವಾಕ್ಯದೊಡನೆ ಆಚರಿಸುತ್ತಾ ಬಂದಿದೆ.
ಇವರ ಹೆಸರಿನಲ್ಲಿ ADA- ‘Banting Lecture ‘ಎಂದು ಪ್ರತಿವರ್ಷ ಏರ್ಪಡಿಸಲಾಗುತ್ತಿದೆ. ಅತ್ಯಂತ ಸುಪ್ರಸಿದ್ಧ ಮಧುಮೇಹ ಕ್ಷೇತ್ರ ಅಗಣಿತ ಸೇವೆ, ಸಂಶೋಧನೆ ಗೈದ ವ್ಯಕ್ತಿಗಳಿಂದ ಉಪನ್ಯಾಸ ನೀಡಲಾಗುವುದು.
ಬೆಂಟಿಂಗ್ ಆವಾರ್ಡ್:- ಕೆನಾಡದಲ್ಲಿ ಮಧುಮೇಹಕ್ಷೇತ್ರದಲ್ಲಿ ಸಾಧನೆಗಳಿಸಿದ ಮಹಾನುಭಾವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.
ಭರವಸೆಯಜ್ವಾಲೆ – Flame of Hope-ಮಧುಮೇಹಕ್ಕುಂಟೇ ಮುಕ್ತಿ…!
1989 ರಂದು ಕ್ವೀನ್ ಎಲಿಜೆಬತ್ ದ ಕ್ವೀನ್ ಮದರ್, ಫ್ರೆ.ಬ್ಯಾಂಟಿಂಗ್ನ ಸಾಧನೆಯ ಗೌರವಾರ್ಥವಾಗಿ ಹಾಗೂ ಮಧುಮೇಹದಿಂದ ಜೀವ ಕಳೆದುಕೊಂಡವರ ನೆನಪಿನಾರ್ಥವಾಗಿ ಲಂಡನ್ನ ಒಂಟೆರಿಯಾದಲ್ಲಿರುವ Sir. Frederick Banting Squard ನಲ್ಲಿ ದೀಪವೊಂದನ್ನು ಬೆಳಗಿದ್ದಾರೆ. ಎಂದಿಗೆ ಮಧುಮೇಹಕ್ಕೆ ಸಂಪೂರ್ಣ ಮುಕ್ತಿ ದೊರೆಯುವುದೊ, ಅಂದರೆ ಶಾಶ್ವತ ಪರಿಹಾರ ಸಿಗುವುದೋ ಅಂದಿಗೆ ಈ ದೀಪವು ಅದನ್ನು ಕಂಡು ಹಿಡಿದವರಿಂದ ನಂದಿಸಲ್ಪಡುತ್ತದೆ.
Time Capsule: ಫ್ರೆ. ಬೆಂಟಿಂಗ್ನ 100 ಜನುಮದಿನೋತ್ಸವದಂದು IDF ಪಕ್ಕದಲ್ಲೇ ಹೊತಿಡಲಾಗಿದ್ದು, ಮಧುಮೇಹ ಮುಕ್ತಿ ದೊರೆತರೆ ಅದನ್ನು ಹೊರತೆಗಿಯಲಾಗುವುದು.
ಆದಷ್ಟೂ ಬೇಗ ಅದು ಸಾಧ್ಯವಾಗಬೇಕೆಂಬುದೆ ನಮ್ಮೆಲ್ಲರ ಆಶಯ..!!
-ಡಾ.ರೇಣುಕಾಪ್ರಸಾದ್ ಎ.ಆರ್
ಮಧುಮೇಹ ತಜ್ಞರು,ನ್ಯೂ ಡಯಾಕೇರ್ ಸೆಂಟರ್ & ಪಾಲಿಕ್ಲಿನಿಕ್, ವಿ ವಿ ಮೊಹಲ್ಲ
ಮೈಸೂರು.