ವನಮಹೋತ್ಸವ ಸಪ್ತಾಹ ಆಚರಣೆ,ಕೊರೊನಾ ವಾರಿಯರ್ ಸನ್ಮಾನಿಸುವ ಹಾಗೂ ಆಹಾರಕಿಟ್ ಗಳನ್ನು ವಿತರಿಸುವ ಕಾರ್ಯಕ್ರಮ ಯಶಸ್ವಿಯಾಗಿ ಇಂದು ಜರುಗಿದೆ.ವನಮಹೋತ್ಸವ ದಿನಾಚರಣೆಯನ್ನು ಗಂಡ ಭೇರುಂಡ ಉದ್ಯಾನವನದಲ್ಲಿ ಗಿಡಗಳನ್ನು ನೆಡುವುದರ ಮೂಲಕ ಆಚರಿಸಲಾಯಿತು.ಸದರಿ ಕಾರ್ಯಕ್ರಮದ ಮೂಲಕ ಮುಂದಿನ ದಿನಗಳಲ್ಲಿ ಸಾವಿರಾರು ಗಿಡಗಳನ್ನು ನೆಡುವ ಯೋಜನೆಯನ್ನು ಹಮ್ಮಿಕೊಳ್ಳಲಾಯಿತು.ಸಭಾ ಕಾರ್ಯಕ್ರಮವು ಜಯಮ್ಮ-ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ಯಶಸ್ಸಿಯಾಗಿ ಜರುಗಿತು.
ಕಾರ್ಯಕ್ರಮದ ಮೊದಲಿಗೆ ಶ್ರೀ ನೀತು ನಿನಾದ್ ಯುವ ಗಾಯಕ ಪ್ರಾರ್ಥನೆ ಸಲ್ಲಿಸಿದರು. ಸ್ಪಂದನ ಅಧ್ಯಕ್ಷ ಎಂ.ಜಯಶಂಕರ್ ಸ್ವಾಗತ ಕೋರಿದರು.ನಂತರ ಡಾ.ಬಿ.ಸಿ .ರಾಯ್ ಅವರ ಭಾವ ಚಿತ್ರಕ್ಕೆ ಪುಷ್ಪನಮನಸಲ್ಲಿಸಲಾಯಿತು.ಸಮಾರಂಭದಲ್ಲಿ ಕೊರೊನಾ ವಾರಿಯರ್ ಗಳಾದಡಾ.ಕೆ ಆರ್.ಕುಮಾರಸ್ವಾಮಿ.,ಡಾ.ಸಿ.ಶರತ್ ಕುಮಾರ್,ಡಾ.ಬಿ.ಎಸ್ .ರಾಜ್ , ಡಾ .ದೀಪುಚೆಂಗಪ್ಪ.
ಚೆರಿಯಮನೆ ,ಡಾ.ಲಕ್ಷ್ಮಿಕಾಂತ್,ಬಿ.ಸಣ್ಣಕ್ಕಿ,ಡಾ.ಪ್ರಭುಲಿಂಗಸ್ವಾಮಿ ಎಂ.ಎಸ್, ಡಾ.ಪಲ್ಲವಿ ಪ್ರಭು,ಡಾ.ಅಮೂಲ್ಯ ಎಂ.ಟ, ಡಾ.ಎನ್ .ಎಂ.ಶ್ಯಾಂಸುಂದರ್ಡಾ.ಸಿ.ಎ.ಪದ್ಮ ಪ್ರಭು,ಸ್ಪಂದನ ಅಧ್ಯಕ್ಷ ಎಂ. ಜಯಶಂಕರ್ ರವರುಸಭೆಯಲ್ಲಿ ಮಾತನಾಡುತ್ತಾವೈದ್ಯೋ ನಾರಾಯಣೋ ಹರಿ: ಎಂದು ವೈದ್ಯರನ್ನುಸಾಕ್ಷಾತ್ ದೇವರು ಎಂದು ನೋಡುವ ಶ್ರೀಮಂತ ಸಂಸ್ಕೃತಿ ಭಾರತದ್ದು.ಮಾರಕವಾದ ಕೊರೊನಾ ಸೋಂಕಿತರಿಗೆ ವೈಯಕ್ತಿಕ ತ್ಯಾಗಗಳ ಜೊತೆಗೆ ಜೀವದ ಹಂಗನ್ನು ತೊರೆದು ಡಾ.ದೀಪು ಚೆಂಗಪ್ಪ ಚೆರಿಯಮನೆಯವರು 1500 ಕೊರೊನಾ ಒಳರೋಗಿಗಳಿಗೆ 3000 ಕೊರೊನಾ ಹೊರರೋಗಿಗಳಿಗೆ ಚಿಕಿತ್ಸೆ ನೀಡುವುದರ ಮೂಲಕ ಜೀವನದ ಸಾರ್ಥಕತೆಯ ಕ್ಷಣಗಳನ್ನು ಕಂಡು ಕೊಂಡಿದ್ದಾರೆಂದು ಹೇಳಿ ಅವರನ್ನು ಅಭಿನಂದಿಸಿ ಕೃತಜ್ಙತೆ ಸಲ್ಲಿಸಿಲಾಯಿತು.
ಡಾ.ಬಿ.ಎಸ್ ,ಜಯರಾಜ್ ರವರುನಿಸ್ವಾರ್ಥ ಸೇವೆ,ಸಮರ್ಪಣ ಮನೋಭಾವನೆ ಬೆಳೆಸಿಕೊಂಡು ಹಗಲಿರುಳು ಎನ್ನದೆ ಕೊರೊನಾ
ರೋಗಿಗಳಿಗೆ ಚಿಕಿತ್ಸೆ ನೀಡಿ ಕರ್ತವ್ಯ ಬದ್ಧತೆಯನ್ನುತೋರಿದ್ದಾರೆಂದು ಶ್ಲಾಘಿಸಿಅಭಿನಂದಿಸಿದರು.ಡಾ.ಅಮೂಲ್ಯ ಟಿ.ಎಂ ರವರು ಹೃದಯ ವೈಶಾಲ್ಯತೆ ಉಳ್ಳವರು ಹಾಗು ಕಷ್ಟದಲ್ಲಿದ್ದ ಕೊರೊನಾ ರೋಗಿಗಳ ಪರಿಸ್ಥಿತಿಗೆ ಕಂಬನಿ ಮಿಡಿದು ಸಹಾಯಹಸ್ತ ಚಾಚುವ
ಪ್ರಯತ್ನವನ್ನು ಮಾಡಿದ್ದಾರೆ.ಮೈಸೂರಿನ ಹಾಗೂ ಗ್ರಾಮಾಂತರದಲ್ಲಿರುವ ಕೊರೊನಾ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಆನ್ ಲೈನ್ ಮೂಲಕ ಮಾರ್ಗದರ್ಶನ ,ಚಿಕಿತ್ಸೆ ನೀಡಿ ಗುಣಪಡಿಸಿರುವುದನ್ನು ನಾನು ಮನಗಂಡಿದ್ದೀನೆ. ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಿ ಹೃದಯ ಪೂರ್ವಕ ಕೃತಜ್ಞತೆ ಸಲ್ಲಿಸಿದರು ಡಾ.ಲಕ್ಷ್ಮಿ ಕಾಂತ್ .ಬಿ .ಸಣ್ಣಕ್ಕಿ ಕೊರೊನಾ ರೋಗಿಗಳಿಗೆ ಕೋವಿಡ್ ಐಸಿಯುನಲ್ಲಿ 350 ಹೆಚ್ಚು,400ಹೊರ ರೋಗಿಗಳಿಗೆ,200 ಒಳರೋಗಿಗಳಿಗೆ ಜೀವದ ಭಯ ಇದ್ದರೂ ಚಿಕಿತ್ಸೆ ನೀಡಿರುವುದು ನಿಜಕ್ಕೂ ಶ್ಲಾಘನೀಯ , ಅಭಿನಂದಿಸಿ ಕೃತಜ್ಙತಾ ಪೂರ್ವಕ ನಮಸ್ಕಾರ ಸಲ್ಲಿಸಿದರು.ಡಾ.ಕೆ ಅರ್. ಕುಮಾರಸ್ವಾಮಿ, ರೇಡಿಯಾಲಜಿತಜ್ಞರು ಇವರು ಕೊರೊನಾ ಸಮಯದಲ್ಲೂ ಸಹ ಗರ್ಭಿಣಿಯರಿಗೆ ,ಇತರೆರೋಗಿಗಳಿಗೆ ಅಲ್ಟ್ರಾ ಸೌಂಡ್ ಸ್ಕ್ಯಾನ್ ಮಾಡಿಕೊಡುವುದರ ಮೂಲಕ ತಮ್ಮ ಕರ್ತವ್ಯಬದ್ಧತೆಯನ್ನು ನಿರ್ವಹಿಸಿದ್ದಾರೆ.ಶ್ರೀ ಯುತರು ಸರಳ ಸಜ್ಜನಿಕೆ ವ್ಯಕ್ತಿ,ಸ್ನೇಹಮಯಿ ಎಂದು ಶ್ಲಾಘಿಸಿದರು.ಡಾ.ಎನ್ ಎಂ.ಶ್ಯಾಮ ಸುಂದರ್ ಅವರು ಗ್ರಾಮೀಣ ಭಾಗದ ಕೊರೊನಾ ರೋಗಿಗಳಿಗೆ ಆನ್ ಲೈನ್ ಮೂಲಕ ಚಿಕಿತ್ಸೆ ನೀಡಿದ್ದು ಹಾಗೂ ಮೂರನೆ ಅಲೆಯ ಬಗ್ಗೆ ಜಾಗೃತಿ ಮೂಡಿಸುವ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ಕೊರೊನದಿಂದ ಮುಕ್ತ ಮಾಡಲುಶ್ರಮಿಸುತ್ತಿರುವುದನ್ನು ಅತ್ಯಂತ ನಮ್ರತೆಯಿಂದ ಶ್ಲಾಘಿಸಿ ಅಭಿನಂದಿಸಲಾಯಿತು.
ಡಾ.ಕೆ.ಆರ್ .ಕುಮಾರಸ್ವಾಮಿಯವರು ಸನ್ಮಾನ ಸ್ವೀಕರಸಿ ವೈದ್ಯರ ದಿನಾಚರಣೆಯ ಮಹತ್ವದ ಬಗ್ಗೆ ತಿಳಿಸಿಕೊಟ್ಟರು.ಎಲ್ಲಾ ಸನ್ಮಾನಿತ ವೈದ್ಯರೆಲ್ಲರೂ ಮಾತನಾಡಿ ಕೊರೊನಾದಿಂದಾದ ಸವಾಲುಗಳನ್ನು ಎದುರಿಸಿದಸಂದರ್ಭಗಳನ್ನು ಅವರದೇ ಆದ ಅಭಿಪ್ರಾಯಗಳು. ನಿರ್ವಹಿಸಿದ ರೀತಿಗಳ ಮಾಹಿತಿ ನೀಡಿದರು.ಮೂರನೇ ಅಲೆಯ ಬಗ್ಗೆ ಜಾಗೃತಿ ಮೂಡಿಸುವಮೂಲಕ ಎಲ್ಲರೂ ಎಚ್ಚರಿಕೆಯಿಂದ ಸರ್ಕಾರದಆದೇಶಗಳನ್ನು ಪಾಲಿಸುವಂತೆ ಒತ್ತಿ ಹೇಳಿದರು.ಹಾಗೂ ಸ್ಪಂದನ ಬಗ್ಗೆ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಇಬ್ಬರು ಆಟೋಚಾಲಕರಿಗೆ ಹಾಗೂ ಹತ್ತು ದಿನಕೂಲಿ ನೌಕರಿಗೆ ಒಟ್ಟು 12 ಆಹಾರ ಪದಾರ್ಥ ಕಿಟ್ ಗಳನ್ನುಸನ್ಮಾನಿತ ವೈದ್ಯರುಗಳಿಂದವಿತರಣೆ ಮಾಡಿಸಲಾಯಿತು.
ನಿರೂಪಣೆಯನ್ನು ಶ್ರೀಮತಿ ಪಲ್ಲವಿಯವರುಸಂಗೀತ ರಸ ಸಂಜೆಯನ್ನು ತ್ಯಾಗಿ ಮತ್ತು ತಂಡದವರು
ನಡೆಸಿಕೊಟ್ಟು ರಂಜಿಸಿದರು.ಕಡೆಯದಾಗಿ ಕೊರೊನಾ ಬಗ್ಗೆ ಸಂವಾದ ಕಾರ್ಯಕ್ರಮದಲ್ಲಿ ಡಾ.ಲಕ್ಷ್ಮಿಕಾಂತ್ ಬಿ . ಸಣ್ಣಕ್ಕಿ ,ಡಾ.ದೀಪು ಚೆಂಗಪ್ಪ ಚೆರಿಯಮನೆ ಭಾಗವಹಿಸಿ ಯಶಸ್ವಿಗೊಳಿಸಿದರು.ವನಮಹೋತ್ಸವ ಸಪ್ತಾಹದ ಆಚರಣೆಯಅಂಗವಾಗಿ ಸ್ಪಂದನದ ಸದಸ್ಯರುಗಳಿಗೆ ಹಾಗು ಅಭಿಮಾನಿಗಳಿಗೆ ಆಚರಿಸುವಂತೆ “ಮನೆಗೊಂದು ಮರ ದೇಶದ ಹಿತಕ್ಕೆ ವರ”ಎಂಬ ಘೋಷ ವಾಕ್ಯದ ಮುಖಾಂತರ ಕರೆಕೊಟ್ಟಿತ್ತು.ಇದಕ್ಕೆ ಸ್ಪಂದಿಸಿಮಳವಳ್ಳಿ ತಾ.ಕನ್ನಳ್ಳಿಯಿಂದ ಶ್ರೀಮತಿ ಅಂಬಿಕ ,ಹರ್ಷಿತಾ.ಧಾರವಾಡದಿಂದ ಶಾರದ ಕೌದಿ ಮತ್ತು ಸಿರಿ.ಕು.ಆಕ್ಷತಾ, ಶಿವಮೊಗ್ಗ ,ಮಧುಗುರಿಯಿಂದ ಕು.ಪೂರ್ವಿಕ್ ,ಮಾಗನೂರಿನಿಂದಶ್ರೀ ನಂಜಪ್ಪನವರು.ಮೈಸೂರಿನ ಜೆಎಸ್.ಎಸ್ ಬಡಾವಣೆಯ ನಿವೃತ್ತ ಪ್ರೊ.ಸಿದ್ಧರಾಮಯ್ಯ ಹಾಗೂಶ್ರೀ ನಿರಂಜನ್,ಶ್ರೀ ಕಾರ್ತಿಕ್ ನಂಜುಂಡ ಮುಂತಾದವರು ಭಾಗವಹಿಸಿ ಗಿಡಗಳನ್ನು ನೆಡುವುದರಮೂಲಕ ಯಶಸ್ವಿಗೊಳಿಸಿದರು.