ವಿ.ಕೆ.ಎಸ್ ಫ಼ೌಂಡೆಶನ್ ಹಾಗು ರಾಷ್ಟ್ರೀಯ ಹಿಂದೂ ಸಮಿತಿ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ಸಮಾನತೆ ದಿನವನ್ನು ನಗರದ ರಾಮಕೃಷ್ಣ ಆಸ್ಪತ್ರೆಯ ಸ್ವಚ್ಛತ ಹಾಗು ಭದ್ರತಾ ಸಿಬ್ಬಂದಿಗಳಿಗೆ ಗುಲಾಬಿ ಕೊಟ್ಟು ಹಾಗು ಪೋಸ್ಟರ್ ಇಡಿದು ಹೆಣ್ಣಿನ ಸಮಾನತೆಯ ಅರಿವನ್ನು ಮೂಡಿಸುವ ಮೂಲಕ ಆಚರಿಸಲಾಯಿತು

ಇದೇ ಸಂಧರ್ಭದಲ್ಲಿ ಯುವ ಮುಖಂಡ ವಿಕಾಸ್ ಶಾಸ್ತ್ರಿ ಮಾತನಾಡಿ “ಪ್ರತಿ ದಿನಾ ಹೆಣ್ಣಿನ ಮೇಲೆ ನಡೆಯುತ್ತಿರುವ ಶೋಷಣೆ ಅತ್ಯಾಚಾರವನ್ನು ನಾವು ನೋಡುತ್ತ ಬಂದ್ದಿದ್ದೇವೆ ಇನ್ನಾದರು ಹೆಣ್ಣಿನ ಮೇಲಾಗುತ್ತಿರುವ ಶೋಷಣೆಯನ್ನು ತಡೆಯುವ ನಿಟ್ಟಿನಲ್ಲಿ ಸಮಾಜ ನಡೆಯಬೇಕಿದೆ ಹೆಣ್ಣಿನ ಸಮಾನತೆ ಕಾಪಾಡುವುದು ಪ್ರತಿಯೋಬ್ಬ ಪುರುಷನ ಆದ್ಯ ಕರ್ತವ್ಯವಾಗಿದೆ ಹೆಣ್ಣು ಒಂದು ಶಕ್ತಿ ಆ ಶಕ್ತಿಯನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿದರೆ ಇಡೀ ದೇಶಕ್ಕೆ ಕೀರ್ತಿ ತರುತ್ತಾರೆ ಇತ್ತಿಚೆಗಷ್ಟೆ ಚಾಮುಂಡಿ ಬೆಟ್ಟದ ಬಳಿ ನಡೆದ ಅತ್ಯಾಚಾರವನ್ನು ಕಂಡರೆ ಈ ಮಹಿಳಾ ಸಮಾನತೆಯ ದಿನವನ್ನು ಕರಾಳದಿನ ಎನ್ನಬಹುದು ದಯಮಾಡಿ ಪೋಲಿಸ್ ಇಲಾಖೆ ಇತ್ತ ಗಮನ ಹರಿಸಿ ಮುಂದಿನ ದಿನಗಳಲ್ಲಿ ಈ ರೀತಿ ಪ್ರಕರಣ ಆಗದಂತೆ ತಡೆಗಟ್ಟಬೇಕು ಎಂದರು.

ನಂತರ ಮಾತನಾಡಿದ ರಾಜ್ಯ ಒಕ್ಕಲಿಗರ ಸಂಘದ ಅಭ್ಯರ್ಥಿ ಸತೀಶ್ ಗೌಡ”ದೇವರು ಪುರುಷ ಮತ್ತು ಮಹಿಳೆಯನ್ನು ಸೃಷ್ಟಿಸಿದಾಗ, ಮುಂದೆ ಮನುಷ್ಯನಿಗೆ ಜನ್ಮ ನೀಡುವ ಶಕ್ತಿಯನ್ನು ನಾನು ಯಾರಿಗೆ ನೀಡಬೇಕು?’ ಎಂಬ ಪ್ರಶ್ನೆ ಬಂದಾಗ ದೇವರು ಮಹಿಳೆಯನ್ನು ಆರಿಸಿಕೊಂಡನು ಮಹಿಳೆಯರು ಶಕ್ತಿಶಾಲಿಗಳು ಎಂಬುದಕ್ಕೆ ಇದು ದೊಡ್ಡ ಸಾಕ್ಷಿ.
ಲಿಂಗ ಸಮಾನತೆಯನ್ನು ಸಾಧಿಸಲು ಮಹಿಳೆಯರು ಮತ್ತು ಪುರುಷರು, ಹುಡುಗಿಯರು ಮತ್ತು ಹುಡುಗರ ದೃಢ ಸಂಕಲ್ಪದ ಅಗತ್ಯವಿದೆ. ಇದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.” ಎಂದರು

ಈ ಸಂಧರ್ಭದಲ್ಲಿ ರಾಷ್ಟ್ರೀಯ ಹಿಂದೂ ಸಮಿತಿಯ ನಗರಾಧ್ಯಕ್ಷ ಪ್ರದೀಪ್ ಕಾರ್ಯದರ್ಶಿ ತೇಜಸ್ ಗಗನ್ ಉಪಸ್ಥಿತರಿದ್ದರು

By admin