ಮಂಡ್ಯ: ಮಂಡ್ಯದಲ್ಲಿನ ಕೋವಿಡ್ ಐಸೊಲೇಷನ್ ವಾರ್ಡ್ ಗೆ ಸಿಸಿಟಿವಿ ಅಳವಡಿಕೆ ಮಾಡಿಸುವುದರ ಮೂಲಕ ಸೋಂಕಿತರ ರಕ್ಷಣೆ ಹಾಗೂ ಹಾರೈಕೆಗಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸಿ ನಾರಾಯಣಗೌಡ ವಿನೂತನ ವ್ಯವಸ್ಥೆ ಮಾಡಿದ್ದಾರೆ.
ಈ ಮೂಲಕ ಮಂಡ್ಯ ಮೆಡಿಕಲ್ ಕಾಲೇಜಿನಲ್ಲಿ ಐಸೋಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನ ಸಿಸಿಟಿವಿ ಯಲ್ಲಿ ವೀಕ್ಷಣೆ ಮಾಡಿದ್ದಾರೆ.
ಸೋಂಕಿತರಿಗೆ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲವೆಂಬ ಆರೋಪದ ಹಿನ್ನೆಲೆ, ಸೋಂಕಿತರ ಸಮಸ್ಯೆಗಳನ್ನು ಸಿಸಿ ಟಿವಿ ಮೂಲಕ ಆಲಿಸಲು ವಿನೂತನ ವ್ಯವಸ್ಥೆ ಮಾಡಿದ್ದಾರೆ.
ಕೋವಿಡ್ ರೋಗಿಗಳ ಚಿಕಿತ್ಸೆ ವಾರ್ಡ್ ಗೆ ಸಿಸಿಟಿವಿ ವ್ಯವಸ್ಥೆ ಮಾಡಿ ಸಿಇಓ ಹಾಗೂ ಎಸ್ಪಿ ಕಂಟ್ರೋಲ್ ಗೆ ಈ ಜವಾಬ್ದಾರಿಯನ್ನು ನೀಡಿದ್ದಾರೆ.
ಈ ಮೂಲಕ ಸಿಇಓ ಹಾಗೂ ಎಸ್ಪಿ ಕಂಟ್ರೋಲ್ ನಲ್ಲಿ ಐಸೋಲೇಷನ್ ವಾರ್ಡ್ ನಲ್ಲಿ ಸಿಸಿಟಿವಿ ಇದ್ದು, ಸೋಂಕಿತರ ಸಮಸ್ಯೆಗಳನ್ನು ಸಿಸಿ ಟಿವಿ ಯಲ್ಲಿ ಸಿಇಓ ದಿವ್ಯ ಪ್ರಭು ಹಾಗೂ ಎಸ್ಪಿ ಅಶ್ವಿನಿಯವರು ಆಲಿಸಿ ಸಮಸ್ಯೆಗಳನ್ನು ಬಗೆಹರಿಸಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಶಾಸಕ ಎಂ.ಶ್ರೀನಿವಾಸ್, ಡಿಎಚ್ ಓ ಮಂಚೇಗೌಡ, ಮಿಮ್ಸ್ ನಿರ್ದೇಶಕ ಡಾ.ಹರೀಶ್, ಸಿಇಓ ದಿವ್ಯ ಪ್ರಭು, ಎಸ್ಪಿ ಅಶ್ವಿನಿ ಭಾಗಿಯಾಗಿದ್ದರು.ಯಾಗಿದ್ದರು.

By admin