“ನನ್ನ ಕಣ್ಣಮುಂದೆ ಸುಳಿದಾಡುವ 21 ನೇ ಶತಮಾನದ ಶರಣರು ;ಬಸವಣ್ಣನವರ ಕಾಯಕ ಧರ್ಮವನ್ನು ವಚನ ಶ್ರೇಷ್ಠತೆಯನ್ನು ಅನುಸರಿಸುತ್ತಿರುವವರು.”
*ಲೇಖನ ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)* ೧೨ ನೇ ಶತಮಾನದ ಸಾಮಾಜಿಕ ಕ್ರಾಂತಿಯಲ್ಲಿ ಮನುಷ್ಯತ್ವದ ಅಸ್ಥಿತ್ವ ಸ್ಥಾಪಿಸುವುದು ಪ್ರಧಾನ ಗುರಿಯಾಗಿತ್ತು.ಇದರ ನೇತಾರರು ಬಸವಣ್ಣನವರು.ಇವರ ಅನುಯಾಯಿಗಳು ಸಮಾಜದ ವಿವಿಧ ಸ್ತರಗಳಲ್ಲಿ ಬದುಕುತ್ತಿದ್ದವರು.ಅನುಭವ ಮಂಟಪ ಮೇಲು ಕೀಲುಗಳಿಂದ ಮಡಿ ಮೈಲಿಗೆಗಳಿಂದ ಮುಕ್ತವಾದ ವಿಶ್ವದ ಮೊದಲ ದೇವಸ್ಥಾನವಾಗಿದೆ.ಅಲ್ಲಿ ಜನ…