Category: ರಾಜ್ಯ

ಕೇಂದ್ರ-ರಾಜ್ಯ ಸರ್ಕಾರದ ವಿರುದ್ಧ  ಗೌನ್ ಧರಿಸಿ ‘ಕೈ’ ಪ್ರತಿಭಟನೆ

ಮೈಸೂರು: ಕೇಂದ್ರ ಸರ್ಕಾರ ತೈಲ ಬೆಲೆ ಏರಿಕೆ ಮಾಡಿರುವುದು ಹಾಗೂ ರಾಜ್ಯ ಸರ್ಕಾರದ ವೈಫಲ್ಯವನ್ನು ಖಂಡಿಸಿ ನಗರದ ಮೆಟ್ರೋಪೋಲ್ ಸರ್ಕಲ್ ನಲ್ಲಿರುವ ಅರವಿಂದ ಪೆಟ್ರೋಲ್ ಬ್ಯಾಂಕ್ ಬಳಿ ಮೈಸೂರು ನಗರ (ಜಿಲ್ಲಾ) ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು. ಸರ್ಕಾರದ ವೈಫಲ್ಯಗಳ…

ಇಂಧನ ಬೆಲೆ ಏರಿಕೆಗೆ ಖಂಡನೆ: ಮೈಸೂರಿನ ಪೆಟ್ರೋಲ್‌ ಬಂಕ್‌ಗಳ ಬಳಿ ಯೂತ್ ಕಾಂಗ್ರೆಸ್ ಪ್ರತಿಭಟನೆ

ಯೂತ್ ಕಾಂಗ್ರೆಸ್ ವತಿಯಿಂದ ವಿದ್ಯಾರಣ್ಯಪುರಂನ ಮಾನಂದವಾಡಿ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಮುಂಭಾಗಪೆಟ್ರೋಲ್ ಮತ್ತು ಡೀಸೆಲ್ ಹಾಗೂ ವಿದ್ಯುತ್ ದರ ಹಾಗೂ ದಿನನಿತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಯೂತ್ ಕಾಂಗ್ರೆಸ್ ವತಿಯಿಂದ ಪ್ರತಿಭಟಿಸಲಾಯಿತು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಯುವ ಮುಖಂಡರಾದ…

ಹಳ್ಳಿಗಳ  ಮನೆ ಅಂಗಳದಲ್ಲೇ ಆರೋಗ್ಯ ಕೇಂದ್ರ…!

ಮೈಸೂರು: ಗ್ರಾಮೀಣ ಪ್ರದೇಶಗಳಿಗೆ ವೈದ್ಯರ ತಂಡ ಭೇಟಿ ನೀಡುತ್ತಿದ್ದು ಇದೀಗ ಮನೆಮುಂದೆಯೇ ಆರೋಗ್ಯ ಕೇಂದ್ರ ನಿರ್ಮಾಣಗೊಂಡ ವಾತಾವರಣ ನಿರ್ಮಾಣವಾಗಿದೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ರೋಗದ ಲಕ್ಷಣವಿದ್ದರೂ ತಪಾಸಣೆಗಾಗಿ ವೈದ್ಯರ ಬಳಿಗೆ ತೆರಳದೆ ತಮಗೆ ತೋಚಿದ ಮಾತ್ರೆಗಳನ್ನು ಸೇವಿಸುವ ಪರಿಪಾಠ ಹೆಚ್ಚಿನ ಜನರಲ್ಲಿದೆ. ಇದರಿಂದಾಗಿ…

ದೇಗುಲದಲ್ಲಿದ್ದ ದೇವರ ತಾಳಿ ಸಹಿತ ಹುಂಡಿ ದೋಚಿದ ಕಳ್ಳರು

ಕೃಷ್ಣರಾಜಪೇಟೆ: ದೇಗುಲದ ಬಾಗಿಲನ್ನು ಮುರಿದು ಹುಂಡಿಯನ್ನು ಒಡೆದು ಅದರಲ್ಲಿ ಸಂಗ್ರಹವಾಗಿದ್ದ ನಗದು, ಅಮ್ಮನವರಿಗೆ ಧರಿಸಿದ್ದ ಒಂದು ಚಿನ್ನದ ತಾಳಿಯನ್ನು ದೋಚಿ ಪರಾರಿಯಾಗಿರುವ ಘಟನೆ ತಾಲೂಕಿನ ಬೂಕನಕೆರೆ ಹೋಬಳಿ ಮೋದೂರು ಗ್ರಾಮದ ಹೊರ ವಲಯದಲ್ಲಿರುವ ಶ್ರೀರಾಮಲಿಂಗೇಶ್ವರ ದೇವಾಲಯದಲ್ಲಿ ನಡೆದಿದೆ. ಕೋವಿಡ್‌ನ ಕಾರಣದಿಂದಾಗಿ ತಾಲೂಕಿನಾದ್ಯಂತ…

ರೈತರ ಮೂಗಿಗೆ ತುಪ್ಪ ಸವರಿದ ಸರ್ಕಾರ: ಕೋಡಿಹಳ್ಳಿ ಚಂದ್ರಶೇಖರ್

ಬೆಂಗಳೂರು: ಒಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ, ಮತ್ತೊಂದೆಡೆ ಅತ್ಯಲ್ಪ ಬೆಂಬಲ ಬೆಲೆ ನೀಡಿ ಸರ್ಕಾರ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್…

ಮೈಸೂರು ಭೂಮಾಫಿಯಾದ ತನಿಖೆಯಾಗಲಿ: ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಮೈಸೂರು ಜಿಲ್ಲಾಧಿಕಾರಿ ಮತ್ತು ಮಹಾನಗರ ಪಾಲಿಕೆ ಆಯುಕ್ತರಿಬ್ಬರ ನಡುವಿನ ಬೀದಿರಂಪ ಮತ್ತು ವರ್ಗಾವಣೆಗೆ ಭೂಮಾಫಿಯಾ ಕಾರಣವಾಗಿದ್ದರೆ ಸೂಕ್ತ ತನಿಖೆ ನಡೆಯಲಿ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಪುತ್ರ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದ್ದಾರೆ. ನಂಜನಗೂಡು ತಾಲೂಕು ವರುಣಾ ಕ್ಷೇತ್ರಕ್ಕೆ…

ಮೈಸೂರಿಗೆ ಹೆಚ್ಚಿನ ಲಸಿಕೆ ಒದಗಿಸಲು ಸಿಎಂಗೆ ಮನವಿ

ಮೈಸೂರು: ಮೈಸೂರಿನಲ್ಲಿ ಕೋವಿಡ್ ಲಸಿಕೆ ಹಾಕುವ ಕಾರ್ಯದಲ್ಲಿ ಶೇ 100ರಷ್ಟು ಸಾಧನೆ ಮಾಡುವ ಗುರಿ ಹೊಂದಿರುವುದರಿಂದ ಹೆಚ್ಚಿನ ಲಸಿಕೆ ಒದಗಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮನವಿ ಮಾಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಡೆಸಿದ ವೀಡಿಯೋ ಸಂವಾದದಲ್ಲಿ…

ಮೈಸೂರು ಎಸ್ಪಿ ಆರ್. ಚೇತನ್ ಅಧಿಕಾರ ಸ್ವೀಕಾರ

ಮೈಸೂರು: ಜಿಲ್ಲಾಧಿಕಾರಿ ಮತ್ತು ನಗರಪಾಲಿಕೆ ಆಯುಕ್ತರ ನಂತರ ಪೊಲೀಸ್ ವರಿಷ್ಠಾಧಿಕಾರಿ ಮತ್ತು ನಗರ ಉಪ ಪೊಲೀಸ್ ಆಯುಕ್ತ ರನ್ನು ವರ್ಗಾವಣೆ ಮಾಡಲಾಗಿದ್ದು, ನೂತನವಾಗಿ ನೇಮಕಗೊಂಡ ಪೊಲೀಸ್ ಅಧಿಕಾರಿಗಳು ಇದೀಗ ಅಧಿಕಾರ ಸ್ವೀಕರಿಸಿದ್ದಾರೆ. ಮೈಸೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು ಆ ಸಂಕಷ್ಟದ ನಡುವೆಯೇ…

ಓರಿಯಂಟ್ಬೆಲ್ ಟೈಲ್ಸ್ ಫಾರೆವರ್ ನ ಹೊಸ ವಿನ್ಯಾಸ ಬಿಡುಗಡೆ

ದೇಶದ ಪ್ರಮುಖ ಟೈಲ್ ಬ್ರಾಂಡ್ಗಳಲ್ಲಿ ಒಂದಾದ ಓರಿಯಂಟ್ಬೆಲ್ ಟೈಲ್ಸ್ ದಕ್ಷಿಣ ಭಾರತದ ಮಾರುಕಟ್ಟೆಗೆ ತಮ್ಮ ಫಾರೆವರ್ ಟೈಲ್ಸ್ ಶ್ರೇಣಿಯಲ್ಲಿ ಹೊಸ ವಿನ್ಯಾಸಗಳನ್ನು ಬಿಡುಗಡೆ ಮಾಡಿದೆ. ನಾವೀನ್ಯತೆ ಮತ್ತು ಸೃಜನಶೀಲತೆಯ ಸಂಯೋಜನೆಯಾದ ಈ ಶ್ರೇಣಿಯು ವಿಶೇಷವಾಗಿ ಸೂತ್ರೀಕರಿಸಿದ ಹೆಚ್ಚಿನ ಪ್ರತಿರೋಧ ಲೇಪನ ಹೊಂದಿದ್ದು,…

ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ ಮಾಡಿದರೆ ಕ್ರಮ

ಹಾಸನ: ರಸಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದ್ದು ಕಂಡು ಬಂದಲ್ಲಿ ಅಂತಹ ರಸಗೊಬ್ಬರ ಅಂಗಡಿ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದರ ಜೊತೆಗೆ ಅಂಗಡಿ ಪರವಾನಗಿ ರದ್ದುಪಡಿಸಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ ಜನಾರ್ಧನ್ ಎಚ್ಚರಿಕೆ ನೀಡಿದ್ದಾರೆ. ಬೇಲೂರು ಪಟ್ಟಣದಲ್ಲಿ ಕೆಲವು ಔಷಧಿ…

ಹಾಸನದ ಸಂತ ಜೋಸೆಫರ ವಿದ್ಯಾಸಂಸ್ಥೆಯಿಂದ ನೆರವು

ಹಾಸನ: ಕೊರೊನಾದ ಸಂಕಷ್ಟದ ಸಮಯದಲ್ಲಿ ಬಡವರ, ದಿನಕೂಲಿ ಮಾಡುವವರ ಕಷ್ಟಗಳನ್ನು ಅರಿತು ಸಂತ ಜೋಸೆಫರ ವಿದ್ಯಾಸಂಸ್ಥೆಯ ಸ್ಪಂದಿಸಿದೆ. ಈಗಾಗಲೇ ಸಹಾಯ ಹಸ್ತ ಚಾಚುವ ಕಾರ್ಯದಲ್ಲಿ ನಿರತವಾಗಿರುವ ಸಂಸ್ಥೆಯು ಸದಾ ಬಿಡುವಿಲ್ಲದ ಶೈಕ್ಷಣಿಕ ಚಟುವಟಿಕೆಗಳ ಮಧ್ಯದಲ್ಲೂ ಶಾಲಾ, ಕಾಲೇಜುಗಳು ಕೋವಿಡ್ ಸಂತ್ರಸ್ತರಿಗೆ ನೆರವು…

ಕೋವಿಡ್ ಸಮಯದಲ್ಲಿ ಆಸರೆಯಾದ ಸಮಾಜ ಕಲ್ಯಾಣ ನೌಕರರು

ಮಂಡ್ಯ: ಕೋವಿಡ್-19 ಸಂಕಷ್ಟದ ಸಮಯದಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಂಗೇಗೌಡರವರ ನೇತೃತ್ವದಲ್ಲಿ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ನೌಕರರು ಹಾಗೂ ಇತರೆ ದಾನಿಗಳಿಂದ ಸಂಗ್ರಹಿಸಿದ ಹಣದಲ್ಲಿ ಆಹಾರ ಕಿಟ್ ವಿತರಣೆ ಮಾಡಿ ಹಲವು ಕುಟುಂಬಗಳಿಗೆ ಆಸರೆಯಾಗಿದ್ದಾರೆ. ಬಹಳಷ್ಟು ಜನರು…

ಪೊಲೀಸ್ ಸಿಬ್ಬಂದಿಗೆ ಕಷಾಯ, ಬಾಳೆಹಣ್ಣು ಬನ್ ವಿತರಣೆ

ಮೈಸೂರು: ಕೋವಿಡ್ ಸೊಂಕು ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಕೊರೊನಾ ವಾರಿಯರ್ಸ್ ಗಳಾದ ಆರಕ್ಷಕರಿಗೆ ಅಪೂರ್ವ ಸ್ನೇಹ ಬಳಗದ ವತಿಯಿಂದ ಜೆ.ಎಲ್.ಬಿ ರಸ್ತೆಯಲ್ಲಿರುವ ಕೆ.ಆರ್. ಪೊಲೀಸ್ ಉಪವಿಭಾಗ ಆಯುಕ್ತರ ಕಚೇರಿ ಮತ್ತು ಕೆ.ಆರ್ ಸಂಚಾರಿ ಠಾಣೆಯ ಆರಕ್ಷಕ ಸಿಬ್ಬಂದಿಗೆ ಕಷಾಯ ಮತ್ತು ಆರ್ಗಾನಿಕ್…

ಎರಡು ವರ್ಷದೊಳಗೆ ಶಾಶ್ವತ ಕುಡಿಯುವ ನೀರು: ಡಾ. ನಾರಾಯಣಗೌಡ

ಮಂಡ್ಯ.: ಮಂಡ್ಯ ಜಿಲ್ಲೆಯ ಮೂರು ತಾಲೂಕಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಕಾಮಗಾರಿ ಮುಂದಿನ ಎರಡು ವರ್ಷದೊಳಗೆ ಮುಗಿಯುವುದರೊಂದಿಗೆ ಜನತೆಗೆ ನೀರು ತಲುಪಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ತಿಳಿಸಿದ್ದಾರೆ. ಜಲ ಜೀವನ್ ಮಿಷನ್ ಯೋಜನೆಯಡಿ ಹಾಗೂ ನಬಾರ್ಡ್…

ಪಾಂಡವಪುರದಲ್ಲಿ ಪತ್ರಕರ್ತರಿಗೆ ಗುರುತಿನ ಚೀಟಿ ವಿತರಣೆ

ಪಾಂಡವಪುರ: ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘ ಪಾಂಡವಪುರ ಘಟಕದ ಪದಾಧಿಕಾರಿಗಳಿಗೆ ೨೦೨೧-೨೨ನೇ ಸಾಲಿನ ಗುರುತಿನ ಚೀಟಿ (ಐಡೆಂಟಿಟಿ ಕಾರ್ಡ್) ವಿತರಿಸಲಾಯಿತು. ಪಟ್ಟಣದ ನೇಸರ ರೆಸ್ಟೋರೆಂಟ್‌ನಲ್ಲಿ ಸಂಘದ ಅಧ್ಯಕ್ಷ ವಿಶ್ವನಾಥ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಎಲ್ಲಾ ಪದಾಧಿಕಾರಿಗಳಿಗೂ ಗುರುತಿನ…