ಕನ್ನಡ ಸಂಸ್ಕೃತಿ.
-ಪ್ರೊ. ಹಾ.ತಿ ಕೃಷ್ಣೇಗೌಡ ಕನ್ನಡವೆನೆ ಕುಣಿದಾಡುವುದೆನ್ನೆದೆ ಕನ್ನಡವೆನೆ ಕಿವಿನಿಮಿರುವುದು ಕಾಮನಬಿಲ್ಲನು ಕಾಣುವ ಕವಿಯೊಲು ತೆಕ್ಕನೆ ಮನ ಮೈಮರೆಯುವುದು, ಇದು ಕುವೆಂಪು ಅವರ ಮಾತು. ಇವತ್ತಿನ, ಈ ಹತ್ತನೆಯ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಾವೆಲ್ಲ ಸೇರಿದ್ದೇವೆ. ಯಾವುದು ಚಿಕ್ಕದು, ಯಾವುದು ದೊಡ್ಡದು…