Category: ಕೋವಿಡ್19

ಕೆ.ಆರ್.ನಗರ ಆರೋಗ್ಯ ಇಲಾಖೆಗೆ ಐಸೋಲೇಷನ್ ಕಿಟ್ ಹಸ್ತಾಂತರ

ಕೆ.ಆರ್.ನಗರ: ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಕೊರೊನಾ ಸೋಂಕಿತರಾಗಿ ಹೋಮ್ ಐಸೋಲೇಷನ್‌ನಲ್ಲಿ ಇರುವವರಿಗೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಕೊಡ ಮಾಡಲಾಗುತ್ತಿರುವ ಐಸೋಲೇಷನ್ ಕಿಟ್‌ಗಳನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ತಾಲೂಕು ಆರೋಗ್ಯ ಇಲಾಖೆಗೆ ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ಅವರು ಜಿಲ್ಲಾ…

  ಕೊರೊನಾಕ್ಕೆ ಮದ್ದು ನೀಡುವ ಪ್ರಚಾರ ಮಾಡಿದರೆ ಕ್ರಮ

ಬೆಂಗಳೂರು: ಕೊರೊನಾ ಸಾಂಕ್ರಾಮಿಕ ರೋಗವನ್ನು ಗುಣಪಡಿಸಲಾಗುತ್ತದೆ ಎಂಬ ಸುಳ್ಳು ಆಶ್ವಾಸನೆ ನೀಡುವುದು ಹಾಗೂ ಮಾಧ್ಯಮಗಳಲ್ಲಿ ಪ್ರಚಾರ ಮಾಡುವುದು ಮಾಡಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದಾಗಿ ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿ ಎಚ್ಚರಿಕೆ ನೀಡಿದೆ. ಔಷಧಿ ನೀಡುವುದಾಗಿ ಪ್ರಚಾರ…

ಆರೋಗ್ಯವಾಗಿದ್ದರೆ ಮಾತ್ರ ಸುಖ ಜೀವನ: ಬಸವರಾಜ ಹೊರಟ್ಟಿ

ಬೆಂಗಳೂರು: ಮನುಷ್ಯನಿಗೆ ಎಲ್ಲ ಭಾಗ್ಯಗಳಿಗಿಂತ ಆರೋಗ್ಯ ಭಾಗ್ಯವೇ ಮುಖ್ಯವಾದುದು. ಆರೋಗ್ಯದಿಂದ ಇದ್ದಾಗ ಮಾತ್ರ ಜೀವನ ಎಲ್ಲ ಸುಖ ಸಂತೋಷಗಳನ್ನು ಅನುಭವಿಸಲು ಸಾಧ್ಯವಾಗುತ್ತದೆ ಎಂದು ಮಾನ್ಯ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ಹೇಳಿದರು. ಹುಬ್ಬಳ್ಳಿಯ ತಮ್ಮ ಜೀವನಾಡಿಯಾದ ನಿಸರ್ಗ ತೋಟದಲ್ಲಿ…

ಕೋವಿಡ್ ಪರಿಹಾರಕ್ಕೆ ಅರ್ಜಿ ಸಲ್ಲಿಕೆಗೆ ಕಲಾವಿದರಿಗೆ ಸಹಾಯವಾಣಿ

ಮೈಸೂರು: ಕರ್ನಾಟಕದಲ್ಲಿ ಲಾಕ್ ಡೌನ್ ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ಕಲಾವಿದರ ನೆರವಿಗೆಂದು ರಾಜ್ಯ ಸರ್ಕಾರ ಆರ್ಥಿಕ ಪರಿಹಾರ ಪ್ಯಾಕೇಜ್ ಅಡಿಯಲ್ಲಿ ತಲಾ 3000ರೂಗಳನ್ನು ಬಿಡುಗಡೆ ಮಾಡಿದ್ದು ಜೀವಧಾರ ಪದವೀಧರ ಘಟಕದ ವತಿಯಿಂದ ಅರ್ಹ 50 ಕಲಾವಿದರಿಗೆ ಅದರ ಸವಲತ್ತು ತಲುಪಿಸಲು ಸೇವಾ…

ಕೋವಿಡ್ ಪರೀಕ್ಷಿಸುವ ಕಿಟ್ ಸಂಶೋಧಿಸಿದ ಮೈವಿವಿ

ಮೈಸೂರು: ಸಾರ್ವಜನಿಕರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಮೈಸೂರುವಿಶ್ವವಿದ್ಯಾನಿಲಯದ ಸಂಶೋಧಕರ ನೆರವಿನೊಂದಿಗೆ ಹೈದರಾಬಾದ್ ಮೂಲದ ಕಂಪನಿಯೊಂದು ‘ಕೋವಿಡ್ -19 ‘ಪರೀಕ್ಷಿಸುವ ಅತ್ಯಂತ ಸರಳ ಹಾಗೂ ನೂತನ ಕಿಟ್ ಒಂದನ್ನು ಅಭಿವೃದ್ಧಿಪಡಿಸುವ ಮೂಲಕ ಗಮನಸೆಳೆದಿದೆ. ಈ ಕುರಿತಂತೆ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮಾಹಿತಿನೀಡಿದ್ದು…

ಮನೆ, ಮನೆಗೆ ಉಚಿತ ಮೆಡಿಕಲ್ ಕಿಟ್ ವಿತರಣೆ

ಮೈಸೂರು: ನರಸಿಂಹ ರಾಜ ಕ್ಷೇತ್ರದ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಉಚಿತವಾಗಿ ವಾರ್ಡ್ ನಂಬರ್ 35 ರ ವ್ಯಾಪ್ತಿಯ ರಾಘವೇಂದ್ರ ನಗರ ಕಾಲೋನಿಯಲ್ಲಿರುವ ಪ್ರತಿ ಮನೆಗೂ ಮೆಡಿಕಲ್ ಕಿಟ್ ಗಳನ್ನು ವಿತರಿಸಲಾಯಿತು. ಈ ಸಂದರ್ಭ ನಗರ ಭಾ.ಜ.ಪ. ಪ್ರಧಾನ ಕಾರ್ಯದರ್ಶಿ ಗಿರೀಧರ್…

ಜಾನಪದ ಕಲಾವಿದರಿಗೆ ನೆರವಾದ ಭಗತ್ ಸಿಂಗ್ ಬಳಗ

ಮೈಸೂರು: ಜಾನಪದ ಕಲೆಯನ್ನು ನಂಬಿ ಬದುಕುತ್ತಿರುವ ಕಲಾವಿದರ ಬದುಕು ಮೂರಾಬಟ್ಟೆಯಾಗಿದೆ. ಬೇಸಿಗೆ ದಿನಗಳಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅದರಿಂಧ ಬರುವ ಸಂಭಾವನೆಯಿಂದ ಜೀವನ ಸಾಗಿಸುತ್ತಿದ್ದ ನೂರಾರು ಜಾನಪದ ಕಲಾವಿದರು ಸಂಕಷ್ಟದಲ್ಲಿ ಜೀವನ ಸಾಗಿಸುವಂತಾಗಿದೆ. ಇಂತಹ ಕಲಾವಿದರನ್ನು ಹುಡುಕಿ ಅವರಿಗೆ ಜೀವನ ನಿರ್ವಹಣೆ…

ಚಾಮರಾಜನಗರದಲ್ಲಿ ಜೂ.14ರವರೆಗೆ ನಿಷೇಧಾಜ್ಞೆ ಮುಂದುವರಿಕೆ

ಚಾಮರಾಜನಗರ: ಚಾಮರಾಜನಗರದಲ್ಲಿ ಜೂ.14ರವರೆಗೆ ನಿಷೇಧಾಜ್ಞೆ ಮುಂದುವರಿಸಿ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಆದೇಶಿಸಿದ್ದಾರೆ. ಸಾರ್ವಜನಿಕರ ಸುರಕ್ಷತೆ ಹಾಗೂ ಆರೋಗ್ಯದ ಹಿತದೃಷ್ಠಿಯಿಂದ ಕೊರೊನಾ ವೈರಸ್‌ನ ಎರಡನೇ ಅಲೆ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ಸಿ.ಆರ್.ಪಿ.ಸಿ 1973…

ಕೃಷ್ಣರಾಜ ಕ್ಷೇತ್ರದ ಅಶೋಕ್ ಪುರಂನಲ್ಲಿ ಬಡವರಿಗೆ ಆಹಾರ ಕಿಟ್ ವಿತರಣೆ

ಮೈಸೂರು: ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ರಕ್ಷ ರಾಮಯ್ಯನವರು ಮೈಸೂರಿಗೆ ಆಗಮಿಸಿ ಕೃಷ್ಣರಾಜ ಕ್ಷೇತ್ರದ ಅಶೋಕ್ ಪುರಂನಲ್ಲಿ ಬಡವರಿಗೆ ಆಹಾರ ಕಿಟ್ ಗಳನ್ನು ಸೋಮವಾರ ವಿತರಿಸಿದರು. ಈ ವೇಳೆ ಮಾತನಾಡಿದ ಅವರು, ಸಂಕಷ್ಟದ ಈ ಕಾಲದಲ್ಲಿಯೂ ಎಲ್ಲವೂ ಸಕಾಲದಲ್ಲಿ ನೆರವೇರುತ್ತಿದ್ದು,…

ಯೋಗ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಆಹಾರ ಕಿಟ್‍ ವಿತರಣೆ

ಮೈಸೂರು: ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೊಳಗಾಗಿರುವ ಎರಡು ಸಾರ್ವಜನಿಕರಿಗೆ ಮೈಸೂರು ವಿಜಯನಗರದ ಶ್ರೀ ಯೋಗಾನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಆಹಾರ ಕಿಟ್‍ನ್ನು ವಿತರಿಸಲಾಯಿತು. ಈ ವೇಳೆ ಮಾತನಾಡಿದ ಶ್ರೀ ಪರಮ ಪೂಜ್ಯ ಶ್ರೀ ಭಾಷ್ಯಂ ಸ್ವಾಮೀಜಿ ಅವರು ದೇವಸ್ಥಾನಕ್ಕೆ ಜಾತಿ ಧರ್ಮ ಪಂಗಡ…

ಡಿಸಿಯಿಂದ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಕಾರ್ಯ ಪರಿಶೀಲನೆ      

ಚಾಮರಾಜನಗರ: ಸಂತೇಮರಹಳ್ಳಿ ಭಾಗದ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಲಸಿಕೆ ಕಾರ್ಯ ಹಾಗೂ ಕೋವಿಡ್ ಪರೀಕ್ಷೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಸಂತೇಮರಹಳ್ಳಿ ವ್ಯಾಪ್ತಿಯ ಕುದೇರು ಹಾಗೂ ಉಮ್ಮತ್ತೂರು ಆರೋಗ್ಯ ಕೇಂದ್ರಗಳಿಗೆ ಭೇಟಿ…

ಮೈಸೂರು ಡಿಸಿ ರೋಹಿಣಿ ಸಿಂಧೂರಿ-ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ವರ್ಗಾವಣೆ

ಬೆಂಗಳೂರು: ಮೈಸೂರಿನಲ್ಲಿ ನಡೆಯುತ್ತಿದ್ದ ಜಿಲ್ಲಾಧಿಕಾರಿ ಮತ್ತು ಪಾಲಿಕೆ ಆಯುಕ್ತೆ ನಡುವಿನ ಸಮರಕ್ಕೆ ವರ್ಗಾವಣೆ ಮೂಲಕ ಸರ್ಕಾರ ತೆರೆ ಎಳೆದಿದೆ. ಸದ್ಯ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್‌ರನ್ನು ವರ್ಗಾವಣೆ ಮಾಡಿ ಶನಿವಾರ ತಡರಾತ್ರಿ ಸರ್ಕಾರ ಆದೇಶ ಹೊರಡಿಸಿದೆ.…

ಮೈಸೂರಲ್ಲಿ ವಾರದ ಐದು ದಿನ ಲಾಕ್ ಡೌನ್ ತೆರವು

ಮೈಸೂರು: ಮೈಸೂರು ಜಿಲ್ಲೆಯಲ್ಲಿ ಜಾರಿಯಲ್ಲಿರುವ ವಾರದ ಐದು ದಿನಗಳ ಲಾಕ್‌ಡೌನ್ ಜೂ. 7ರ ನಂತರ ತೆರವುಗೊಳಿಸಿ ನಿತ್ಯ ಬೆಳಿಗ್ಗೆ 6ರಿಂದ 10ರ ವರೆಗೆ ಅಗತ್ಯ ವಸ್ತುಗಳ ಕೊಳ್ಳುವಿಕೆಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದ್ದಾರೆ. ಕೆ.ಆರ್.ನಗರ ತಾಲೂಕಿನ ಕೆಗ್ಗೆರೆ…

ಮನೆಯಲ್ಲಿಯೇ ವಾಕ್ ಮಾಡಿ ದಾಖಲೆ ಬರೆದ ವಕೀಲ ಶಂಕರಪ್ಪ

ಕೊರೊನಾ ಸೋಂಕಿಗೆ ತುತ್ತಾಗಿದ್ದ ಹಿರಿಯ ವಕೀಲ ವಿ. ಶಂಕರಪ್ಪ ಅವರ ಮನೆಯಲ್ಲಿಯೇ ವಾಕ್ ಮಾಡುವ ಮೂಲಕ ಊಹೆಗೂ ನಿಲುಕದ ದಾಖಲೆ ನಿರ್ಮಿಸಿ ಗಮನಸೆಳೆದಿದ್ದಾರೆ. ಅವರು 7 ದಿನಗಳಲ್ಲಿ 14 x 15 ಅಡಿ ಹಾಲ್ ನಲ್ಲಿ ಬರೋಬ್ಬರಿ 127 ಕಿ.ಮೀ. ದೂರ…

ಪರಿಸರ ಸಂರಕ್ಷಣೆ, ಜೀವಕುಲದ ರಕ್ಷಣೆ”-ಸಮಾಜ ಸೇವಕ ಡಾ.ಕೆ. ರಘುರಾಮ್ ವಾಜಪೇಯಿ

ಜು 5.ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಸುವರ್ಣ ಬೆಳಕು ಫೌಂಡೇಷನ್ ಹಾಗೂ ಹಿಮಾಲಯ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ಇಂದು ಬೆಳಗ್ಗೆ ರಾಮಕೃಷ್ಣನಗರದ ಯೋಗ ಉದ್ಯಾನವನ ಬಳಿಯ ಪತಂಜಲಿ ಸಸ್ಯಧಾಮದಲ್ಲಿಪರಿಸರ ಪ್ರೇಮಿಗಳು ಹಾಗೂ ಪ್ರಕೃತಿ ಸಂರಕ್ಷಣೆಯಲ್ಲಿ ತಮ್ಮದೇ ಆದ ರೀತಿಯಲ್ಲಿ ಸಾಧನೆಗೈದಿರುವ ಪ್ರಸನ್ನ ಮೂರ್ತಿ…