ಬೆಟ್ಟದಪುರ: 28 ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಹಲಗನಹಳ್ಳಿ ಗ್ರಾಮದ ಗುರುಶಿ ಗುರು ಪೀಠದಲ್ಲಿ ೨ನೇ ವರ್ಷದ ಪರಮಪೂಜ್ಯ ಶ್ರೀ ಹಜರತ್ ಖವಾಜಾ ಷಾ ಖುದ್ರತ್-ಉಲ್ಲಾ ಷಾ ಚಿಶ್ತಿ ಖಾದ್ರಿ ಶತ್ತಾರಿ(ರ.ಅ) ರವರ ಉರುಸ್ ವಾರ್ಷಿಕೋತ್ಸವ (ಜಾತ್ರಾ ಮಹೋತ್ಸವ) ಶ್ರದ್ಧಾಭಕ್ತಿಯಿಂದ ನಡೆಯಿತು.

ಪರಮಪೂಜ್ಯ ಶ್ರೀ ಹಜರತ್ ಖವಾಜಾ ಷಾ ಖುದ್ರತ್-ಉಲ್ಲಾ ಷಾ ಚಿಶ್ತಿ ಖಾದ್ರಿ ಶತ್ತಾರಿ(ರ.ಅ) ರವರ ಕುಟುಂಬಸ್ಥರು ದಿನಾಂಕ ಮಾರ್ಚ್ ೨೧ರಂದು ಹಾಲು ಕೊಡುವ ಗೋವನ್ನು ಹಲಗನಹಳ್ಳಿ ಗ್ರಾಮದ ನವೀದಾಬಾನುರವರಿಗೆ ದಾನ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.೨೪ರಂದು ಸಂಪ್ರದಾಯವಾಗಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ೨೫ ಹಾಗೂ ೨೬ ರಂದು ಗುರುಪೀಠದ ಆವರಣದಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಪಿರಿಯಾಪಟ್ಟಣ ತಾಲ್ಲೂಕು ಹಾಗೂ ಹೊರ ಜಿಲ್ಲೆಗಳಿಂದ ಬಂದಂತಹ ೩೦೦ಕ್ಕೂ ಹೆಚ್ಚು ರೋಗಿಗಳು ನೇತ್ರ ತಪಾಸಣೆ ಮಾಡಿಸಿಕೊಂಡರು ಗುರುಶಿ ಗುರುಪೀಠದ ಸೂಫಿ ಹುಸೇನ್ ಮಾತನಾಡಿ ಶೇಕಡಾ ೯೦ ರಷ್ಟು ರೋಗಿಗಳಿಗೆ ಕನ್ನಡಕದ ಅವಶ್ಯಕತೆ ಇದ್ದು ಅವರಿಗೆ ೧ವಾರದಲ್ಲಿ ಮನೆ ಮನೆಗೆ ಉಚಿತವಾಗಿ ಕನ್ನಡಕ ತಲುಪಿಸಲಾಗುವುದು. ೩೦ ವರ್ಷಗಳ ಗುರುಪೀಠ ಕಳೆದ ೨ವರ್ಷಗಳಿಂದ ವಾರ್ಷಿಕೋತ್ಸವ ಮಾಡಿಕೊಂಡು ಬರುತ್ತಿದ್ದೇವೆ. ಎಲ್ಲ ಜಾತಿ ಧರ್ಮದವರನ್ನು ಗೌರವಿಸುವುದರಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ ಎಂದ ಅವರು ಆವರಣದಲ್ಲಿ ಉಚಿತ ಬಿಪಿ ಶುಗರ್ ತಪಾಸಣಾ ಕೇಂದ್ರವನ್ನು ತೆರೆಯಲಾಗುವುದು.

ಮುಂದಿನ ದಿನಗಳಲ್ಲಿ ಜನರ ನಿರೀಕ್ಷೆ ನೋಡಿಕೊಂಡು ಹಳ್ಳಿಗಳಿಗೆ ವಿಸ್ತರಿಸಲು ಚಿಂತಿಸಲಾಗಿದೆ. ಹಾಗು ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಕಂಪ್ಯೂಟರ್ ಶಿಕ್ಷಣ ಬೋಧನೆ ಮಾಡಲು ಗುರುಪೀಠದ ವತಿಯಿಂದ ಶಿಕ್ಷಕರನ್ನು ನೇಮಿಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಪಸಿಹಾ ಬಾನು(ಗುರುಮ) ,ಹುಸೇನ್ ಸಹೋದರರು ,ಖತೀಜಾ ಫಾತಿಮಾ ಹಾಗೂ ಭಕ್ತಾದಿಗಳು ಹಾಜರಿದ್ದರು.