ಹಸಿರು ತರಕಾರಿ ಮತ್ತು ಹಣ್ಣುಗಳ ಸೇವನೆ ಸಮತೋಲಿತ ಆರೋಗ್ಯದಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ.
ಸಾಮಾನ್ಯವಾಗಿ ಮಕ್ಕಳು ಚಿಕ್ಕವರಿರುವಾಗ ಕಣ್ಣಿನ ಆರೋಗ್ಯ ಹಾಗೂ ದೃಷ್ಟಿಗೆ ಕ್ಯಾರೆಟ್ ಸೇವನೆ ಒಳ್ಳೆಯದೆಂದು ತಿಳಿಹೇಳುವುದನ್ನು ಕೇಳಿದ್ದೇವೆ, ಅಲ್ಲದÉೀ ವೃದ್ದಾಪ್ಯದಲ್ಲಿ ಕಾಡುವ ಕಣ್ಣಿನ ಸಮಸ್ಯೆಗಳಿಗೆ ನಿತ್ಯ ಕ್ಯಾರೆಟ್ ಸೇವನೆಯಿಂದ ಪರಿಹಾರ ಸಾಧÀ್ಯ ಎಂಬುದನ್ನು ಕಣ್ಣಿನ ವೈದ್ಯರು ದೃಢಪಡಿಸಿರುವುದನ್ನು ಕಾಣಬಹುದಾಗಿದೆ.
ವಯೋಸಹಜ ನೇತ್ರ ದೋಷದಿಂದ ಸಮಸ್ಯೆ ಎದುರಿಸುತ್ತಿರುವವರನ್ನು ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಿದ ಬೋಸ್ಟನ್ ಹಾರ್ವಡ್ ಸ್ಕೂಲ್‍ನ ಪಬ್ಲಿಕ್ ಹೆಲ್ತ್ ವಿಭಾಗದ ನೇತ್ರ ತಜ್ಞರು ಕ್ಯಾರೆಟ್, ಸಿಹಿ ಆಲೂಗೆಡ್ಡೆ, ಕಿತ್ತಳೆ, ಮೆಣಸು ಸೇರಿದಂತೆ ಸೊಪ್ಪು ಬಳಸುವ ಪ್ರಮಾಣವನ್ನು ಹೆಚ್ಚಿಸಿದಂತೆ ಪ್ರಯೋಗಕ್ಕೆ ಒಳಗಾದ ವಯಸ್ಸಾದವರು ಹಾಗೂ ವಯೋಸಹಜವಾಗಿ ನೇತ್ರ ಸಮಸ್ಯೆ ಎದುರಿಸುತ್ತಿರುವವರನ್ನು ಪರೀಕ್ಷಿಸಲಾಗಿ ಇಳಿವಯಸ್ಸಿನಲ್ಲೂ ಕ್ಯಾರೆಟ್ ಸೇರಿದಂತೆ ತರಕಾರಿ ಸೊಪ್ಪು ಬಳಸಿದವರಲ್ಲಿ ದೃಷ್ಟಿ ಸಮಸ್ಯೆಯ ಅನುಪಾತ ಗಣನೀಯವಾಗಿ ಇಳಿಕೆಯಾಗಿರುವುದು ಕಂಡು ಬಂತಂತೆ. ಹೀಗಾಗಿ ಸರ್ವರೂ ಹೆಚ್ಚಿನ ಪ್ರಮಾಣದಲ್ಲಿ ಕ್ಯಾರೆಟ್ ಸೇವಿಸಿದರೆ ದೃಷ್ಠಿದೋಷ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂಬುದನ್ನು ತಳ್ಳಿಹಾಕುವಂತಿಲ್ಲ.