.ಓಓಓಓಓ…….ಓಹೋ ……..
ತಾನು ತಂದನಾ ತಾನು ತಂದನಾ…

ಬಂತು ಬಂತು… ಬೆಳಕಿನ ಹಬ್ಬ ದೀಪದ ಹಬ್ಬ!
ಅಂದ ಚೆಂದದ ದೀಪಾವಳಿ
ಸುಜ್ಙಾನ ಬೆಳಗಿಸೊ ದೀಪಾವಳಿ II

ಬನ್ನಿ ಬನ್ನಿ ಎಲ್ಲರೂ ಪರಿಸರಸ್ನೇಹಿ ದೀಪಾವಳಿ ಆಚರಿಸೋಣ ,ಪರಿಸರಸ್ನೇಹಿ ಆಗೋಣI
ಪಟಾಕಿ ಗಿಟಾಕಿ ಹಚ್ಚುವ ಗೊಡವೆಯು ಬೇಡಣ್ಣ
ವಾಯುಮಾಲಿನ್ಯ ತಡೆಯೋಣ,ಪರಿಸರ ಉಳಿಸೋಣI
ದೀಪದಿಂದ ದೀಪ ಹಚ್ಚೋಣ ,ಗೌರಿಕಡ್ಡಿ ಹಚ್ಚೋಣI
ಒಬ್ಬಟ್ಟು ,ಕಜ್ಜಾಯ ತುಪ್ಪ ಸವಿಯೋಣ, ಹಾಡಿ‌ ಕುಣಿದು ಸಂಭ್ರಮಿಸೋಣ II

ಗೋ ಪೂಜೆ ಮಾಡೋಣ
ನವಜೋಡಿಗಳಿಗೆ ಉಡುಗೊರೆ ನೀಡೋಣI
ಅಂಧಕಾರ ಅಜ್ಙಾನ ಓಡಿಸೋಣ ,ಪ್ರೀತಿ ಬೆಳಕು ಬೆಳೆಸೋಣI
ಓಂ, ವಿಘ್ನವಿನಾಶಕ ,ಚಾಮುಂಡಿ,ಶಿವ ರಾಮ ಕೃಷ್ಣರ ದೀಪದಿ ರಚಿಸೋಣ I
ಭಾರತ ,ಕರ್ನಾಟಕ ,ಕನ್ನಡ ರಾಜ್ಯೋತ್ಸವ ದೀಪದಿ ಬಿಡಿಸೋಣ II

ದೀಪಾವಳಿ ದಿನವೇ ರಾಮಪಟ್ಟಾಭಿಷೇಕ ದಿನವು I
ಅಜ್ಞಾತವಾಸ ಮುಗಿಸಿದ ಪಾಂಡವರ ದಿನವು.I
ನರಕಾಸುರನ ಸಂಹಾರ ದಿನವೇ ” ನರಕ ಚತುರ್ದಶಿI
ದುಷ್ಟ ಸಂಹಾರವು ,ಶಿಷ್ಟ ರಕ್ಷಣೆಯು ಇಂದು II

ತೊಲಗಲಿ ಮಹಾಮಾರಿ ಕೊರೊನಾ ದೀಪದ ಬೆಳಕಲ್ಲಿI
ಅಂತ್ಯವೂ ಆಗಲಿ ಕೊರೊನಾ ಭೀತಿಯ ಹೊಸ
ಜ್ಙಾನದ ಬೆಳಕಿನಲ್ಲಿI
ದೀಪದಿಂದ ಜ್ಙಾನವ ,ಜ್ಙಾನದಿಂದ ಸುಯೋಗವು
ಚೆಲ್ಲಿI
ಎಲ್ಲರ ಬಾಳು‌ ಬೆಳಗಲಿ‌ ,ಜೀವನ ಜ್ಯೋತಿಯಂತಾಗಲಿII

ಎಲ್ಲೆಲ್ಲೂ ಬೆಳಗಲಿ , ಬೆಳಗಲಿ ದೀಪದ ಪ್ರಭಾವಳಿI
ಪರಿಸರ ಸ್ನೇಹಿ ದೀಪಾವಳಿಗೆ ನಾಂದಿಯಾಗಲಿI
ದಿವ್ಯ ಕಾಂತಿಯ ಜಗತ್ತು,,ಸಂತೋಷ ಸಂಪ್ರೀತಿಯಾ
ತರಲಿ I
ಬಂತು ಬಂತು ಬೆಳಕಿನ ಹಬ್ಬ ದೀಪಾವಳಿ ದೀಪಾವಳಿ II

ಓಹೋ ತಾನು ತಂದನಾ ತಾನು ತಂದನಾ……..

By admin