Call for Articles on Yoga Achievers

ಮೈಸೂರು, ಮಾ.23: ಸುವರ್ಣ ಬೆಳಕು ಫೌಂಡೇಷನ್ ವತಿಯಿಂದ ಮೇ 10ರಂದು ಮೈಸೂರಿನಲ್ಲಿ ರಾಜ್ಯ ಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಈ ಕಾರ್ಯಕ್ರಮದ ಅಂಗವಾಗಿ ಯೋಗ ಸಾಧಕರ ಕುರಿತು ವಿಶೇಷ ಸ್ಮರಣ ಸಂಚಿಕೆಯನ್ನು ಹೊರತರುವುದಾಗಿ ನಿರ್ಧರಿಸಲಾಗಿದೆ. ಈ ಸಂಚಿಕೆಗೆ ಯೋಗಾಸನದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳ ಕುರಿತು ಲೇಖನಗಳನ್ನು ಆಹ್ವಾನಿಸಲಾಗಿದೆ.

ಯೋಗ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳ ಕುರಿತು ತಿಳಿದಿರುವವರು ಅವರ ಸಾಧನೆ, ಜೀವನ ಪಥ ಹಾಗೂ ವಿಶೇಷತೆಗಳನ್ನು ಒಳಗೊಂಡ ಲೇಖನಗಳನ್ನು ಅವರ ಫೋಟೋಗಳೊಂದಿಗೆ ಇ-ಮೇಲ್ maheshyoga10@gmail.com ಮೂಲಕ ಕಳುಹಿಸಬಹುದು.

ಲೇಖನಗಳನ್ನು ಏಪ್ರಿಲ್ 20ರೊಳಗೆ ಕಳುಹಿಸಬೇಕೆಂದು ಫೌಂಡೇಷನ್‌ನ ಗೌರವ ಅಧ್ಯಕ್ಷ ಮಹೇಶ್ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಫೌಂಡೇಷನ್ ಅಧ್ಯಕ್ಷ ಎಸ್. ಮಹೇಶ್ ಅವರ ಮೊಬೈಲ್ ಸಂಖ್ಯೆ 8197959495, 9448980010 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Call for Articles on Yoga Achievers

Mysuru, Mar. 23: Suvarna Belaku Foundation is organizing a State-level Open Yogasana Competition in Mysuru on May 10.

As part of this event, a special souvenir featuring yoga achievers will be published. Articles are invited on individuals who have made notable achievements in the field of Yogasana.

Those who know such yoga practitioners can submit detailed articles highlighting their achievements, life journey, and unique contributions, along with photographs, via email to maheshyoga10@gmail.com.

The last date for submission of articles is April 20, informed Honorary President Mahesh.

For more details, contact Foundation President S. Mahesh at 8197959495 / 9448980010, according to the press release.

Leave a Reply