ಬೆಂಗಳೂರು: ನಿವೃತ್ತ ಅಧಿಕಾರಿಗಳು, ಸ್ನೇಹಿತರು ಹಾಗೂ ಸಹೋದ್ಯೋಗಿಗಳ ಅಭಿಮಾನಿ ಬಳಗ, ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ ಶ್ರೀ ಸಿ. ರಾಮಣ್ಣ ಅವರಿಗೆ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಯಿತು.
ಸಿ. ರಾಮಣ್ಣ ಅವರು ೧೯೬೩ ರಿಂದ ೧೯೯೫ರವರೆಗೆ ಶ್ರದ್ಧಾಪೂರ್ಣ, ನಿಸ್ವಾರ್ಥ ಹಾಗೂ ಕ್ರಿಯಾಶೀಲ ಸರ್ಕಾರಿ ಸೇವೆ ಸಲ್ಲಿಸಿದ್ದು, ವಿಶೇಷವಾಗಿ ೧೯೭೯ ರಿಂದ ೧೯೯೫ರವರೆಗೆ ರಾಜ್ಯ ಮಟ್ಟದ ಕಾಲೇಜು ಶಿಕ್ಷಣ ನಿರ್ದೇಶನಾಲಯದಲ್ಲಿ ರಿಜಿಸ್ಟ್ರಾರ್ ಹಾಗೂ ಹಿರಿಯ ಸಹಾಯಕ ನಿರ್ದೇಶಕರಾಗಿ ಸಲ್ಲಿಸಿದ ಸೇವೆ ಅವಿಸ್ಮರಣೀಯವಾಗಿದೆ. “ಸರ್ಕಾರದ ಕೆಲಸ ದೇವರ ಕೆಲಸ” ಎಂಬ ನಾಣ್ಣುಡಿಯನ್ನು ಅಕ್ಷರಶಃ ಪಾಲಿಸಿದ ಅವರು ಶಿಸ್ತು, ಶ್ರದ್ಧೆ ಮತ್ತು ನಿಸ್ವಾರ್ಥ ಸೇವೆಯ ಮೂಲಕ ಮಾನವೀಯತೆ ಹಾಗೂ ಸದ್ಗುಣಗಳ ಆದರ್ಶ ಸರ್ಕಾರಿ ಅಧಿಕಾರಿಯಾಗಿ ಜನಮನ್ನಣೆ ಗಳಿಸಿದ್ದರು.
ಅವರ ಸೇವೆಯನ್ನು ಗುರುತಿಸಿ, ನಿವೃತ್ತ ಅಧಿಕಾರಿಗಳು, ಸ್ನೇಹಿತರು ಹಾಗೂ ಸಹೋದ್ಯೋಗಿಗಳ ಅಭಿಮಾನಿ ಬಳಗದಿಂದ ಶ್ರೀ ಸಿ. ರಾಮಣ್ಣ ಮತ್ತು ಅವರ ಧರ್ಮಪತ್ನಿ ಗಾಯತ್ರಿ ರಾಮಣ್ಣ ಅವರನ್ನು ಇತ್ತೀಚೆಗೆ ಬೆಂಗಳೂರಿನ ಗಾಂಧಿ ಬಜಾರ್‌ನ ರೋಟಿಘರ್‌ನಲ್ಲಿ ಗೌರವಪೂರ್ವಕವಾಗಿ ಅಭಿನಂದಿಸಿ ಸನ್ಮಾನಿಸಲಾಯಿತು.
ಈ ಸಮಾರಂಭದಲ್ಲಿ ೭೦ ಕ್ಕೂ ಹೆಚ್ಚು ನಿವೃತ್ತ ಪ್ರಾಂಶುಲರು, ಅಧಿಕಾರಿಗಳು ಹಾಗೂ ಆಹ್ವಾನಿತರು ಭಾಗವಹಿಸಿ ಸಿ. ರಾಮಣ್ಣ ಅವರಿಗೆ ತಮ್ಮ ಅಭಿಮಾನ ಹಾಗೂ ಪ್ರೀತಿಯನ್ನು ವ್ಯಕ್ತಪಡಿಸಿದರು. ಮುಖ್ಯವಾಗಿ ಪ್ರೊಫೆಸರ್ ರಮೇಶ್ ಬಾಬು, ಶ್ರೀ ಪಿ.ಆರ್. ಕೃಷ್ಣಮೂರ್ತಿ, ಶ್ರೀ ಸಿ. ಗೋಪಾಲ್ ಮತ್ತು ಶ್ರೀ ಕೆ.ಎ. ನಾರಾಯಣ ಉಪಸ್ಥಿತರಿದ್ದರು.
