ಹೊಸ ವರ್ಷ ಮೋಜು ಮಸ್ತಿ ಮಾಡದೆ  ರಸ್ತೆ ಬದಿ ನಿರಾಶ್ರಿತರಿಗೆ ಹೂದಿಕೆ ವಿತರಿಸುವ ಮೂಲಕ ಹೊಸ ವರ್ಷವನ್ನು ವಿಶೇಷವಾಗಿ ಸ್ವಾಗತಿಸಿದ್ದಾರೆ ಯುವಕರ ತಂಡ  ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ನಿರಂತರವಾಗಿ 15ದಿನಗಳಿಂದ ರಸ್ತೆ ಬದಿಯಲ್ಲಿ ಮಲಗಿರುವ ನಿರಾಶ್ರಿತರು ಹಾಗೂ ಅಸಹಾಯಕರಿಗೆ ಹೊದಿಕೆ ವಿತರಣೆ ನೀಡುತ್ತಾ ಬಂದಿದ್ದುವರ್ಷದ ಕಡೆಯ ದಿವಸ  ಮೋಜು ಮಸ್ತಿ ಮಾಡದೆ  ರಾಜ್ ಕುಮಾರ್ ರಸ್ತೆ ,ಕ್ಯಾತಮಾರನಹಳ್ಳಿ ಹಾಗೂ ಸುತ್ತಮುತ್ತ ಮಲಗಿರುವ ನಿರಾಶ್ರಿತರಿಗೆ ಹೊದಿಕೆಯನ್ನು  ವಿಚಾರಿಸಿ

  ವಿಶೇಷವಾಗಿ ವರ್ಷದ ಕೊನೆಯ ದಿವಸ ಕೆಎಂಪಿಕೆ ಟ್ರಸ್ಟ್ ಗೆ ಯುವಕರು ಕೈಜೋಡಿಸಿ    ಲಾರಿ ಕೆಳಗಡೆ ಜೀವನ ಸಾಗಿಸುತ್ತಿರುವ  ನಿರಾಶ್ರಿತರಿಗೆ ಸ್ಥಳಕ್ಕೆ ತೆರಳಿ ಹೊದಿಕೆ ನೀಡಿ ಮಾನವೀಯತೆ ಮೆರೆದ ಯುವ ಸಮುದಾಯ ಇತ್ತೀಚಿನ ದಿನಗಳಲ್ಲಿ ಯುವಕರು ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಮುಳುಗಿ ಮೋಜು ಮಸ್ತಿ ಮಾಡಲು ಸ್ನೇಹಿತರೊಡನೆ ಪ್ರವಾಸಿ ಸ್ಥಳಕ್ಕೆ ತೆರಳಿ ಪಟಾಕಿ ಸಿಡಿಸಿ ಕೇಕ್ ಕಟ್ ಮಾಡಿ ಹಾಗೂ ಮೈಮರೆತು ಮದ್ಯಪಾನ ಮಾಡಿ ಕುಣಿದು ಕುಪ್ಪಳಿಸುವ ಇಂತಹ ಸಂದರ್ಭದಲ್ಲೂ 50 ಕ್ಕೂ ಹೆಚ್ಚು ನಿರಾಶ್ರಿತರಿಗೆ ಹೊದಿಕೆ  ವಿತರಿಸುವ ಮೂಲಕ ಹೊಸ ವರ್ಷವನ್ನು ಅರ್ಥಪೂರ್ಣವಾಗಿ ಆಚರಿಸಿ ಸಮಾಜಕ್ಕೆ ಸಂದೇಶ ನೀಡಿದ್ದಾರೆ


ಇದೇ ಸಂದರ್ಭದಲ್ಲಿ ಪರಿಸರ ಸ್ನೇಹಿ ತಂಡದ ಅಧ್ಯಕ್ಷ ಲೋಹಿತ್ ,ಸುಚೇಂದ್ರ ,ಧನರಾಜ್ ,ರಾಕೇಶ್ ಕುಂಚಿಟಿಗ ,ಎಸ್ ಎನ್ ರಾಜೇಶ್ ,ದೀಪಕ್ ,ಸಂದೇಶ ,ಕಡಕೊಳ ಜಗದೀಶ್ ,ಹಾಗೂ ಇನ್ನಿತರರು ಯುವಕರು ಹಾಜರಿದ್ದರು