೨೬೦೦ವರ್ಷದಾ ಹಿಂದ
ಜಗವೆಲ್ಲಮಲಗಿರೆ ಇವನೊಬ್ಬನೆದ್ದ
ಬುದ್ಧ ಗೌತಮ ಬುದ್ಧ
ಕೋಸಲ ಸಾಮ್ರಾಜ್ಯದ 
ಶಾಕ್ಯ ವಂಶದ
ಮಹಾರಾಜಶುದ್ಧೋದನಾ ರಾಣಿ 
ಮಾಯಾದೇವಿಯ ಸುಪುತ್ರನಾಗಿ
ಲುಂಬಿನಿಎಂಬ ಭುವಿಗೆಬಂದ
ಸಿದ್ಧಾರ್ಥ!
ಹುಟ್ಟಿದಂದಿನಿಂದ
ಕಾಯ ದಂಡಿಸದ
ಅರ್ಜಿ ಮಂಡಿಸದ
ಅಮರಾವತಿ ನಾಚಿಸುವ
ಅಪ್ಸರೆ ಗಂಧರ್ವಾದಿ ಸ್ವರ್ಗ
ಸುಖಕ್ಕೆ ಕೊರತೆಯಿಲ್ಲವ್ವ  
ಇಂದ್ರನನ್ನು ಮೀರಿಸುವ
ಇಂದ್ರಿಯತೃಪ್ತಿಗೆ ಕಮ್ಮಿಯಿಲ್ಲವ್ವ
ಪ್ರತಿಕ್ಷಣ ಮುಳುಗಿಯೇಳುವ
(ವೈ)ಭೋಗದಲ್ಲೆ ತೇಲಾಡುವ
 ಕಾಮ ಸ್ಪುರಿಸುವಂಥ 
ಕ್ರೋಧ  ಭರಿಸುವಂಥ
ಮೋಹ ಬರಿಸುವಂಥ
ಲೋಭ ತರಿಸುವಂಥ
ಮದ ಏರಿಸುವಂಥ
ಮತ್ಸರ ಹುಟ್ಟುವಂಥ
ಅಷ್ಟಾಂಗ ಯೋಗದ
ನವರಂಧ್ರ ಸಂಯೋಗದ
ಸುಖ ಜೀವದ
ಸುಪ್ಪತ್ತಿಗೆ ಜೀವನದ
ಹಂಸತೂಲಿಕಾ ತಲ್ಪದ
ಯಾವುದೂ ಕೊರತೆಇರದ
ಐಷಾರಾಮ ದರ್ಬಾರ್ ಜೀವನದ
ಬದುಕು ಸಾಗುತ್ತಿರುವಾಗವ್ವಾ
ಇದ್ದಕ್ಕಿದ್ದಂತೆ ಒಂದಿನ…..??
ರೋಗಿ ಮುದುಕಿ ವಿಕಲಾಂಗ
ನೋಡದಿದ್ದದ್ದು ನೋಡಿಹೊರಗೆ
ಆಗಬಾರದ್ದಾಯ್ತು ಅವನೊಳಗೆ
ಭೋಗಭಾಗ್ಯವ ತೊರೆದನವ್ವ
ಸರ್ವಾಧಿಕಾರವ ಮರೆತನವ್ವ
ಆಸೆಯೇ ದುಃಖದ ಮೂಲ
ಇತ್ಯಾದಿ ಸ್ವಅನುಭವ ಹಿತೋಕ್ತಿ
ಸಾರ್ವಜನಿಕ ಹಿತಾಸಕ್ತಿ
ಸಾರುತ್ತಾ….ಸಾಗುತ್ತ
ಕತ್ತಲೆಯಲ್ಲಿದ್ದ ಆಷಾಢಭೂತಿ
ಮತಾಂಧ ಮದಾಂಧ ಧರ್ಮಾಂಧ 
ಧೃತರಾಷ್ಟ್ರ ಸಂಕುಲವಾ
ಶಾಂತಿ ನೆಮ್ಮದಿ ಮಾನವಾ
ಬೆಳಕಿನೆಡೆ ಕರೆತರುವ ವಿಶ್ವಧೂತನಾಗಿ  
ಮನುಕುಲಮೆಚ್ಚುವ ವಿಶ್ವಮಾನವನಾಗಿ
ಜಗಬೆಳಗುವ ಜಗಮೆಚ್ಚಿದಮಗನಾಗಿ
ಬದುಕು-ಬದುಕಲುಬಿಡು ಕಲಿಸಿ
ಬೌದ್ಧಧಮ್ಮಬೆಳೆಸಿ ತೆರಳಿದನವ್ವ
ಆ..ದ…ರೆ…ಇಂದು
ಕಾಲಾಯ ತಸ್ಮೈನಮಃ
ಓ… ಬುದ್ಧದೇವಾ!
ನಿನದೇ ನಾಡಲ್ಲಿ ನೀನಿತ್ತ ಗೂಡಲ್ಲಿ
ಹುಟ್ಟಿಬೆಳೆದು ಬದುಕುತ್ತಿರುವ
ಕೆಲವು ಸ್ವಾರ್ಥ
ಸರ್ವಾಧಿಕಾರದ ಗುಂಪು?
ಮಂದಮತಿ ಸಮುದಾಯ?
ಕೊಳಕು ರಾಜಕಾರಣ ಮಾಡುತ್ತ
ತಾವುಮಾತ್ರ ಬದುಕಿ
ಅನ್ಯರು ಬದುಕಲು ಬಿಡುತ್ತಿಲ್ಲವಲ್ಲ
ಹೇ….. ಭಗವಾನ್! 
ಈಗ ನೀನೇನಾದರು ಇದ್ದಿದ್ದರೆ
“ಕೊಲ್ಲು…! ಕೊಲ್ಲಿಸಿಕೊ!”
ಎನ್ನೋರಿಗೆಲ್ಲಾ
ಬುದ್ಧಿಹೇಳುವ (ವ್ಯರ್ಥ)ಪ್ರಯತ್ನ
ಖಂಡಿತ ಮಾಡುತ್ತಿದ್ದೆಯೇನೋ?
ಬಲ್ಲವರಾರು…?
ಇಷ್ಟಾದರೂ ನೀನೀಗ
ಇರುವಲ್ಲಿಂದಲೇ
ಸತ್ಯ-ಧರ್ಮ ನಂಬಿದಾ
ಎಲ್ಲರನ್ನು ಹಾರೈಸು ನಮ್ಮನ್ನೂ ಹರಸು  
÷=÷=÷=÷=÷=÷
ಕುಮಾರಕವಿ ಬಿ.ಎನ್.ನಟರಾಜ
ಬೆಂಗಳೂರು,9036976471

ReplyReply allForward