ಮೈಸೂರು 21. ಕೊರೋನಾ ಎರಡನೇ ಅಲೆ  ಮಹಾಮಾರಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಉಂಟಾಗಿರುವ ಲಾಕ್ ಡೌನ್ ಸಂಕಷ್ಟದಲ್ಲಿರುವ 36ಕ್ಕೂ ಹೆಚ್ಚು ಕುಟುಂಬಗಳಿಗೆ ದಿನಸಿ ತಲುಪಿಸುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದೆ ಬ್ರಹ್ಮಶ್ರೀ ಯೋಗಮಂದಿರದ ವಿದ್ಯಾರ್ಥಿಗಳು.

ಬ್ರಹ್ಮಶ್ರೀ ನಾರಾಯಣಗುರು ಯೋಗ ಮಂದಿರವು ಮೂವತ್ತು ವರ್ಷಗಳಿಂದ ಯೋಗಾಸನ ಹೇಳಿಕೊಡುವ ಮೈಸೂರಿನ ಪ್ರಸಿದ್ಧ ಸಂಸ್ಥೆಯಾಗಿದ್ದು ಈಗಿನ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವವರಿಗೆ ಸಾಧ್ಯವಾಗುವಷ್ಟು ಸಹಾಯಹಸ್ತ ಚಾಚುವ ಕೆಲಸವನ್ನು ಮಾಡುತ್ತಾ ಬಂದಿದೆ.

ಕುವೆಂಪುನಗರದ ಬ್ರಹ್ಮಶ್ರೀ ನಾರಾಯಣಗುರುಗಳಿಂದ ಪ್ರೇರಣೆ ಪಡೆದಿರುವ ಈ ಯೋಗ ಸಂಸ್ಥೆಯು ಯೋಗಾಸನ ತರಗತಿಗಳನ್ನು ಮೂವತ್ತು ವರ್ಷಗಳಿಂದ ನಡೆಸುತ್ತ ಬಂದಿದ್ದು ಈಗ ಕೊರೊನ ಸಂಕಷ್ಟದಲ್ಲಿ ಲಾಕ್ ಡೌನ್ ಹಿನ್ನೆಲೆ ಯೋಗ ವಿದ್ಯಾರ್ಥಿಗಳಿಂದಲೇ ಸಹಾಯ ಪಡೆದು ಅಂಧರ ಮತ್ತು ಕೊರೋನ ವಾರಿಯರ್ಸ್ ಹಾಗೂ ನಿರಾಶ್ರಿತರಿಗೆ ರೇಶನ್ ಕಿಟ್ ಹಾಗೂ ಆಹಾರ ವಿತರಣೆ ಕಾರ್ಯಕ್ರಮ ತೆರೆಮರೆಯಲ್ಲಿ ಬ್ರಹ್ಮಶ್ರೀ ಯೋಗ ಮಂದಿರದ ಯೋಗ ವಿದ್ಯಾರ್ಥಿಗಳು ಮಾಡುತ್ತಿದ್ದಾರೆ. ಈವರೆಗೆ 30ಕ್ಕೂ ಹೆಚ್ಚು ಸಂಕಷ್ಟದಲ್ಲಿ ಸಿಲುಕಿರುವ ಕುಟುಂಬಗಳಿಗೆ 2 ತಿಂಗಳಿಗೆ ಆಗುವಷ್ಟು ದಿನಸಿ ಪದಾರ್ಥಗಳನ್ನು ತಲುಪಿಸುವ ಕಾರ್ಯವನ್ನು ಮಾಡಿದ್ದೇವೆ. ನಿನ್ನೆ ಬನ್ನಿಮಂಟಪದಲ್ಲಿರುವ ಅಂಧರು ಮತ್ತು ಕಿವುಡ ಮೂಗರ ಆಶ್ರಮದಲ್ಲಿ ಅವರಿಗೆ 3ತಿಂಗಳಿಗಾಗುವಷ್ಟು ದಿನಸಿ ಕಿಟ್ ಗಳನ್ನು ಒದಗಿಸಲಾಯಿತು.  ಅಲ್ಲದೆ ಪೌರ ಕಾರ್ಮಿಕರು ಗಳಿಗೆ ತಿಂಡಿಯನ್ನು ಮತ್ತು ನಿರಾಶ್ರಿತರಿಗೆ ಮೈಸೂರು ನಗರ ದಾದ್ಯಂತ ಬೆಳಿಗ್ಗೆ ತಿರುಗಾಡಿ ಆಹಾರ ಪೊಟ್ಟಣಗಳನ್ನು ವಿತರಿಸಲಾಯಿತು.

ಬ್ರಹ್ಮಶ್ರೀ ನಾರಾಯಣ ಗುರು ಯೋಗ ಮಂದಿರ ಬನ್ನಿಮಂಟಪದ ಅಂಧರ ಮತ್ತು ಕಿವುಡು ಮೂಗರ ಆಶ್ರಮಕ್ಕೆ ಆಹಾರ ಕಿಟ್ಗಳನ್ನು ವಿತರಣೆ ಮಾಡಲಾಯಿತು ಚಿತ್ರದಲ್ಲಿ ಯೋಗ ಶಿಕ್ಷಕರಾದ ಪುರುಷೋತ್ತಮ್ ಅಗ್ನಿ, ತರುಣ್ .ಬಿ ಮತ್ತು ಆರೆಸ್ಸೆಸ್ ನ ಕಿರಣ್ ಭಾರತ ಜಿ ಇತರರನ್ನು ಕಾಣಬಹುದು. 


ಸಹಾಯವಾಣಿಯೊಂದಿಗೆ ಸಂಪರ್ಕ ಸೇತುವೆ : ಅಲ್ಲದೆ ಮೇ ಮೊದಲ ವಾರದಿಂದಲೂ ನಮ್ಮ ಸಂಸ್ಥೆಯ ವತಿಯಿಂದ   ಸುಮಾರು 50 ಕ್ಕೂ ಹೆಚ್ಚು ಕೊರೋನಾ ಪಾಸಿಟಿವ್ ಬಂದ ರೋಗಿಗಳಿಗೆ ವಾರ್ ರೂಮಿಗೆ  ಸಂಪರ್ಕಪಡಿಸಿಕೊಡುವ ಕೆಲಸ ಹಾಗೂ ಅವರಿಗೆ ಹಾಸಿಗೆಯನ್ನು ಆಸ್ಪತ್ರೆಗಳನ್ನು ಹುಡುಕಿ ಕೊಡುವ ಕೆಲಸವನ್ನು ಈ ದಿನದವರೆಗೂ ಅವಿಶ್ರಾಂತವಾಗಿ ಮಾಡುತ್ತಾ ಬಂದಿದೆ. ಕಾರಣ ಸಾಕಷ್ಟು ಜನರಿಗೆ ಯಾವ ಮೂಲಕ ಯಾರನ್ನು ಸಂಪರ್ಕಿಸಬೇಕು ಎಂಬುದು ತಿಳಿಯದ ಗ್ರಾಮೀಣ ಪ್ರದೇಶದವರಿಗೆ ಹಾಗೂ ಬಹಳಷ್ಟು ಜನ ಗೊಂದಲದಲ್ಲಿರುವವರ ನೂರಾರು ಕರೆಗಳನ್ನು ಸ್ವೀಕರಿಸುವ ಈ ನಮ್ಮ ಸೇವೆ ಸಹಾಯಕವಾಗಿದೆ.

ಈ ಕೊರೋನ ಸಂಕಷ್ಟದಲ್ಲಿ ಅಂಧರ ಆಶ್ರಮದಲ್ಲಿನ ನಿವಾಸಿಗಳಿಗೆ  ನಾವು ನಿಮ್ಮೊಂದಿಗಿದ್ದೇವೆ ನಿಮಗೆ ಯಾವುದೇ ರೀತಿಯಾದಂತಹ ಭಯ ಬೇಡ ಎನ್ನುವಂತಹ ಧೈರ್ಯ ನುಡಿಗಳನ್ನು ಹೇಳಿ ಅವರೊಂದಿಗೆ ನಾವು ಬೆಳಗಿನ ತಿಂಡಿಯನ್ನು ಸವಿದು ಕುಶಲೋಪರಿ ವಿಚಾರಿಸಿ, ಪೌರ ಕಾರ್ಮಿಕರಿಗೆ ಹಾಗೂ ನಿರ್ಗತಿಕರಿಗೆ ನಿರಾಶ್ರಿತರಿಗೆ ತಿಂಡಿ ಪೊಟ್ಟಣಗಳನ್ನು ನೀಡಿ  ನಮ್ಮ ಶಕ್ತ್ಯಾನುಸಾರ ಕಾರ್ಯವನ್ನು ಪೂರ್ಣಗೊಳಿಸಿದ್ದೇವೆ. ಯಾವುದೇ ಸಂಘ ಸಂಸ್ಥೆಗಳು ಎನ್ನುವ ತಾರತಮ್ಯವಿಲ್ಲದೆ ಎಲ್ಲರೊಡನೆ ಸೋದರತ್ವ ದೊಂದಿಗೆ ನಮ್ಮ ಸಂಸ್ಥೆಯು ಕೆಲಸ ಮಾಡುತ್ತಿದೆ. ಇನ್ನೂ ಮಾಡಬೇಕೆನ್ನುವ ಹಂಬಲ ನಮ್ಮ ಸಂಸ್ಥೆಗೆ ಇದೆ. ಬ್ರಹ್ಮಶ್ರೀ ನಾರಾಯಣ ಗುರು ಯೋಗ ಮಂದಿರದ ಯೋಗ ಶಿಕ್ಷಕರಾದ ಪುರುಷೋತ್ತಮ್ ಅಗ್ನಿ ಹಾಗೂ ತರುಣ್ .ಬಿ ಅವರ ಬಿನ್ನಹವಾಗಿದೆ ಎಂದು ಮೈಸೂರು ಮಿರರ್ ಸುದ್ದಿಗೆ ತಿಳಿಸಿದರು.

” ಕರೋನಾ ಸಂಕಷ್ಟದಲ್ಲಿ ಮಾನವೀಯತೆ ಮತ್ತು ಧೈರ್ಯ  ಸಹಾಯಕ್ಕೆ ಬರುತ್ತದೆ. ನಮಗೆ ಇರುವವರು ನೀಡಿದರೆ,  ಇಲ್ಲದವರಿಗೆ ನಾವು  ತಲುಪಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳುವ ಯೋಜನೆ ನಮ್ಮಲ್ಲಿದೆ. ”

 

 

ಪುರುಷೋತ್ತಮ್ ಅಗ್ನಿ, ಯೋಗ ಶಿಕ್ಷಕರು,

ಬ್ರಹ್ಮಶ್ರೀ ಯೋಗ ಮಂದಿರ ಮೈಸೂರು


 

 

By admin