ಬೆಂಗಳೂರು : ಕಾಂಗ್ರೆಸ್ ನವರು ಏನು ಬೇಕು ಅದನ್ನು ಹೇಳುತ್ತಾರೆ. ಧ್ವಜವನ್ನು ಯಾರೂ ಇಳಿಸಿಲ್ಲ. ಆದರೆ ಧ್ವಜ ಸ್ತಂಭದಲ್ಲಿ ಕೇಸರಿ ಭಾವುಟ ಹಾರಿಸಿದ್ದು ತಪ್ಪು ತಪ್ಪು. ಹಿಜಾಬ್ ಮತ್ತು ಕೇಸರಿ ಎರಡೂ ಕೂಡ ಕಾಲೇಜು ಕ್ಯಾಂಪಸ್ ನಲ್ಲಿ ಬರಬಾರದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಈ ಕುರಿತು ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಮಾತನಾಡಿದ ಸಚಿವ ಆರ್. ಅಶೋಕ್ ಡಿಕೆ ಶಿವಕುಮಾರ್ ಕಾಂಗ್ರೆಸ್‌ಗೆ ಏನು ಬೇಕು ಆ ಸ್ಟೇಟ್ಮೆಂಟ್ ನೀಡಿದ್ದಾರೆ. ಅಲ್ಲಿನ ಎಸ್ ಪಿ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಧ್ವಜ ಇಳಿಸಿಲ್ಲ ಎಂದು ಹೇಳಿದ್ದಾರೆ. ಎಸ್ ಪಿ ಹೇಳೋದು ನಿಖರ ಮಾಹಿತಿ, ಡಿಕೆ ಹೇಳಿದ್ದು ಸುಳ್ಳ್ಲು. ಆದ್ರೆ ಧ್ವಜದ ಕಟ್ಟೆಯ ಮೇಲೆ ಕೇಸರಿ ಬಾವುಟ ಹಾರಿಸಿದ್ದು ತಪ್ಪು ಎಂದು ತಿಳಿಸಿದ್ದಾರೆ.

ಈ ಪ್ರಕರಣದ ಹಿಂದೆ ಕಾಂಗ್ರೆಸ್ ನ ಷಡ್ಯಂತ್ರ ಇದೆ. ಕಾಂಗ್ರೆಸ್ ನ ಒಂದು ವರ್ಗ ಪ್ರಚೋದನೆ ನೀಡುತ್ತದೆ. ಮತ್ತೊಂದು ವರ್ಗ ಬ್ಯಾಲೆನ್ಸ್ ಮಾಡುತ್ತದೆ. ಕಾಂಗ್ರೆಸ್ ಸ್ಪಷ್ಟಪಡಿಸಲಿ ಯಾವ ಪರ ಇದೆ ಅಂತಾ ಒತ್ತಾಯಿಸಿದ್ದಾರೆ.

ಕಾನೂನು ಏನಿದೆ ಅದು ಕ್ರಮ ಕೈಗೊಳ್ಳುತ್ತದೆ. ಈ ರೀತಿಯ ಘಟನೆಗಳು ವಿದ್ಯಾರ್ಥಿಗಳ ದೃಷ್ಟಿಯಿಂದ ಒಳ್ಳೆಯದಲ್ಲ. ಕೋರ್ಟ್ ಆದೇಶ ಏನು ಬರುತ್ತೆ ಕಾದು ನೋಡಬೇಕು ಸರ್ಕಾರ ಅದನ್ನು ಪಾಲನೆ ಮಾಡುತ್ತೆ ಎಂದು ಹೇಳಿದ್ದಾರೆ.

ಡಿಕೆಶಿ ಕಾಂಗ್ರೆಸ್ ಗೆ ಏನು ಬೇಕೋ ಅದನ್ನ ಹೇಳ್ತಾರೆ. ರಾಷ್ಟ್ರಧ್ವಜ ಇಳಿಸುವುದು ತಪ್ಪು. ಖಾಲಿ ಕಂಬದಲ್ಲಿ ಕೇಸರಿಧ್ವಜ ಹಾರಿಸುವುದು ತಪ್ಪು. ಯಾರೂ ಇದನ್ನ ಒಪ್ಪುವುದಿಲ್ಲ ಎಂದರು.

ಕಾಲೇಜು ಆವರಣದಲ್ಲಿ ಕೇಸರಿ ಶಾಲು, ಹಿಜಾಬ್ಹಾಕುವುದು ಎರಡೂ ತಪ್ಪು. ಸರ್ಕಾರದ ನೀತಿ ನಿಯಮ ಏನು ಎಂದು ಸರ್ಕಾರ ತಿಳಿಸಿದೆ. ಸರ್ಕಾರ ಆದೇಶ ಧಿಕ್ಕರಿಸಿ ಈ ರೀತಿ ಮಾಡುವುದು, ಅದಕ್ಕೆ ಕಾಂಗ್ರೆಸ್ ಪ್ರಚೋದನೆ ಕೊಡುವುದು ಒಳ್ಳೆಯದಲ್ಲ ಎಂದು ಹೇಳಿದ್ದಾರೆ.


ಡ್ರೆಸ್ ಕೋಡ್ ಏನಿದೆ ಸರ್ಕಾರ ಆದೇಶಿಸಿದೆ. ಹಿಜಾಬ್,ಕೇಸರಿ ಶಾಲು ಧರಿಸುವುದು ತಪ್ಪು. ಶಾಲೆ ಆವರಣದಲ್ಲಿ ಎರಡೂ ತಪ್ಪೇ. ಕೋರ್ಟ್ ತೀರ್ಪು ಬರಬೇಕಿದೆ. ಬೇರೆ ರಾಜ್ಯಗಳ ತೀರ್ಪನ್ನ ಕೋರ್ಟ್ ನಲ್ಲಿ ವಾದ ಮಾಡ್ತಾರೆ. ನಮ್ಮ ವಕೀಲರು ವಾದ ಮಾಡ್ತಾರೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ನಲ್ಲೇ ಎರಡು ವರ್ಗವಿದೆ. ಒಂದು ವರ್ಗ ಪ್ರಚೋದನೆ ಮಾಡುತ್ತದೆ. ಮತ್ತೊಂದು ವರ್ಗ ರಾಜಕೀಯವಾಗುತ್ತೆ ಬೇಡ ಅನ್ನುತ್ತೆ. ಅವರೇ ಧ್ವಂದ ನಿಲುವಿನಲ್ಲಿದ್ದಾರೆ. ಕೇಸರಿ ಯಾರು ಪ್ರಚೋದನೆ ಮಾಡ್ತಿರೋದು ಎಂಬ ಪ್ರಶ್ನೆಗೆ ಸಚಿವ ಆರ್.ಅಶೋಕ್ ಅದಕ್ಕೆ ಉತ್ತರಿಸದೆ ಹಾಗೆ ಹೊರತು ಹೋದರು.