ಯಳಂದೂರಿನ ನಾಯಕ ಮಣಿ , ಅಭಿವೃದ್ದಿಯ ಹರಿಕಾರ ಸಮಾಜ ಸೇವಕರಾದ ದಿವಂಗತ ನಾಗರಾಜಪ್ಪನವರ ಸ್ಮರಣಾರ್ಥ ಮತ್ತು ಗೌರಿಶ್ವರ ದೇವಸ್ಥಾನದ ಕಲಭ್ರರು ಶಿಲ್ಪಕಲೆ ಕಲೆಯ ಬಗ್ಗೆ (ಬುಡಕಟ್ಟು ಸಂಪ್ರದಾಯ ಮತ್ತು ಬೇಟೆಯ ಬಗ್ಗೆ) ನಿವೃತ್ತ ಚಿತ್ರಕಲಾ ಶಿಕ್ಷಕರು ಹಾಗೂ ಸಂಶೋದಕರಾದ ಆರ್ ರಘು ಕೊಳ್ಳೆಗಾಲ ರವರು ಬರೆದಿರುವ ಪುಸ್ತಕ ಬಿಡುಗಡೆಯ ಕಾರ್ಯಕ್ರಮ ನಡೆಯಿತು
. ಪುಸ್ತಕ ಬಿಡುಗಡೆಯನ್ನು ತಮಿಳುನಾಡಿನ ನಾಯಕ ಜನಾಂಗದ ಮುಖಂಡರಾದ ಸನ್ಮಾನಿತ ಪಿ ಅಜಯ್ ಘೋಸ್ ನೆರೆವೇರಿಸಿ ಜನಾಂಗದ ಇತಿಹಾಸದ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು, ಇದೆ ಸಂದರ್ಬದಲ್ಲಿ ಈ ಪುಸ್ತಕದ ಮುಖಪುಟ ರಚನೆ ಮತ್ತು ಪುಸ್ತಕ ರಚನೆಗೆ ಸಹಕಾರ ನೀಡಿದ ಆರ್ ನಾರಾಯಣ ಬದನಗುಪ್ಪೆಯವರು ಕಲಭ್ರರ ಇತಿಹಾಸ ಮತ್ತು ನಾಯಕ ಜನಾಂಗದ ಇತಿಹಾಸದ ಬಗ್ಗೆ ಮಾತನಾಡಿ ಸುತ್ತಾಮುತ್ತ ಲಭ್ಯವಿರುವ ಶಿಲ್ಪಗಳನ್ನು ರಕ್ಷಸುವ ಮೂಲಕ ನಮ್ಮ ಜನಾಂಗದ ಇತಿಹಾಸ ಮತ್ತು ಸಂಸ್ಕೃತಿಯನ್ನು ರಕ್ಷಸಿಸುವಂತೆ ಮನವಿ ಮಾಡಿದರು
ಹಾಗೇಯೇ ಆರ್ ರಘುರವರು ಶಿಲ್ಪಕಲೆ ಸಂಶೋದನೆ ಮತ್ತು ಅದರ ರಕ್ಷಣೆಗೆ ಅವರು ನೀಡುವ ಶ್ರಮದ ಬಗ್ಗೆ ಗುಣಗಾಣ ಮಾಡಿ ಅವರ ಈ ಕಾರ್ಯಕ್ಕೆ ತಾವೇಲ್ಲರು ಅವರಿಗೆ ಸಹಾಯ ಸಹಕಾರ ನೀಡಬೇಕೆಂದು ಮನವಿ ಮಾಡಿಕೊಂಡರು.ಇದೇ ವೇದಿಕೆಯಲ್ಲಿ ಪಿ ಅಜಯ್ ಘೋಸ್ , ಆರ್ ನಾರಾಯಣ ಬದನಗುಪ್ಪೆ ಮತ್ತು ತಾಲ್ಲೂಕು ನಾಯಕ ಸಂಘದ ಖಜಾಂಚಿಯವರಾದ ಉಮೇಶ್ ನಾಯಕರನ್ನು ಸನ್ಮಾನಿಸಲಾಯಿತು. ಹಾಗೂ ಎಲ್ಲಾ ಯಜಮಾನರಿಗೂ ಗೌರವ ಸಮರ್ಪಣೆ ಮಾಡಲಾಯಿತು.
ಈ ಸಂದರ್ಬದಲ್ಲಿ ಶಿಕ್ಷಕರಾದ ಮಂಜುನಾಥ್ , ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಉಮಾಶಂಕರ್, ಯುವ ಮುಖಂಡರಾದ ರವಿಕುಮಾರ್, ಯುವ ಮುಖಂಡ ಆನಂದ್ ನಾಯಕ್, ರಾಮನಾಯಕ , ಭೀಮಪ್ಪ, ರಾಜಶೇಖರ್ ಯಳಂದೂರು ನಾಯಕ ಜನಾಂಗದ ಯಜಮಾನರು ಭಾಗವಹಿಸಿದ್ದರು