ಬೋಗಸ್ ಸ್ಕೆಚ್ ತಯಾರಿಸಿ, ಮೋಸ…!
ನೋಂದ ರೈತರಿಂದ ಮೋಸಗೈದವರಿಗೆ ಕಠಿಣ ಶಿಕ್ಷೆಗೆ ಮೊರೆ
ಸರಗೂರು: ಬಗರ್‍ಹುಕುಂ ಜಮೀನಿನ ನಕಲಿ ಚಕ್ಕಬಂದಿ ತಯಾರಿಸಿಕೊಂಡ ಪ್ರಭಾವಿ ವ್ಯಕ್ತಿಗಳು ವ್ಯವಸಾಯ ಮಾಡಲು ಕಿರುಕುಳ ನೀಡುತ್ತಿದ್ದು, ಕೊಲೆ ಬೆದರಿಕೆಯನ್ನೂ ಹಾಕುತ್ತಿದ್ದಾರೆ ಎಂದು ತಾಲೂಕಿನ ತೆರಣ ಮುಂಟಿ ಗ್ರಾಮದ ರೈತ ಸಿದ್ದನಾಯ್ಕ ಆರೋಪಿಸಿದ್ದಾರೆ.
ಕಿತ್ತೂರು ವ್ಯಾಪ್ತಿಯ ಸರ್ವೇ ನಂ.249ರಲ್ಲಿ 3 ಎಕರೆ, 260ರಲ್ಲಿ 2.20ಗುಂಟೆ ಜಮೀನು ತಮ್ಮ ಅತ್ತೆಯಿಂದ ಬಳುವಳಿಯಾಗಿ ಬಂದಿದ್ದು, ಕಿಡಿಗೇಡಿಗಳು ಹಣವಂತರಿಗೆ ಮಾರಾಟ ಮಾಡುವ ಸಲುವಾಗಿ ಜಮೀನಿನ ಸ್ಕೇಚ್‍ಅನ್ನು ಅದಲು-ಬದಲು ಮಾಡುವ ಮೂಲಕ ಕಿರುಕುಳ ನೀಡುತ್ತಿದ್ದಾರೆ. ಇದರಿಂದಾಗಿ ಮಾನಸಿಕವಾಗಿ, ಆರ್ಥಿಕವಾಗಿ ತುಂಬಾ ನಷ್ಟ ಉಂಟಾಗಿದೆ ಎಂದು ಸಿದ್ದನಾಯ್ಕ ದೂರಿದ್ದಾರೆ.
ಕಳೆದ 9 ವರ್ಷಗಳಿಂದ ತನ್ನನ್ನೂ ಸೇರಿದಂತೆ ದಾಸಯ್ಯ, ಮಾಗೇಗೌಡ ಎಂಬವರಿಗೂ ಇದೇ ರೀತಿ ಕಿರುಕುಳ ನೀಡುತ್ತಿದ್ದು, ಜಮೀನಿನಲ್ಲಿ ವ್ಯವಸಾಯ ಮಾಡಲು ಆಗುತ್ತಿಲ್ಲ. ಸಾಗುವಳಿ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಸಾಗುವಳಿ ಪಡೆಯಲೂ ಸುರೇಶ್‍ಶೆಟ್ಟಿ ಮತ್ತು ತಂಡದವರು ಕಿರುಕುಳ ನೀಡುತ್ತಿದ್ದಾರೆ. ಹೀಗಾಗಿ ಕಂದಾಯ ಇಲಾಖಾಧಿಕಾರಿಗಳು ಪರಿಶೀಲಿಸಿ
, ಬೋಗಸ್ ಚೆಕ್ ರದ್ದುಗೊಳಿಸಲು ಮುಂದಾಗಬೇಕು. ಪೊಲೀಸ್ ಅಧಿಕಾರಿಗಳು ತಪ್ಪಿದ್ದಸ್ಥರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಅವರು ಮನವಿ ಮಾಡಿದ್ದಾರೆ.