ಹಿಮಾಲಯ ಫೌಂಡೇಷನ್ ಹಾಗೂ ಪರಕಾಲ ಮಠದ ಪಾತಂಜಲ ಅಷ್ಟಾಂಗ ವಿನ್ಯಾಸ ಯೋಗಶಾಲಾ ಈ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಗುರುಪೌರ್ಣಿಮೆ ಪ್ರಯುಕ್ತ ಇದೇ ದಿನಾಂಕ ಜುಲೈ ೨೪ರ ಶನಿವಾರ ಸಂಜೆ ೪ಗಂಟೆಗೆ ಜೆ.ಎಲ್.ಬಿ.ರಸ್ತೆಯ ರೋಟರಿ ಸಭಾಂಗಣದಲ್ಲಿ ಹಿರಿಯ ಯೋಗಾಚಾರ್ಯ ಶ್ರೀ ಬಿ.ಎನ್.ಎಸ್.ಐಯ್ಯಂಗಾರ್ ಅವರಿಗೆ ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ಹಿರಿಯ ಸಮಾಜಸೇವಕ ಡಾ.ಕೆ.ರಘುರಾಂ ವಾಜಪೇಯಿ ಉದ್ಘಾಟಿಸಲಿದ್ದು, ಆಧ್ಯಾತ್ಮಿಕ ಸಾಧಕರಾದ ಸುಚರಿತ ಮಾತಾಜಿ ದಿವ್ಯಸಾನ್ನಿಧ್ಯ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಜಿ.ಎಸ್.ಎಸ್. ಫೌಂಡೇಷನ್‌ನ ಅಧ್ಯಕ್ಷ ಶ್ರೀಹರಿ ವಹಿಸಲಿದ್ದಾರೆ. ಇದೇ ಸಂದರ್ಭ ಹಿರಿಯ ಯೋಗಾಚಾರ್ಯರ ಭಾವಚಿತ್ರಕ್ಕೆ ನಿರ್ವಾಣ ಯೋಗಸಂಸ್ಥೆಯ ಸಂಸ್ಥಾಪಕರಾದ ಡಾ.ಟಿ.ಎನ್.ಶಶಿಕುಮಾರ್ ಪುಷ್ಪಾರ್ಚನೆ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ಸುಯೋಗ್ ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ ಹಾಗೂ ಹಿರಿಯ ಸಮಾಜಸೇವಕಿ ಡಾ.ಪುಷ್ಪಾ ಐಯ್ಯಂಗಾರ್ ಭಾಗವಹಿಸಲಿದ್ದು, ವಿಶೇಷ ಆಹ್ವಾನಿತರಾಗಿ ಹಿರಿಯ ಯೋಗಾಚಾರ್ಯರುಗಳಾದ ಎಸ್.ವಿ.ವೆಂಕಟೇಶಯ್ಯ, ವಿ.ಶೇಷಾದ್ರಿ, ಯುವ ಮುಖಂಡರುಗಳಾದ ವಿಕಾಸ್ ಶಾಸ್ತಿç ಹಾಗೂ ಡಾ.ಎಸ್. ಪ್ರಭುಶಂಕರ್ ಉಪಸ್ಥಿತರಿರಲಿದ್ದಾರೆ ಎಂದು ಹಿಮಾಲಯ ಫೌಂಡೇಷನ್ ಅಧ್ಯಕ್ಷ ಎನ್.ಅನಂತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಾ.ಬಿ.ಎನ್.ಎಸ್.ಐಯ್ಯಂಗಾರ್ ಅವರ ಪರಿಚಯ
ಮೈಸೂರಿನ ಯೋಗ ಪರಂಪರೆಯ ಕೊನೆಯ ಕೊಂಡಿ ಎಂದೇ ವಿಶ್ಲೇಷಿಸಬಹುದಾದ ಶ್ರೀಯುತ ಬಿ.ಎನ್.ಎಸ್.ಐಯ್ಯಂಗಾರ್ ಅವರು ಹಿರಿಯ ಯೋಗಾಚಾರ್ಯ ಶ್ರೀಕೃಷ್ಣಮಾಚಾರ್ಯ ಅವರ ಶಿಷ್ಯರಾಗಿ ಸಕಲ ಶಾಸ್ತç ಕೋವಿದರಾಗಿ ಮೈಸೂರಿನಲ್ಲಿ ಅಸಂಖ್ಯಾತ ಶಿಷ್ಯರುಗಳಿಗೆ ಆರ್ಷೇಯ ವಿದ್ಯೆಯನ್ನು ಧಾರೆಯೆರೆದ ಮಹಾಪುರುಷರು. ಮೈಸೂರಿನಲ್ಲಿ ಕೃಷ್ಣಮಾಚಾರ್ಯ ಶೈಲಿ ಎಂದೇ ಹೆಸರಾದ ಅಷ್ಟಾಂಗ ವಿನ್ಯಾಸ ಯೋಗವನ್ನು ಪ್ರಚುರಪಡಿಸಿದ ಹೆಗ್ಗಳಿಕೆ ಇವರದ್ದಾಗಿದೆ. ತಮ್ಮ ೯೫ ರ ವಯಸ್ಸಿನಲ್ಲಿಯೂ ಅತ್ಯಂತ ಲವಲವಿಕೆಯಿಂದ ತರುಣರನ್ನೂ ನಾಚಿಸುವಂತಹ ಕ್ರಿಯಾಶೀಲತೆಯುಳ್ಳ ಐಯ್ಯಂಗಾರರು ಇಂದಿಗೂ ಯೋಗಕ್ಕೆ ಸಂಬ0ಧಿಸಿದ0ತೆ ಪ್ರವಚನ ಶಿಕ್ಷಣ ನೀಡುವಲ್ಲಿ ಕಾರ್ಯತತ್ಪರರಾಗಿದ್ದಾರೆ. ಇವರ ಜೀವಮಾನದ ಈ ಸಾಧನೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಗುತ್ತಿದೆ.