ಮೈಸೂರು :15 ಸುಣ್ಣದ ಕೇರಿಯ ಮೈಸೂರಿನ ನಿವಾಸಿಯಾದ ಭರತ್ ಎನ್ನುವವರ 9 ತಿಂಗಳ ಮುದ್ದಾದ ಹೆಣ್ಣು ಮಗುವಿಗೆ ರಕ್ತ ಕ್ಯಾನ್ಸರ್ ಖಾಯಿಲೆ ಇದೆ. ಪ್ರಪಂಚ ಅರಿಯುವ ಮುನ್ನವೇ ಈ ದುಸ್ಥಿತಿಗೆ ಮಗು ತಲುಪಿರುವುದು ತಂದೆ ತಾಯಿಗೆ ಬದುಕಿದ್ದಾಗಲೇ ಸಾವಿಗಿಂತ ಘೋರ ನೋವನ್ನು‌ ಅನುಭವಿಸುವಂತಾಗಿದೆ. ಇನ್ನೊಂದು ಕಡೆ ಭರತ್ ಅವರ ತಾಯಿಗೆ ಎರಡೂ ಕಿಡ್ನಿ ವೈಫಲ್ಯಗೊಂಡಿವೆ  ಜೊತೆಗೆ ಕಣ್ಣಿನ ಸಮಸ್ಯೆಯೂ ಕೂಡ ಇದೆ. ವೈದ್ಯರು ತಾಯಿಗೆ ಇದ್ದಷ್ಟು ದಿನ ಚೆನ್ನಾಗಿ ನೋಡಿಕೊಳ್ಳಿ ಎಂದುಬಿಟ್ಟಿದ್ದಾರೆ.

ಕೊರಿಯರ್ ಬಾಯ್ ಆಗಿ ವೃತ್ತಿ ನಿರ್ವಹಿಸುತ್ತಿರುವ ಭರತ್ ಅವರು ತಮಗೆ ವಾಸಕ್ಕೆ ಇದ್ದ ಮನೆಯನ್ನೂ ಸಹ ಮಾರಿಕೊಂಡು ಚಿಕಿತ್ಸೆ ಕೊಡಿಸುತ್ತಿದ್ದಾರೆ. ಕಿತ್ತು ತಿನ್ನುವ ಬಡತನದ ಮಧ್ಯೆ ಈ ರೀತಿಯ ಅನಾರೋಗ್ಯದಲ್ಲಿ ಕುಟುಂಬದವರು ನರಳುತ್ತಿರುವ  ಧಾರುಣ ಸಂಗತಿಯಿಂದ ಭರತ್ ಅವರು ಏಕಾಂಗಿಯಾಗಿ ನಿಂತಿರುವುದರಿಂದ ಅವರೂ ಸಹ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ.

ಹೀಗಾಗಿ ಭರತ್ ಅವರು ಕೇಳಿಕೊಳ್ಳುವುದೆಂದರೆ ಸಮಾಜಸೇವಕರು, ಸಂಘ ಸಂಸ್ಥೆಗಳು, ರಾಜಕೀಯ ಮುಖಂಡರು ಮತ್ತು ಸರ್ಕಾರವು ಆರ್ಥಿಕ ನೆರವನ್ನು ನೀಡುವುದರ ಮೂಲಕ ನೊಂದ ಬದುಕಿಗೆ ಒತ್ತಾಸೆಯಾಗಬೇಕೆಂದು ಮೈಸೂರು ಮಿರರ್ ಸುದ್ದಿವಾಹಿನಿಯೊಂದಿಗೆ ಈ ಮೂಲಕ ವಿನಂತಿಸಿಕೊಂಡರು . ಈ ಕೆಳಗೆ ಭರತ್ ಅವರ ಬ್ಯಾಂಕಿನ ಖಾತೆಯ ವಿವರವಿದ್ದು ದಾನಿಗಳು ತಮ್ಮ ಕೈಲಾದ ಆರ್ಥಿಕ ನೆರವನ್ನು ನೀಡಬಹುದಾಗಿದೆ.

ಬ್ಯಾಂಕ್ ಹೆಸರು- ಉಜ್ಜೀವನ್ ಬ್ಯಾಂಕ್.

ಬ್ಯಾಂಕ್ ಖಾತೆ ಸಂಖ್ಯೆ- 1626110010201008

ಬ್ಯಾಂಕ್ : ifse code- UJVN0001626.

PH no – 8884889679.