ಕಾಂಗ್ರೆಸ್, ಬಿಎಸ್ಪಿ ತೊರೆದು ಬಿಜೆಪಿ ಸೇರ್ಪಡೆ
ಗುಂಡ್ಲುಪೇಟೆ: ತಾಲೂಕಿನ ಶ್ಯಾನಡಹಳ್ಳಿ, ಹೊನ್ನೇಗೌಡನಹಳ್ಳಿ, ಕನ್ನೇಗಾಲ ಗ್ರಾಮದ ಕಾಂಗ್ರೆಸ್ ಹಾಗೂ ಬಿಎಸ್ಪಿ ಪಕ್ಷದ ಮುಖಂಡರು ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.
ಗ್ರಾಪಂ ಮಾಜಿ ಸದಸ್ಯರಾದ ರೇಖಾ ಶಿವಮಲ್ಲಪ್ಪ, ಹಾಲು ಉತ್ಪಾದ ಕರ ಸಹಕಾರ ಸಂಘದ ಅಧ್ಯಕ್ಷ ಪುಟ್ಟಸ್ವಾಮಪ್ಪ, ಮುಖಂ ಡರಾದ ರಾಜೇಂದ್ರ, ಬಸವಣ್ಣ, ನಟರಾಜು, ಸೋಮು, ಚಿನ್ನಪ್ಪ, ರಾಮ, ಕುಮಾರ್, ಲೋಕೇಶ್, ಮಹದೇವ ಸ್ವಾಮಿ, ನಾಗಯ್ಯ, ರಾಜಪ್ಪ ಸೇರಿದಂತೆ ಐವತ್ತು ಮಂದಿ ಪಕ್ಷ ತ್ಯಜಿಸಿದರು. ಪಕ್ಷಕ್ಕೆ ಆಗಮಿಸಿದ ಕಾಂಗ್ರೆಸ್ ಹಾಗೂ ಬಿಎಸ್ಪಿ ಮುಖಂಡರಿಗೆ ಬಿಜೆಪಿ ಪಕ್ಷದ ಶಲ್ಯ ಹಾಕುವ ಮೂಲಕ ಬರಮಾಡಿಕೊಂಡರು.
ಈ ಸಮಯದಲ್ಲಿ ಮಂಡಲ ಬಿಜೆಪಿ ಅಧ್ಯಕ್ಷ ಡಿ.ಪಿ.ಜಗದೀಶ್, ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಮಲ್ಲಿಕಾರ್ಜುನ, ಮುಖಂಡರಾದ ನಟರಾಜು, ಮಲ್ಲಿಕಾರ್ಜನ, ಸುರೇಶ್, ಹಂಗಳ ಬಸವೇಶ್ ಇದ್ದರು.
ವರದಿ: ಬಸವರಾಜು ಎಸ್ ಹಂಗಳ