ರಾಜ್ಯದಲ್ಲಿ ಒಮಿಕ್ರೋನ್ ವೇಗಕ್ಕಿಂತ ಕಾಂಗ್ರೆಸ್ ಪಕ್ಷವು ಮೇಕೆದಾಟು ವಿಷಯದಲ್ಲಿ ವೇಗಕ್ಕೆ ಹೆದರಿ ರಾಜ್ಯಾದ್ಯಂತ ಕರ್ನಾಟಕ ಸರ್ಕಾರ ಕರ್ಫ್ಯೂ ಹೇರಿದೆ ಎಂದು ಕಾಂಗ್ರೆಸ್ ಯುವ ಮುಖಂಡ ಎನ್ ಎಂ ನವೀನ್ ಕುಮಾರ್ ಹೇಳಿದ್ದಾರೆ ,ರಾಜ್ಯದಲ್ಲಿ ಬಿಜೆಪಿ ಅನೇಕ ಸಂಘಟನಾತ್ಮಕ ಸಭೆಗಳನ್ನು ,ರ‍್ಯಾಲಿಗಳನ್ನು ಇತ್ತೀಚಿನವರೆಗೂ ನಡೆಸಿದೆಯಾವ ರ‍್ಯಾಲಿಗಳಲ್ಲಿಯೂ ಪಕ್ಷದ ನಾಯಕರುಗಳಾದಿಯಾಗಿ ಯಾರು ಕೂರೂನಾ ಮುನ್ನೆಚ್ಚರಿಕೆ ವಹಿಸಿರಲಿಲ್ಲ ಎಂದು ಆರೋಪಿಸಿದರು .

ಸದ್ಯ ಕಾಂಗ್ರೆಸ್ ಪಕ್ಷವು ಮೇಕೆದಾಟು ವಿಷಯದಲ್ಲಿ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿಕೊಂಡು ಪಾದಯಾತ್ರೆ ಮಾಡಲು ಮುಂದಾಗಿರುವ ಈ ಸಂದರ್ಭದಲ್ಲಿ ಪಕ್ಷವನ್ನು ಗುರಿಯಾಗಿಟ್ಟುಕೊಂಡು ಇನ್ನಿಲ್ಲದ ಕಾನೂನಿನ ಬೆದರಿಕೆ ಹಾಕುತ್ತಿರುವುದನ್ನು ಗಮನಿಸಿದರೆ ಮೇಕೆದಟು ವೇಗಕ್ಕೆ ಸರ್ಕಾರ ಎದುರಿಸುತ್ತಿದೆ ಎಂದು ಟೀಕಿಸಿದ್ದಾರೆ,


ಮೇಕೆದಾಟು ಕುಡಿಯುವ ನೀರಿನ ಅತ್ಯಗತ್ಯ ಯೋಜನೆಯಾಗಿದೆ. ಮೂಲೆ ಸೇರಿದ್ದ ಈ ಯೋಜನೆಯನ್ನು ಹಿಂದಿನ ಸರ್ಕಾರದ ಅವಧಿಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಕೈಗೆತ್ತಿಕೊಂಡಿದ್ದರು. ಕೇಂದ್ರ ಸರ್ಕಾರ ಮೌಖಿಕ ಒಪ್ಪಿಗೆ ಯನ್ನೂ ನೀಡಿದೆ. ಕೇಂದ್ರ ಪರಿಸರ ಸಚಿವಾಲಯದ ಎನ್‌ಒಸಿ ಮಾತ್ರ ಬೇಕಿದೆ. ಮೂರು ವರ್ಷಗಳಿಂದ ಅದನ್ನು ಪಡೆಯಲು ರಾಜ್ಯ ಸರ್ಕಾರಕ್ಕೆ ಆಗಲಿಲ್ಲ’ ಎನ್ ಎಂ ನವೀನ್ ಕುಮಾರ್ ಕಾಂಗ್ರೆಸ್ ಮುಖಂಡರುಎಂದು ದೂರಿದರು.