ಚಾಮರಾಜನಗರ: ವಿಧಾನಪರಿಷತ್ ಚುನಾವಣೆ ಮೈಸೂರು-ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಆರ್.ರಘುಕೌಟಿಲ್ಯ ಪರ ತಾಲೂಕಿನ ಹೆಗ್ಗೊಠಾರ, ಕಿಲಗೆರೆ, ಕೊತ್ತಲವಾಡಿ, ಪಣ್ಯದಹುಂಡಿ, ಅರಕಲವಾಡಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಕೇಂದ್ರ ಪರಿಹಾರಸಮಿತಿ ರಾಜ್ಯಾಧ್ಯಕ್ಷ ಎಂ.ರಾಮಚಂದ್ರ ಅವರು ಪಕ್ಷದ ಮುಖಂಡರೊಂದಿಗೆ ಗ್ರಾಮಪಂಚಾಯಿತಿ ಸದಸ್ಯರ ಮತಯಾಚನೆ ಮಾಡಿದರು.


ಇದೇವೇಳೆ ಅವರು ಮಾತನಾಡಿ ಪ್ರಧಾನಿ ನರೇಂದ್ರಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗ್ರಾಮಪಂಚಾಯಿತಿಗಳಿಗೆ ಹೆಚ್ಚಿನ ಶಕ್ತಿಯನ್ನು ಕೊಟ್ಟರೆ ಆ ಮೂಲಕ ಹಳ್ಳಿಗಳ ಉದ್ದಾರ ಮಾಡಬಹುದು ಎಂಬ ಚಿಂತನೆಯಿಟ್ಟುಕೊಂಡಿದ್ದಾರೆ. ಮಾಜಿಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜಿಲ್ಲೆಯ ಕೆರೆಗಳಿಗೆ ನೀರುತುಂಬಿಸುವುದು ಸೇರಿದಂತೆ ಹಲವಾರು ಜನಪ್ರಿಯ ಕಾರ್ಯಕ್ರಮಗಳನ್ನು ಜಾರಿಮಾಡಿ, ಜನರಿಗೆ ನೆರವಾಗಿದ್ದಾರೆ.

ಮತದಾರರು ಕೇಂದ್ರ ಹಾಗೂ ರಾಜ್ಯಸರಕಾರದ ಜನಪರ ಯೋಜನೆಗಳ ಜಾಗೃತಿ ಪಡೆದು, ಡಿ. 10 ರಂದು ನಡೆಯುವ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ರಘುಕೌಟಿಲ್ಯ ಅವರಿಗೆ ಮೊದಲ ಪ್ರಾಶಸ್ತ್ಯದ ಮತವನ್ನು ನೀಡುವ ಮೂಲಕ ಮೊದಲ ಸುತ್ತಿನಲ್ಲಿ ಆಯ್ಕೆಮಾಡುವಂತೆ ಗ್ರಾ.ಪಂ.ಸದಸ್ಯರಲ್ಲಿ ಮನವಿ ಮಾಡಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪಿ.ವೃಷಬೇಂದ್ರಪ್ಪ, ಪ್ರದಾನ ಕಾರ್ಯದರ್ಶಿ ನಾಗಶ್ರೀಪ್ರತಾಪ್, ಬಿಜೆಪಿ ರೈತ ಮುಖಂಡ ಅಮ್ಮನಪುರಮಲ್ಲೇಶ್, ಡಾ.ಎ.ಆರ್.ಬಾಬು, ರಾಮಸಮುದ್ರ ಎಸ್ಸಿಮೋರ್ಚಾ ಜಿಲ್ಲಾ ಉಪಾಧ್ಯಕ್ಷ ವೇಣುಗೋಪಾಲ್, ಜಿಪಂ ಮಾಜಿ ಸದಸ್ಯ ಆರ್.ಬಾಲರಾಜು, ಎಂಆರ್‍ಎಫ್ ಮಹೇಶ್, ಅರಕಲವಾಡಿಮಹೇಶ್, ಕೊತ್ತಲವಾಡಿಕುಮಾರ್, ಗ್ರಾ.ಪಂ.ಸದಸ್ಯರು ಹಾಜರಿದ್ದರು.

By admin