ಚಾಮರಾಜನಗರ: ನಗರದ ಬಿ.ರಾಚಯ್ಯ ಜೋಡಿರಸ್ತೆಯ ಭೀಮರಾವ್ ಹೆಬ್ಬಾಗಿಲು ಬಳಿ ದಲಿತಸಂಘರ್ಷ ಸಮಿತಿ(ಡಿಜಿಸಾಗರ್ ಬಣ) ವತಿಯಿಂದ ಸಂವಿಧಾನ ಶಿಲ್ಪಿ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೧ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು.
ದಸಂಸ ಜಿಲ್ಲಾಸಂಚಾಲಕ ಸಿ.ಎಂ. ಶಿವಣ್ಣ ಮಾತನಾಡಿ, ಡಾ,ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ನಂತರ ಮಾತನಾಡಿದ ಅವರು ಅಂಬೇಡ್ಕರ್ ಮಾದರಿ ಸಂವಿಧಾನವನ್ನು ರಚಿಸುವ ಮೂಲಕ ಎಲ್ಲರ ಬಾಳಿಗೆ ಆಶಾಕಿರಣವಾಗಿದ್ದಾರೆ ಎಂದರು.
ಸಿದ್ದರಾಜು, ನಾಗಣ್ಣ, ಯಜಮಾನ್ ಮಹದೇವು, ಪ್ರಕಾಶ್, ನಾಗೇಶ್, ಮಲ್ಲಿಕ್, ಆಟೋ ಉಮೇಶ್, ಶಿವಲಿಂಗಮೂರ್ತಿ, ವಕೀಲದಲಿತ್ ರಾಜ್
ಹಾಜರಿದ್ದರು.