ಕೊರೊನಾ ಕಾರಣಕ್ಕೆ ಅರ್ಧಕ್ಕೆ ನಿಂತಿದ್ದ ಬಿಗ್ ಬಾಸ್ ಮತ್ತೆ ಕಲರ್ಸ್ ಕನ್ನಡದಲ್ಲಿ ಶುರುವಾಗಲಿದ್ದು, ಬಿಗ್ ಬಾಸ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಎರಡನೇ ಬಾರಿಗೆ ಸ್ಪರ್ಧಿಗಳು ಮನೆಯೊಳಗೆ ಕಾಲಿಡಲಿದ್ದಾರೆ. ಇದು ಮೊದಲಿನಂತೆಯೇ ನೋಡುಗರಿಗೆ ಮಜಾ ಕೊಡುತ್ತಾ? ಮತ್ತೆ ಬಿಗ್ ಬಾಸ್ ನಲ್ಲಿ ಏನಾದರೂ ಟ್ವಿಸ್ಟ್ ಇರುತ್ತಾ ಹೀಗೆ ನೂರಾರು ಪ್ರಶ್ನೆಗಳು ವೀಕ್ಷಕರನ್ನು ಕಾಡಲು ಆರಂಭಿಸಿದೆ.

ಇದಕ್ಕೆಲ್ಲ ಉತ್ತರವಾಗಿ ಎಂಟನೇ ಸೀಸನ್ ನ ಎರಡನೇ ಇನ್ನಿಂಗ್ಸ್ ಇದೇ ಬುಧವಾರ ಸಂಜೆ 6ಕ್ಕೆ ಮೊದಲ ದಿನದ ಮಹಾಸಂಚಿಕೆ ಶುರುವಾಗಲಿದೆ. 12 ಮಂದಿ ಸ್ಪರ್ಧಿಗಳು ತಯಾರಿದ್ದಾರೆ. ಇನ್ನು ಬಿಗ್ಬಾಸ್ ಕೊರೊನಾ ಸಂಕಷ್ಟಕ್ಕೆ ಸಿಲುಕಿ ಅರ್ಧದಲ್ಲಿಯೇ ನಿಂತು ಹೋಗಿತ್ತು. ಸ್ಪರ್ಧಿಗಳು ತಾವು ಕಟ್ಟಿಕೊಂಡು ಬಂದಿದ್ದ ಕನಸನ್ನು ಬಿಗ್ಬಾಸ್ ಮನೆಯಲ್ಲಿ ಈಡೇರಿಸಿಕೊಳ್ಳಲಾರದೆ ಅರ್ಧಕ್ಕೆ ಹೊರ ಬಂದಿದ್ದರು. ಇದೀಗ ಅವರ ಕನಸು ನನಸಾಗುವ ಸಮಯ ಬಂದಿದೆ. ಸ್ಪರ್ಧಿಗಳು ಹೊಸ ಗೇಮ್ ಪ್ಲ್ಯಾನ್ನೊಂದಿಗೆ ಗ್ರ್ಯಾಂಡ್ ಆಗಿ ಮನೆಯನ್ನು ಪ್ರವೇಶ ಮಾಡಲಿದ್ದಾರೆ.
ಮಂಜು ಪಾವಗಡ, ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ್, ಪ್ರಿಯಾಂಕಾ ತಿಮ್ಮೇಶ್, ದಿವ್ಯಾ ಸುರೇಶ್, ಅರವಿಂದ್ ಕೆ.ಪಿ., ದಿವ್ಯಾ ಉರುಡುಗ, ನಿಧಿ ಸುಬ್ಬಯ್ಯ, ಶುಭಾ ಪೂಂಜಾ, ರಘು ಗೌಡ, ವೈಷ್ಣವಿ ಗೌಡ, ಶಮಂತ್ ಬ್ರೋ ಗೌಡ ಈಗಾಗಲೇ ತಮ್ಮ ಸೂಟ್ಕೇಸ್ ಪ್ಯಾಕ್ ಮಾಡಿಕೊಂಡು ಹೋಟೆಲ್ ಅಲ್ಲಿ ಕ್ವಾರಂಟೈನ್ ಆಗಿದ್ದಾರೆ. ಜಗಳ, ಮುನಿಸು, ಗೇಮ್, ಸ್ನೇಹ, ಕಾಮಿಡಿ ಇರುವ ಮನೆಯಲ್ಲಿ ಇನ್ನೂ ಏನೋ ಹೊಸತು ಇರಲಿದೆ. ಏನೆಲ್ಲಾ ಬದಲಾವಣೆಯನ್ನು ಬಿಗ್ಬಾಸ್ ಮಾಡಿಕೊಂಡಿದ್ದಾರೆ. ಯಾವೆಲ್ಲಾ ಮಸಾಲೆಯನ್ನು ಹಾಕಿ ಬಿಗ್ಬಾಸ್ ಮೊದಲ ಇನ್ನಿಂಗ್ಸ್ಗಿಂತ ವಿಭಿನ್ನವಾಗಿ ತೆರೆ ಮೇಲೆ ತರಲಿದ್ದಾರೆ…? ಹಳೆ ಸ್ಪರ್ಧಿಗಳ ಜೊತೆಗೆ ಮತ್ತೆ ಯಾರಾದ್ರೂ ಹೊಸಬರು ಬಿಗ್ಬಾಸ್ ಮನೆಯನ್ನು ಪ್ರವೇಶ ಮಾಡಲಿದ್ದಾರಾ…? ಎನ್ನುವುದನ್ನು ಕಾದು ನೋಡಬೇಕಿದೆ.
ಸದ್ಯ ಕುತೂಹಲಕಾರಿ ಘಟ್ಟದತ್ತ ಬಿಗ್ ಬಾಸ್ ನ್ನು ಕೊಂಡೊಯ್ಯಬೇಕಾಗಿರುವುದರಿಂದ ಟಾಸ್ಕ್ ಯಾವ ರೀತಿ ಇರಲಿದೆಯೋ ಗೊತ್ತಿಲ್ಲ. ಆದರೂ ನೋಡುಗರನ್ನು ರಂಜಿಸಲು ಮತ್ತು ಅವರ ನಾಡಿ ಮಿಡಿತ ಅರಿತು ಅದರಂತೆ ನಡೆದುಕೊಳ್ಳಲು ಒಂದಷ್ಟು ಗೇಮ್ ಪ್ಲಾನ್ ಮಾಡಿಕೊಂಡೇ ಸ್ಪರ್ಧಿಗಳು ದೊಡ್ಡಮನೆ ಪ್ರವೇಶ ಮಾಡುತ್ತಿರುವುದಂತು ನಿಜ ಮುಂದೆ ಏನಾಗುತ್ತೆ ಎಂಬುದು ಮಾತ್ರ ನೋಡಿದ ಮೇಲೆಯೇ ಗೊತ್ತಾಗಲಿದೆ.

By admin