ಇಂದು  ಚಾಮರಾಜ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಗಂಗೋತ್ರಿ ಬಡಾವಣೆ ಕುದುರೆಮಾಳದಲ್ಲಿ, ಯಾದವಗಿರಿಯ ಮಂಜುನಾಥಪುರದಲ್ಲಿ ಹಾಗೂ ಕೈಲಾಸಪುರಂ ಪ್ರದೇಶಗಳಲ್ಲಿ ವಾಸಿಸುತ್ತಿರುವ ಕೊಳಗೇರಿ ನಿವಾಸಿಗಳಿಗೆ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ  ಸಂಸದರಾದ  ಪ್ರತಾಪ್ ಸಿಂಹರವರು ಹಾಗೂ ಚಾಮರಾಜ ವಿಧಾನಸಭಾ ಕ್ಷೇತ್ರದ  ಶಾಸಕರಾದ  ಎಲ್.ನಾಗೇಂದ್ರ ರವರು ಮೈಸೂರು ಮಹಾನಗರ ಪಾಲಿಕೆಯ ವಾರ್ಡ್ ಸಂ-21 ರ ಸದಸ್ಯರಾದ  ವೇದಾವತಿ, ವಾರ್ಡ್ ಸಂ-18 ರ ರವೀಂದ್ರ, ವಾರ್ಡ್ ಸಂ-25 ರ  ರಂಗಸ್ವಾಮಿ ರವರ ಸಮ್ಮುಖದಲ್ಲಿ ಭೂಮಿಪೂಜೆಯನ್ನು ನೆರವೇರಿಸಿದರು.

ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯ ವತಿಯಿಂದ ಪ್ರಧಾನ ಮಂತ್ರಿ ಆವಾಜ್ ಯೋಜನೆಯಡಿ ಸರ್ವರಿಗೂ ಸೂರು ಕಾರ್ಯಕ್ರಮದಡಿಯಲ್ಲಿ ಚಾಮರಾಜ ವಿಧಾನ ಸಭಾ ಕ್ಷೇತ್ರಕ್ಕೆ ಮಂಜೂರಾದ ಒಟ್ಟು 655 ಮನೆಗಳಲ್ಲಿ ಗಂಗೋತ್ರಿ ಕುದುರೆಮಾಳದಲ್ಲಿ 60 ಮನೆಗಳು, ಮಂಜುನಾಥಪುರದಲ್ಲಿ 102 ಮನೆಗಳು ಹಾಗೂ ಕೈಲಾಸಪುರಂನಲ್ಲಿ 66 ಕೊಳಚೆ ಪ್ರದೇಶದ ನಿವಾಸಿಗಳಿಗೆ ಮನೆಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಿ ಪ್ರತಿ ಮನೆ ನಿರ್ಮಾಣದ ವೆಚ್ಚ ರೂ:4.80ಲಕ್ಷಗಳಾಗಿದ್ದು ಈ ಮೊತ್ತದಲ್ಲಿ ಕೇಂಧ್ರ ಸರ್ಕಾರದ ಸಹಾಯಧನ ರೂ.1.50ಲಕ್ಷ ಹಾಗೂ ರಾಜ್ಯ ಸರ್ಕಾರದ ರೂ.1.80ಲಕ್ಷ ಪ.ಜಾ/ಪ.ವರ್ಗಕ್ಕೆ ಸೇರಿದವರಿಗೆ ಹಾಗೂ ಸಾಮಾನ್ಯ ವರ್ಗದವರಿಗೆ ರೂ.1.20ಲಕ್ಷ ಸಹಾಯಧನವನ್ನು ನೀಡಲಿದ್ದು ಫಲಾನುಭವಿಯ ವಂತಿಗೆಯ ಮೊತ್ತ ಪ.ಜಾ/ಪ.ವರ್ಗದವರು ರೂ.48000/- ಗಳನ್ನು ಹಾಗೂ ಸಾಮಾನ್ಯ ವರ್ಗದವರು ರೂ.96000/-ಗಳನ್ನು ಭರಿಸಿರುವ ಫಲಾನುಭವಿಗಳಿಗೆ ಮನೆ ನಿರ್ಮಾಣ ಮಾಡುವ ಕಾರ್ಯಕ್ರಮ ಇದಾಗಿದ್ದು, ಚಾಮರಾಜ ಕ್ಷೇತ್ರದಾಧ್ಯಂತ ಕೊಳಚೆ ಪ್ರದೇಶ ನಿರ್ಮೂಲನೆಗಾಗಿ ನಾನು ಸಂಸದರಾದ ಪ್ರತಾಪಸಿಂಹ ರವರು ಶ್ರಮಿಸುತ್ತಿರುವುದಾಗಿ ಹಾಜರಿದ್ದ ಪತ್ರಿಕಾ ಮಾಧ್ಯಮದವರಿಗೆ ಮಾಹಿತಿ ನೀಡಿದರು, ಇದಲ್ಲದೇ ಕುದುರೆಮಾಳದ ರಾಜಕಾಲುವೆಯ ಪಕ್ಕದಲ್ಲಿಯೇ ನಿರ್ಮಿಸಿಕೊಂಡಿರುವ ಗುಡಿಸಲು ವಾಸಿಗಳು ಮಳೆಗಾಲದಲ್ಲಿ ಪ್ರಾಣ ಹಾನಿಯಾಗುವ ಸಂಭವವಿರುವುದನ್ನು ಅರಿತು ಈ ಕುರಿತಂತೆ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಸೇರಿದ ಸುಮಾರು 1.5 ಎಕರೆ ಜಮೀನನ್ನು ಈ ನಿವಾಸಿಗಳಿಗೆ ಮನೆ ನಿರ್ಮಿಸಿಕೊಡಲು ಕಾಯ್ದಿರಿಸಿದ್ದು, ಈ ಕೆಲಸವನ್ನು ಆದಷ್ಟೂ ಶೀಘ್ರವಾಗಿ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಕುದುರೆ ಮಾಳದ ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ  ರಮೇಶ್ & ಪುನೀತ್ ಗೌಡ, ಕುದುರೆಮಾಳ ಗ್ರಾಮದ ಅಧ್ಯಕ್ಷರಾದ  ಸುಬ್ರಮಣ್ಣ, ಉಪಾಧ್ಯಕ್ಷರಾದ  ದೇವರಾಜ್, ಮುಖಂಡರಾದ ಅಯ್ಯವು,  ಕೃಷ್ಣ, ಮಹದೇವ,  ರಂಗಸ್ವಾಮಿ, ಮಾಹೇಂದ್ರ, ವೀರ, ಕುಮಾರ್, ರಂಗಣ್ಣ, ಮಂಜು, ಭಾರತೀಯ ಜನತಾ ಪಕ್ಷದ ವಿವಿಧ ಪದಾಧಿಕಾರಿಗಳು, ಮುಂತಾದವರುಗಳು ಹಾಜರಿದ್ದರು.

 

 

By admin