ಚಾಮರಾಜನಗರ: ತಾಲೂಕಿನ ದೊಡ್ಡಮೋಳೆ, ಬ್ಯಾಡಮೂಡ್ಲು, ಗ್ರಾಮಗಳಲ್ಲಿ ವಿಶೇಷ ಅಭಿವೃದ್ದಿ ಯೋಜನೆಯಡಿಯಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ ಅಭಿವೃದ್ಧಿ ಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು.
ನಂತರ ಅವರು ಮಾತನಾಡಿ, ಗ್ರಾಮಗಳ ಸ್ವಚ್ಛತೆ ಕಾಪಾಡಲು ಚರಂಡಿ, ಸಂಚಾರಕ್ಕೆ ಉತ್ತಮ ರಸ್ತೆ ಅಗತ್ಯವಿದೆ. ಜನರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ದೊಡ್ಡಮೋಳೆ, ಬ್ಯಾಡಮೂಡ್ಲು, ಗ್ರಾಮಗಳಲ್ಲಿ ತಲಾ ೨೫ ಲಕ್ಷ ರೂ.ನಂತೆ ೫೦ ಲಕ್ಷ ರೂ.ವೆಚ್ಚದಲ್ಲಿ ರಸ್ತೆ, ಚರಂಡಿ ಅಭಿವೃದ್ಧಿಗೆ ಗುದ್ದಲಿಪೂಜೆ ನೆರವೇರಿಸಲಾಗಿದೆ.
ಗ್ರಾಮಗಳಲ್ಲಿ ಸಂಗ್ರಹವಾಗುವ ಹಸಿಕಸವನ್ನು ಒಂದೆಡೆ ಹಾಕಲು ಉದ್ಯೋಗಖಾತರಿ ಯೋಜನೆಯಡಿ, ದೊಡ್ಡಮೋಳೆ ಗ್ರಾಮದ ಸಮೀಪ ಘನತ್ಯಾಜ್ಯ ಘಟಕವನ್ನು ೧೫ ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತದೆ, ಗ್ರಾಮಗಳಿಗೆ ಅಗತ್ಯವಾಗಿ ಬೇಕಾದ ರಸ್ತೆ ಚರಂಡಿ ಸಮುದಾಯ ಭವನ ಕುಡಿಯುವ ನೀರು ಸೇರಿದಂತೆ ಮೋಳೆಗಳಿಗೂ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಗುತ್ತಿಗೆದಾರರು ನಿಗಧಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಶಾಸಕರು ಸೂಚಿಸಿದರು.
ಗ್ರಾಪಂ ಅಧ್ಯಕ್ಷೆ ಮಂಜುಳಗಣೇಶ್, ಯಶೋದ ನಾರಾಯಣಸ್ವಾಮಿ ಸದಸ್ಯರಾದ ದೊರೆಸ್ವಾಮಿ, ರಾಜೇಶ್ ರಾಜಣ್ಣ ಲೊಕೇಶ್ ಮಹದೇವಶೆಟ್ಟಿ ಮರಿಸ್ವಾಮಿ ಸೇರಿದಂತೆ ಮುಖಂಡರು, ಗ್ರಾಮಸ್ಥರು ಹಾಜರಿದ್ದರು.