ಚಾಮರಾಜನಗರ: ತಾಲ್ಲೂಕಿನ ಚಂದುಕಟ್ಟೆ ಮೋಳೆ ಗ್ರಾಮದಲ್ಲಿ ವಿಶೇ?ಘಟಕ ಯೋಜನೆಯಡಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ೮೫ ಲಕ್ಷ ರೂ.ವೆಚ್ಚದ ದೊಡ್ಡಮೋರಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ, ಗ್ರಾಮದಲ್ಲಿ ಬಳಸಿ ಹರಿಸುವ ನೀರು ಸರಾಗವಾಗಿ ಹರಿದು ಹೋಗಲು ಬಹಳ ಸಮಸ್ಯೆಯಾಗಿತ್ತು. ಇದನ್ನು ಮನಗಂಡು ವಿಶೇಷ ಅಭಿವೃದ್ಧಿ ಯೋಜನೆಯಡಿ ೮೫ ಲಕ್ಷ ರೂ.ವೆಚ್ಚದಲ್ಲಿ ದೊಡ್ಡಮೋರಿ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ಮಾಡಲಾಗಿದೆ,
ಗ್ರಾಮದಲ್ಲಿ ನಿರ್ಮಿಸಲಾಗುವ ದೊಡ್ಡಮೋರಿ ಕಾಮಗಾರಿಯನ್ನು ಜನರೇ ಮುಂದೆ ನಿಂತು ಮಾಡಿಸಿಕೊಳ್ಳಬೇಕು. ಅಭಿವೃದ್ಧಿ ಕಾರ್ಯಕ್ಕೆ ಗ್ರಾಮದ ನತೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಾದ ದೊಡ್ಡಮೋಳೆ, ಚಿಕ್ಕಮೋಳೆ ಸೇರಿದಂತೆ ಸುತ್ತ ಮುತ್ತಲ ಗ್ರಾಮಗಳಲ್ಲಿ ಕುಡಿಯುವನೀರಿನ ಸೌಲಭ್ಯ, ಸಮುದಾಯಭವನಗಳ ನಿರ್ಮಾಣ, ಬಡಾವಣೆಗಳಿಗೆ ಚರಂಡಿ ನಿರ್ಮಾಣ ಸೇರಿದಂತೆ ಮೂಲಸೌಕರ್ಯ ಕಲ್ಪಿಸಲಾಗಿದೆ.
ಈ ಭಾಗದ ಗ್ರಾಮಗಳಿಗೆ ಮುಂದಿನದಿನಗಳಲ್ಲೂ ಮೂಲಭೂತಸೌಕರ್ಯ ಕಲ್ಪಿಸಲು ಆಧ್ಯತೆ ನೀಡಲಾಗುತ್ತದೆ.
ಸಮುದಾಯಭವನಗಳ ನಿರ್ಮಾಣ ಮಾಡಿದರೆ ಸಾಲದು,
ಅವುಗಳನ್ನು ಸದಾಚಟುವಟಿಕೆ ತಾಣಗಳನ್ನಾಗಿ ಮಾಡಬೇಕು, ಸಮುದಾಯಭವನಗಳ ನಿರ್ಮಾಣ ಕಾಮಗಾರಿ ಕೆಲಕಡೆ ಕಾಮಗಾರಿ ಪ್ರಗತಿಯಲ್ಲಿವೆ, ಅವಶ್ಯವಿರುವೆಡೆ ಭವನಗಳ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು ಎಂದರು.
ಗ್ರಾಪಂ ಅಧ್ಯಕ್ಷೆ ಯಶೋದ ನಾರಾಯಣಸ್ವಾಮಿ. ಸದಸ್ಯ ರಾದ ಕಮಲಮ್ಮ, ದೊರೆಸ್ವಾಮಿ, ಮಂಜುನಾಥ್, ರಾಜಣ್ಣ, ಲೋಕೇಶ್, ಮುಖಂಡರಾದ ಚನ್ನಬಸವಶೆಟ್ಟಿ, ಯಜಮಾನ್ ಎನ್.ಮಹದೇವಸ್ವಾಮಿ, ನವೀನ್, ಸಿ.ಎಸ್.ನಾಗರಾಜು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.