ಚಾಮರಾಜನಗರ: ತಾಲ್ಲೂಕಿನ ದೊಡ್ಡಮೋಳೆ ಗ್ರಾಮದ ಹೊರವಲಯದಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ ಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು.
ನಂತರ ಮಾತನಾಡಿ, ಗ್ರಾಮಗಳಲ್ಲಿ ಸಂಗ್ರಹವಾಗುವ ಹಸಿಕಸವನ್ನು ಒಂದೆಡೆ ಹಾಕಲು ಉದ್ಯೋಗಖಾತರಿ ಯೋಜನೆಯಡಿ, ಗ್ರಾಮದ ಸಮೀಪ ಘನತ್ಯಾಜ್ಯ ಘಟಕವನ್ನು ೧೫ ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತದೆ, ಉದ್ಯೋಗಖಾತರಿ ಯೋಜನೆಯಡಿ ಶಾಲೆಸುತ್ತುಗೋಡೆ, ರಸ್ತೆ ನಿರ್ಮಾಣ ಮಾಡುವ ಅವಕಾಶವಿದೆ ಎಂದರು.
ಇದೇವೇಳೆ ಗ್ರಾಮದಲ್ಲಿ ೧೫ ನೇ ಹಣಕಾಸು ಯೋಜನೆಯಡಿ ೪೬ ಲಕ್ಷ ರೂ.ವೆಚ್ಚದಲ್ಲಿ ಆರೋಗ್ಯ ಮತ್ತು ಕ್ಷೇಮಕೇಂದ್ರ ಕಟ್ಟಡಕಾಮಗಾರಿಗೂ ಶಾಸಕರು ಭೂಮಿಪೂಜೆ ನೆರವೇರಿಸಿದರು.
ನೆಲಹಂತಸ್ತಿನಲ್ಲಿ ಕ್ಷೇಮಕೇಂದ್ರ, ದಾಖಲೆಕೊಠಡಿ, ಪ್ರಯೋಗಾಲಯ, ಶೌಚಾಲಯ ನಿರ್ಮಾಣ, ಮೊದಲಅಂತಸ್ತಿನಲ್ಲಿ ಅಡುಗೆಕೋಣೆ,ಊಟದ ಹಾಲ್ ನಿರ್ಮಾಣ ಮಾಡಲಾಗುತ್ತದೆ. ಕಾಮಗಾರಿ ನಿರ್ವಹಣೆ ಗುತ್ತಿಗೆದಾರರು ನಿಗಧಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಸೇವೆಗೆ ಅರ್ಪಿಸಬೇಕು ಎಂದು ಶಾಸಕರು ಸೂಚಿಸಿದರು.
ಗ್ರಾಪಂ ಅಧ್ಯಕ್ಷೆ ಮಂಜುಳಗಣೇಶ್, ಸದಸ್ಯರಾದ ದೊರೆಸ್ವಾಮಿ, ಮಹದೇವಸ್ವಾಮಿ, ಲೋಕೇಶ್, ರಾಜಣ್ಣ, ಎಸ್‌ಡಿಎಂಸಿ ಅಧ್ಯಕ್ಷ ಕರಗಪ್ಪ, ಎಇಇ ಅಂಬರೀಶ್, ಗುತ್ತಿಗೆದಾರ ಅಶೋಕ್, ಕಾರ್ಯದರ್ಶಿ ನೀಲಕಂಠ ಸೇರಿದಂತೆ ಮುಖಂಡರು, ಗ್ರಾಮಸ್ಥರು ಹಾಜರಿದ್ದರು.