ಚಾಮರಾಜನಗರ: ನಗರದ ಭಾರತಸೇವಾದಳ ಜಿಲ್ಲಾಸಮಿತಿಕಚೇರಿಯಲ್ಲಿ ಸೇವಾದಳ ನೂತನ ಪದಾಧಿಕಾರಿಗಳ ಆಯ್ಕೆ ಚುನಾವಣೆ ನಡೆಯಿತು.
ನೂತನ ಅಧ್ಯಕ್ಷರಾಗಿ ವೆಂಕಟನಾಗಪ್ಪಶೆಟ್ಟಿ(ಬಾಬು), ಉಪಾಧ್ಯಕ್ಷರಾಗಿ ಕೊಂಗರಹಳ್ಳಿ ನಾಗರಾಜು, ಕಾರ್ಯದರ್ಶಿಯಾಗಿ ಅಪ್ಪುಮಾಸ್ಟರ್‌ಮಹದೇವಯ್ಯ, ಕೇಂದ್ರಸಮಿತಿಸದಸ್ಯರಾಗಿ ಎಂ.ಬಿ.ಲಿಂಗರಾಜು, ಕೋಶಾಧ್ಯಕ್ಷರಾಗಿ ವಿ.ಶ್ರೀನಿವಾಸಪ್ರಸಾದ್, ನೂತನ ಸದಸ್ಯರಾಗಿ ಎನ್.ಜೋಸೆಫ್, ಮಹೇಶ್.ಜಿ.ಬಳಿಗಾರ್, ವೆಂಕಟೇಶ್ ನಾಯ್ಕ, ವೈ.ಎಂ.ಮಂಜುನಾಥ್, ಷಡಕ್ಷರಸ್ವಾಮಿ, ನಾಗೇಂದ್ರ, ಆರ್.ಎನ್.ರೇಖಾ, ಉತ್ತವಳ್ಳಿಶಿವರಾಜು ಅವಿರೋಧವಾಗಿ ಆಯ್ಕೆಯಾದರು.
ಜಿಲ್ಲಾಸಮಿತಿ ಸದಸ್ಯರಾಗಿ ತಗಡೂರಯ್ಯ, ವಿ.ಮಹೇಶ್ವರಿ ಆಯ್ಕೆಯಾದರು.
ನೂತನ ಅಧ್ಯಕ್ಷ ವೆಂಕಟನಾಗಪ್ಪಶೆಟ್ಟಿ (ಬಾಬು) ಮಾತನಾಡಿ, ನಾ.ಸು.ಹರ್ಡಿಕರ್ ಸ್ಥಾಪಿಸಿದ ಭಾರತ್ ಸೇವಾದಳ ಸೇವೆಗಾಗಿ ಬಾಳು ಎಂಬುದಾಗಿದೆ. ಇದರಲ್ಲಿ ಅವಕಾಶ ಸಿಗುವುದು ಅಪರೂಪ, ದೇಶಪ್ರೇಮ, ದೇಶಭಕ್ತಿ ಬೆಳೆಸುವುದರಲ್ಲಿ ಸೇವಾದಳದ ಕಾರ್ಯ ಅನನ್ಯ, ಶಿಕ್ಷಕರ ಪಾತ್ರ ಅತ್ಯಂತ ಅಮೂಲ್ಯವಾಗಿದೆ ಎಂದರು.
ಸೇವಾದಳವನ್ನು ಜಿಲ್ಲೆಯಲ್ಲೇ ಮಾದರಿಯಾಗಿ ಮಾಡಲು ಸೇವಾದಳದ ಸದಸ್ಯರು ಒಗ್ಗಟ್ಟಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದರು.
ಭಾರತಸೇವಾದಳದ ತಾಲೂಕು ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ ಮಾತನಾಡಿ, ನಾ.ಸು. ಹರ್ಡಿಕರ್ ಅವರ ಆದರ್ಶ, ತತ್ವಗಳನ್ನು ನೂತನ ಜಿಲ್ಲಾ ಸಮಿತಿಪದಾಧಿಕಾರಿಗಳು ಪಾಲನೆ ಮಾಡುವ ಮೂಲಕ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು, ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಸೇವಾದಳ ಮಾದರಿಯಾಗಿ ಬೆಳೆಸುವ ಮಹತ್ತರ ಕಾರ್ಯ ಕೈಗೊಳ್ಳಬೇಕು ಎಂದರು.
ಚುನಾವಣಾಧಿಕಾರಿಯಾಗಿ ವಲಯಸಂಘಟಕ ಕೆ.ಈರಯ್ಯ ಕಾರ್ಯನಿರ್ವಹಿಸಿದರು.
ಸೇವಾದಳ ತಾಲೂಕು ಉಪಾಧ್ಯಕ್ಷ ಸಿ.ಮಲ್ಲಿಕಾರ್ಜುನ್, ಕೊಳ್ಳೇಗಾಲ ತಾಲೂಕುಘಟಕದ ಬಿ.ಕೆ.ಪ್ರಕಾಶ್, ಕುಮಾರಸ್ವಾಮಿ, ಸಿ.ಎಂ.ಸುಬ್ರಹ್ಮಣ್ಯ(ಕಲಾಮಣಿ), ಎಚ್.ಎಂ.ಸತೀಶ್ ಹಾಜರಿದ್ದರು.
