ಚಾಮರಾಜನಗರ: ತಾಲೂಕಿನ ಮಂಗಲ ಗ್ರಾಮದಲ್ಲಿ ಶ್ರೀ ಭಗೀರxಮಹರ್ಷಿ ಜಯಂತಿ ಅಂಗವಾಗಿ ವಿಜೃಂಭಣೆಯ ಮೆರವಣಿಗೆ ನಡೆಯಿತು.
ಗ್ರಾಮದ ಉಪ್ಪಾರ ಬಡಾವಣೆಯಲ್ಲಿ ನಡೆದ ದೇವರ ಗುಡಪ್ಪ ಮನೆಯ ಮುಂಭಾಗ ಭಗೀರಥಮಹರ್ಷಿ ಭಾವಚಿತ್ರಕ್ಕೆ ಶ್ರೀ ಮಂಜುನಾಥಸ್ವಾಮೀಜಿ ಅವರು ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಗ್ರಾಮಸ್ಥರು ಮನೆಯ ಮುಂದೆ ರಂಗೋಲಿ ಹಾಗೂ ತಳಿರು ತೋರಣಗಳನ್ನು ಕಟ್ಟಿ ಶೃಂಗರಿಸಲಾಗಿತ್ತು. ಮೆರವಣಿಗೆಯು ಮನೆ ಮುಂದೆ ನಿಂತಾಗ ಭಗೀರಥರ ಭಾವಚಿತ್ರಕ್ಕೆ ಭಕ್ತರು ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡರು. ಗಡಿಯಜಮಾನ ಕೃಷ್ಣ, ಯಜಮಾನರಾದ ಕ್ಯಾತಶೆಟ್ಟಿ, ರಾಮಶೆಟ್ಟಿ, ನಾರಾಯಣಸ್ವಾಮಿ, ಪುಟ್ಟಸ್ವಾಮಿ, ರಂಗಸ್ವಾಮಿ, ಗ್ರಾಪಂ ಸದಸ್ಯ ಅಣ್ಣಪ್ಪಸ್ವಾಮಿ, ಅಂಗಡಿಮಹೇಶ್, ಮಹದೇವಮ್ಮ. ಪ್ರೇಮ, ಸುಧಾ, ಗ್ರಾಪಂ ಮಾಜಿಅಧ್ಯಕ್ಷ ಶಿವಣ್ಣ, ಮಂಗಲಶಿವಕುಮಾರ್, ಜಿ.ಎಂ.ಗಾಡ್ಕರ್, ನೂರೊಂದುಶೆಟ್ಟಿ, ಜಿಪಂ ಮಾಜಿಸದಸ್ಯ ಸಿ.ಎ.ಮಹದೇವಶೆಟ್ಟಿ, ಹನುಮಂತಶೆಟ್ಟಿ, ಕುಸುಮರಾಜ್, ಬಾಗಳಿರೇವಣ್ಣ, ಹಾರ್‍ಮೋನಿಯಂ ಶಿವಣ್ಣ, ಉಪ್ಪಾರ ಯುವಕರ ಸಂಘದ ಅಧ್ಯಕ್ಷ ಜಯಕುಮಾರ್, ಗ್ರಾಮಸ್ಥರು, ಮುಖಂಡರು ಹಾಜರಿದ್ದರು.
