ಚಾಮರಾಜನಗರ: ಚಾಮರಾಜನಗರ ತಾಲೂಕಿನ ಕೋಡಿಮೋಳೆ ಗ್ರಾಮದಲ್ಲಿ ಭಗತ್‌ಸಿಂಗ್ ಯುವಸೇನೆ ವತಿಯಿಂದ ಸ್ವಾಂತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ೯೧ನೇ ವರ್ಷದ ಹುತಾತ್ಮ ದಿನ ಆಚರಿಲಾಯಿತು
ಭಗತ್‌ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದ ಯುವಸೇನೆ ಅಧ್ಯಕ್ಷ ಕಾಂತರಾಜು ಮಾತನಾಡಿ ದೇಶದಲ್ಲಿ ಬ್ರಿಟಿಸರ ಆಡಳಿತ ಕೂನೆ ಗಾಣಿಸಲು ಭಗತ್‌ಸಿಂಗ್ ದಿಟ್ಟ ಹೋರಾಟ ನಡೆಸಿದರು, ದೇಶಕ್ಕಾಗಿ ತ್ಯಾಗ -ಬಲಿದಾನ ಮಾಡಿದ ಭಗತ್‌ಸಿಂಗ್ ಅವರನ್ನು ಗಲ್ಲಿಗೇರಿಸಿದ ದಿನವಾದ ಇಂದು ಪ್ರತಿಯೊಬ್ಬ ಭಾರತೀಯರು ಅವರನ್ನು ಸ್ಮರಿಸಿಕೂಳ್ಳಬೇಕು ಎಂದ ಅವರು ಇಂದಿನ ಯುವಜನತೆ ಈಸ್ವಾತಂತ್ರ್ಯ ಸೇನಾನಿಗಳ ತ್ಯಾಗ ಬಲಿದಾನ ವ್ಯರ್ಥವಾಗದಂತೆ ಯಾವುದೇ ಜಾತಿ ಧರ್ಮಮತ ಪಂಥಗಳೆಂಬ ಭೇದಭಾವಗಳಿಲ್ಲದೆ ಸದಾ ದೇಶದ ಒಳಿತಿಗಾಗಿ ಚಿಂತಿಸುತ್ತಾ ದೇಶ ಆಬಿವೃದ್ಧಿಗೆ ಕೈ ಜೋಡಿಸಿ ಸರ್ವರು ಒಂದೇ ಎಂಬ ಮನೋಭಾವ ಹೊಂದಿ ಎಲ್ಲಾರು ಒಟ್ಟಾಗಿ ನಡೆಯೋಣ ಎಂದರು. ಈ ಸಂಧರ್ಭದಲ್ಲಿ ಡಿ.ಪಿ ಪ್ರಕಾಶ್, ದೇವರಾಜು, ಮಲ್ಲೇಶ್, ಮಂಜು,ರಮೇಶ್, ರವಿ,ಶಿವು, ಇತರರು ಇದ್ದರು.
