ಚಾಮರಾಜನಗರ: ಸ್ವಾತಂತ್ರ ಅಮೃತಮಹೋತ್ಸವದ ಅಂಗವಾಗಿ ಚಾಮರಾಜನಗರ ತಾಲೂಕು ಪ್ರಾಥಮಿಕ ಶಾಲಾಶಿಕ್ಷಕರ ಸಂಘದ ವತಿಯಿಂದ ನಗರದ ಕ್ಷೇತ್ರಶಿಕ್ಷಣಾಧಿಕಾರಿ ಕಚೇರಿ ಮುಂಭಾಗ ಮನೆಮನೆ, ಶಾಲೆಗಳಲ್ಲಿ ಧ್ವಜ ಹಾರಿಸುವ ಕುರಿತು ಕ್ಷೇತ್ರಶಿಕ್ಷಣಾಧಿಕಾರಿ ಡಿ.ಸೋಮಣ್ಣೇಗೌಡ ಚಾಲನೆ ನೀಡಿದರು.
ಇದೇವೇಳೆ ಅವರು ಮಾತನಾಡಿ, ಭಾರತ ಈ ವರ್ಷ ೭೫ ನೇ ವರ್ಷದ ಸ್ವಾತಂತ್ರ್ಯ ಆಚರಣೆ ಮಾಡಿಕೊಳ್ಳುತ್ತಿದೆ. ಆ ಹಿನ್ನೆಲೆಯಲ್ಲಿ ಕೇಂದ್ರಸರಕಾರ ಆ.೧೩ ರಿಂದ ಆ.೧೫ ರವರಗೆ ಪ್ರತಿಮನೆ, ಸರಕಾರಿಕಚೇರಿ, ಶಾಲೆಗಳಲ್ಲಿ ರಾಷ್ಟ್ರಧ್ವಜ ಹಾರಿಸಲು ಆದೇಶ ನೀಡಿದೆ. ಅದರಂತೆ ಶಾಲಾಶಿಕ್ಷಕರು ಮೂರುದಿನಗಳ ಕಾಲ ರಾಷ್ಟ್ರಧ್ವಜ ಹಾರಿಸುವ ಮೂಲಕ ದೇಶಭಕ್ತಿ ಪ್ರದರ್ಶಿಸಬೇಕು ಎಂದರು.

ತಾಲೂಕು ಪ್ರಾಥಮಿಕ ಶಾಲಾಶಿಕ್ಷಕರ ಸಂಘದ ಅಧ್ಯಕ್ಷ ಲಾಲಿಂಗಸ್ವಾಮಿ, ಉಪಾಧ್ಯಕ್ಷ ಸಿ.ಕೆ.ರಾಮಸ್ವಾಮಿ, ಖಜಾಂಚಿ ಕೃಷ್ಣಮೂರ್ತಿ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಮಹದೇವಸ್ವಾಮಿ, ಪ್ರೌಢಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್, ಬಿಆರ್‌ಸಿ ರಾಜು, ಸುಧಾ,ಸವಿತಾರಾಣಿ, ಸುಶೀಲ, ರಾಚಯ್ಯ, ಎಂ.ಡಿ.ಮಹದೇವಯ್ಯ, ಸೋಮಶೇಖರ್, ಕೆಂಪರಾಜು, ಸಂಘದ ಪದಾಧಿಕಾರಿಗಳು, ನಿರ್ದೇಶಕರು ಹಾಜರಿದ್ದರು.