ಚಾಮರಾಜನಗರ: ತಾಲೂಕಿನ ಬೆಂಡರವಾಡಿ ಗ್ರಾಮದ ಲಕ್ಷ್ಮೀದೇವಿ ಜಾತ್ರೆಯಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಭೇಟಿನೀಡಿ, ಲಕ್ಷ್ಮಿದೇವಿಗೆ ಪೂಜೆ ಸಲ್ಲಿಸಿದರು.
ಪೂಜೆಸಲ್ಲಿಸಿದ ಬಳಿಕ ಮಾತನಾಡಿದ ಅವರು, ಕೊರೊನಾ ವೈರಸ್ ಬಾರದಂತೆ ತಡೆಗಟ್ಟುವ ಸಲುವಾಗಿ ಸರಕಾರ ಧಾರ್ಮಿಕಸಭೆ, ಅದ್ದೂರಿಹಬ್ಬ, ಜಾತ್ರಾಮಹೋತ್ಸವಕ್ಕೆ ಸರಕಾರ ನಿರ್ಭಂಧ ಹೇರಿತ್ತು. ಇದೀಗ ಕೊರೊನಾ ಇಳಿಕೆಯಾಗಿದ್ದು, ಜಾತ್ರಾಮಹೋತ್ಸವ, ಧಾರ್ಮಿಕ ಸಮಾರಂಭಗಳಿಗೆ ಹೇರಲಾಗಿದ್ದ ನಿಷೇಧವನ್ನು ತೆರವು ಮಾಡಲಾಗಿದೆ, ಈ ವರ್ಷ ಜಿಲ್ಲೆಯಲ್ಲಿ ಉತ್ತಮಮಳೆಯಾಗುವ ಮೂಲಕ ಜನರು ಸಮೃದ್ದಿಯ ಜೀವನ ನಡೆಸುವಂತಾಗಲಿ ಎಂದು ಹಾರೈಸಿದರು.