ಹುರುಳಿ ಮೆದೆಗೆ ಕಿಡಿಗೇಡಿಗಳಿಂದ ಬೆಂಕಿ: ರೈತರು ಕಂಗಾಲು!
ಗುಂಡ್ಲುಪೇಟೆ: ತಾಲ್ಲೂಕಿನ ಬೊಮ್ಮಲಾಪುರ ಗ್ರಾಮದ ರಸ್ತೆಯಲ್ಲಿ ಹುರುಳಿ ಒಕ್ಕಣೆ ಮಾಡಲು ರೈತರು ಹಾಕಿದ್ದ ಮೆದೆಗಳಿಗೆ ಶುಕ್ರವಾರ ಮಧ್ಯೆ ರಾತ್ರಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಹುರಳಿ ಮೆದೆಗಳು ಸಂಪೂರ್ಣ ಸುಟ್ಟು ಭಷ್ಮವಾಗಿದೆ. ಇದರಿಂದ ರೈತರು ಕೂಡ ಕಂಗಾಲಾಗಿದ್ದಾರೆ.
ಗ್ರಾಮದ ರೈತರಾದ ಸಿದ್ದೂರನಾಯಕ, ಕೊಂಗಳ್ಳಿ ಮಲ್ಲಪ್ಪ, ಪರಮೇಶ್ವರಪ್ಪ, ಶಿವನಾಯ್ಕ, ಕಂಡಕ್ಟರ್ ಆಂಜನೇಯ ಹಾಗೂ ಸಂಜೀವಯ್ಯ ಎಂಬುವರು ಒಕ್ಕಣೆ ಮಾಡಲು ರಾಶಿ ಹಾಕಿದ್ದ 7ಕ್ಕೂ ಹೆಚ್ಚು ಹುರುಳಿ ಮೆದೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಮಧ್ಯೆ ರಾತ್ರಿ ಆರ್ ಎಕ್ಸ್ ಬೈಕಿನಲ್ಲಿ ಓಡಾಡುತ್ತಿದ್ದ ಮೂವರು ಅಪರಿಚಿತರೇ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎಂದು ರೈತರು ಗುಮಾನಿ ಹೊರಹಾಕಿದ್ದು, ತಮಗೆ ಸೂಕ್ತ ಪರಿಹಾರ ಕೊಡಬೇಕೆಂದು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಗ್ರಾಪಂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವರದಿ: ಬಸವರಾಜು ಎಸ್ ಹಂಗಳ