ಕೋವಿಡ್-19 ಬಗ್ಗೆ ಮೈಸೂರಿಗರು ಎಚ್ಚರಿಕೆಯಿಂದ ಇರಬೇಕೆಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.
ಈ ಬಾರಿ ಕೋವಿಡ್-19 ನಿಂದ ಸರಳಾ ದಸರಾ ಆಚರಣೆ ಮಾಡಿದರೂ ಸಹ ಜಿಲ್ಲಾಡಳಿತಕ್ಕೆ ಒಂದು ರೀತಿಯ ಟೆನ್ಷನ್ಸ್ ಇನ್ನೂ ತಪ್ಪಿಲ್ಲ ಎನ್ನಬಹುದು. ಈ ಬಾರಿ ಜಂಬೂ ಸವಾರಿ ಅರಮನೆ ಆವರಣಕ್ಕೆ ಮಾತ್ರ ಸೀಮಿತವಾಗಿತ್ತು, ಆದರೂ ಹೊರ ರಾಜ್ಯ ಗಳಿಂದ ಬರುತ್ತಿರುವ ಪ್ರವಾಸಿಗರಿಂದ ಕೋವಿಡ್-19 ಹೆಚ್ಚುವ ಬೀತಿ ಎದುರಾಗಿದೆ ಎಂದು ಅಂದಾಜಿಸಲಾಗಿದೆ ಏಕೆಂದರೆ ವಿಜಯದಶಮಿಯಂದೇ ಬರೋಬರಿ 7 ಸಾವಿರ ಪ್ರವಾಸಿಗರು ಮೈಸೂರಿನ ಮೃಗಾಲಯಕ್ಕೆ ಆಗಮಿಸಿದ್ದಾರೆ ಇತ್ತ ಕೇರಳದಲ್ಲಿ ಓಣಂ ಹಬ್ಬದ ಬಳಿಕ ಕೋವಿಡ್-19 ಹೆಚ್ಚಿರುವ ಹಿನ್ನೆಲೆಯಲ್ಲಿ ಕೇರಳದಿಂದಲೂ ಬಹಳಷ್ಟು ಮಂದಿ ಮೈಸೂರಿಗೆ ಆಗಮಿಸುತ್ತಿರುವುದರಿಂದ ಒಂದು ರೀತಿಯ ಆತಂಕ ಇದ್ದೇ ಇದೆ. ದಸರಾ ಮುಗಿದ ಬಹಳಷ್ಟು ಆಫರ್ ಎಫೆಕ್ಟ್‍ನಿಂದಾಗಿ ಇತರೇ ರಾಜ್ಯಗಳಿಂದ ಮೈಸೂರಿಗೆ ಬರುತ್ತಿರುವ ಪ್ರವಾಸಿಗರಿಂದ ಜಿಲ್ಲಾಡಳಿತಕ್ಕೆ ತಲೆನೋವಾಗಿದೆ.
ಮತ್ತು ಲೈಟಿಂಗ್‍ಗಾಗಿ ಮುಗಿಬಿದ್ದು ಸೆಲ್ಫಿ ತೆಗೆದುಕೊಳ್ಳಲು ತಾ ಮುಂದು ನೀ ಮುಂದು ಎಂದು ಎಲ್ಲರೂ ಒಟ್ಟಿಗೆ ಸೇರಿದ್ದು, ಜನರು ಸಾಮಾಜಿಕ ಅಂತರವನ್ನು ಮರೆತ ಕಾರಣ ಮೈಸೂರಿನಲ್ಲೂ ಪಾಸಿಟಿವ್ ಪ್ರಕರಣ ಹೆಚ್ಚಗಲಿದೆಯೇ ಎಂಬು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮೈಸೂರಿಗರಿಗೆ ಮುನ್ನೆಚ್ಚರಿಕೆ ಕ್ರಮಗಳನ್ನ ಬಗ್ಗೆ ಮನವಿ ಮಾಡಿದ್ದು, ಇನ್ನೊಂದು ವಾರದೊಳಗೆ ಇದೆಲ್ಲದರ ಬಗ್ಗೆ ಸ್ಪಷ್ಟ ಚಿತ್ರಣ ದೊರಕಲಿದೆ ಎಂಬ ಮಾಹಿತಿಯನ್ನು ತಿಳಿಸಿದ್ದಾರೆ.

By admin