ನ. 3 .ಮೈಸೂರು ಡಿ ದೇವರಾಜ ಅರಸು ರಸ್ತೆ ಯಲ್ಲಿ ಹೊಂದಿಕೊಂಡಂತೆ ಇರುವ ಅಮರ ಜ್ಯೋತಿ ಎಸೆನ್ಸ್ ನಲ್ಲಿ ಆರೋಗ್ಯ ಅಧಿಕಾರಿಗಳು ದಾಳಿ ಮಾಡಿ ಅಂಗಡಿಗೆ ನೋಟೀಸ್ ಜಾರಿ ಮಾಡಿದ್ದಾರೆ.

ನಿನ್ನೆ ರಾತ್ರಿ ಅಮರ ಜ್ಯೋತಿ ಎಸೆನ್ಸ್ ನಲ್ಲಿ ಗ್ರಾಹಕರದ ಶ್ರೀಕಾಂತ್ ಅವರು ಕಿಮಿಯ. ಡೇಟ್ಸ್ ಕರ್ಜೂರ ಖರೀದಿ ಮಾಡಿದ್ದು.

ಕರ್ಜೂರದಲ್ಲಿ. ಹುಳ ಹಾಗೂ ಬೂಸ್ಟ್ ಇಡಿದಿದ್ದು.ಗ್ರಾಹಕ ಆರೋಗ್ಯ ಅಧಿಕಾರಿಗಳ ಗಮನ ತಂದು ಅಂಗಡಿ ವಿರುದ್ದ ಕ್ರಮ ಕೈಗೊಳ್ಳುಬೇಕು ಎಂದು ಗ್ರಾಹಕ ಶ್ರೀಕಾಂತ್ ಅವರು ಆರೋಪ ಮಾಡಿದರು.

ಇಂತಹ ಡ್ರೈ ಫ್ರೂಟ್ಸ್ ಕೊಡುವಲ್ಲಿ ಪೋಷಕರಿಗೆ ಯಾವುದೇ ಅನುಮಾನ ಬೇಡವೇ?
ನಮ್ಮ ಮನೆಯಲ್ಲಿರುವ ಪುಟ್ಟ ಮಕ್ಕಳಿಗೆ ಇಂತಹ ಡ್ರೈ ಫ್ರೂಟ್ಸ್ ಗಳನ್ನು ಸೇವನೆ ಮಾಡಲು ಕೊಡಬಹುದೇ.
ಇಂತಹ ಡ್ರೈ ಫ್ರೂಟ್ಸ್ ಸೇವನೆ ಮಾಡಿದರೆ ಅವರ ಆರೋಗ್ಯಕ್ಕೆ ಅಡ್ಡ ಪರಿಣಾಮಗಳು ಉಂಟಾಗುವುದುಕಂಡಿತಾ.

ಮಕ್ಕಳ ವೈದ್ಯರ ಪ್ರಕಾರ ಚಿಕ್ಕ ಮಕ್ಕಳಿಗೆ ಡ್ರೈ ಫ್ರೂಟ್ಸ್ ಸೇವನೆ ತುಂಬಾ ಒಳ್ಳೆಯದಂತೆ.ಹಾಗಾದರೆ ಮಕ್ಕಳಿಗೆ ಇಂತಹ ಡ್ರೈ ಫ್ರೂಟ್ಸ್ ಕೊಡುವಲ್ಲಿ ಪೋಷಕರಿಗೆ ಯಾವುದೇ ಅನುಮಾನ ಬೇಡವೇ?

ಮಕ್ಕಳಿಗೆ ಡ್ರೈ ಪ್ರೂಟ್:
ಮಕ್ಕಳಿಗೆ ಸಾಮಾನ್ಯವಾಗಿ ಒಂದು ವರ್ಷ ಅಥವಾ ಒಂದು ವರೆ ವರ್ಷ ಕಳೆದ ನಂತರ ಡ್ರೈ ಪ್ರೂಟ್‍ಗಳನ್ನು ನೀಡಬಹುದಾಗಿದ್ದು, ಮಕ್ಕಳ ದೈಹಿಕ ಸಧೃಢತೆಯ ಬೆಳವಣಿಗೆ ಮತ್ತು ಮಕ್ಕಳ ಆಹಾರ ಪದ್ಧತಿಯಲ್ಲಿ ಪ್ರೋಟಿನ್ ಮತ್ತು ಖನಿಜಾಂಶಗಳನ್ನು ಸೇರಿಸಬೇಕಾಗುತ್ತದೆ, ಇದು ಮಕ್ಕಳಲ್ಲಿನ ಅಪೌಷ್ಟಿಕತೆಯನ್ನು ನೀಗಿಸುತ್ತದೆ. ಅಲ್ಲದೆ, ಬೆಳೆಯುವ ವಯಸ್ಸಿನಲ್ಲಿ ಮಕ್ಕಳಿಗೆ ಕೆಲವು ಬಗೆಯ ಪೌಷ್ಟಿಕಾಂಶಗಳನ್ನು ಕ್ಯಾಲೋರಿ ಗಳನ್ನು ಮತ್ತು ಕೊಬ್ಬಿನ ಅಂಶಗಳನ್ನು ನೀಡಬೇಕು, ಇದು ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಸಹಾಯಕವಾಗುತ್ತದೆ.
ಸಾಧಾರಣವಾಗಿ ಡ್ರೈ ಪ್ರೂಟ್‍ಗಳು ಉಷ್ಣಸಂಬಂಧಿ ಆಹಾರಪದಾರ್ಥಗಳು ಎನಿಸಿಕೊಂಡಿವೆ. ಹಾಗಾಗಿ ಮಕ್ಕಳ ದೇಹದ ತಾಪಮಾನದಲ್ಲಿ ವಿಪರೀತ ಏರಿಕೆಯಾಗುವುದನ್ನು ತಪ್ಪಿಸಲು ಡ್ರೈ ಪ್ರೂಟ್‍ಗಳನ್ನು ಸ್ವಲ್ವಕಾಲ ನೀರಿನಲ್ಲಿ ನೆನೆಸಿ ನಂತರ ಮಕ್ಕಳಿಗೆಸೇವಿಸಲು ನೀಡಬಹುದಾಗಿರುತ್ತದೆ. ಮತ್ತು ಡ್ರೈ ಪ್ರೂಟ್‍ಗಳಲ್ಲಿ ಆಂಟಿ ನ್ಯೂಟ್ರಿಷಿಯನ್ ಅಂಶಗಳು ಕಡಿಮೆ ಯಾಗುತ್ತವೆ ಹಾಗೂ ಸರಿಯಾದ ಪ್ರಮಾಣದಲ್ಲಿ ಮಗುವಿನ ದೇಹಕ್ಕೆ ಒಮೆಗಾ 3 ಮತ್ತು ಒಮೆಗಾ 6 ಫ್ಯಾಟಿ ಆಮ್ಲಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಡ್ರೈ ಪ್ರೂಟ್‍ಗಳಲ್ಲಿ ಯಾವುದೇ ಪೌಷ್ಟಿಕಾಂಶದ ಕೊರತೆ ಇರುವುದಿಲ್ಲ, ಒಣ ದ್ರಾಕ್ಷಿ, ಒಣ ಖರ್ಜೂರ. ಏಪ್ರಿಕಾಟ್ ಹಣ್ಣುಗಳಲ್ಲಿ ನಾರಿನಾಂಶ ಅಧಿಕವಾಗಿರುತ್ತದೆ. ಇದು ಮಕ್ಕಳಲ್ಲಿನ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ದೂರಮಾಡುತ್ತದೆ,

ನಮ್ಮ ಮನೆಗಳಲ್ಲಿ ನಡೆಯುವ ವಿಶೇಷ ಖುಷಿಯ ಸಂದರ್ಭದಲ್ಲಿ ಮನೆಗೆ ಬರುವ ನೆಂಟರಿಷ್ಟರಿಗೆ ಉಣಬಡಿಸಲು ತಯಾರು ಮಾಡುವ ಸಿಹಿ ಖಾದ್ಯಗಳಲ್ಲಿ ಹೆಚ್ಚಾಗಿ ಇವುಗಳನ್ನು ಬಳಕೆ ಮಾಡುತ್ತೇವೆ. ಸಾಧಾರಣವಾಗಿ ನಾವು ಬಳಕೆ ಮಾಡುವ ಡ್ರೈ ಫ್ರೂಟ್ಸ್ ಗಳೆಂದರೆ ದ್ರಾಕ್ಷಿ, ಗೋಡಂಬಿ, ಖರ್ಜೂರ, ಬಾದಾಮಿ, ಪಿಸ್ತಾ, ವಾಲ್ನಟ್, ಹ್ಯಾಝೆಲ್ನಟ್, ಬ್ರೆಜಿಲ್ ನಟ್, ಪೈನ್ ನಟ್, ಆಪ್ರಿಕಾಟ್, ಸ್ವೀಟ್ ಲೈಮ್, ಕಿವಿ, ಪೆಕನ್ ಇತ್ಯಾದಿಗಳು. ಆದರೆ ಇವುಗಳನ್ನು ನಮ್ಮ ಬಾಯಿ ರುಚಿಗೆ ತಕ್ಕಂತೆ ನಮ್ಮ ಅಡುಗೆ ಪದಾರ್ಥಗಳಲ್ಲಿ ಉಪಯೋಗಿಸಿ ನಾವು ಸುಲಭವಾಗಿ ಸೇವಿಸುತ್ತೇವೆ ಆದರಿಂದ ತಿನ್ನುವಾಗ ಖರೀದಿ ಮಾಡುವಾಗ ಎಚ್ಚರವಿರಲಿ.

ಈ ಬಗ್ಗೆ ಡಿಷ್ಟ್ರಿಬ್ಯೂಟರ್ ಪಾಂಡುರಂಗ ಅವರು ದೂರವಾಣಿ ಕರೆಗೆ ಸ್ಪಂದಿಸಿ ಕಳೆದ 20 ವರ್ಷಗಳಿಂದ ಅವರು ಈ ವಹಿವಾಟು ಮಾಡುತ್ತಿದ್ದು ಯಾವತ್ತು ಹೀಗಾಗಿರಲಿಲ್ಲ. ಒಮೊಮ್ಮೆ ಒಂದುದೆರಡು ಗೊನೆಗಳಲ್ಲಿ ಈ ರೀತಿಯ ಹುಳುಗಳು ಕಂಡು ಬಂದಿದ್ದು ಪ್ಯಾಕಿಂಗ್ ಸಮಯದಲ್ಲಿ ಈ ರೀತಿ ಆಗಿರಬಹುದು, ಈ ರೀತಿ ಆಗಿರುವುದು ಇದೇ ಪ್ರಥಮ ಬಾರಿ. ಬಾಂಬೆಯಿಂದ ಪ್ಯಾಕಿಂಗ್ ಬರುತ್ತದೆ ಅದನ್ನು ನಾವು ಯಾವುದೇ ಕಾರಣಕ್ಕೂ ತೆಗೆಯುವುದಿಲ್ಲ. ನೇರ ಅಂಗಡಿಗಳಿಗೆ ಸರಬರಾಜು ಮಾಡುತ್ತೇವೆಂದು ತಿಳಿಸಿದರು.

By admin