ಮೈಸೂರು:  ಬಟ್ಟೆ ಅಂಗಡಿಗಳನ್ನು  ಪ್ರತಿದಿನ ಕನಿಷ್ಠ ನಾಲ್ಕು ಗಂಟೆಗಳ ಕಾಲ ವ್ಯಾಪಾರ ಮಾಡಲು ಅನುವು ಮಾಡಿಕೊಡಬೇಕೆಂದು ಜವಳಿ ಮತ್ತು ಸಿದ್ಧ ಉಡುಪುಗಳ ವರ್ತಕರ ಸಂಘದ ವತಿಯಿಂದ ಶಾಸಕ  ಎಸ್ ಎ ರಾಮದಾಸ್ ಅವರಿಗೆ  ಮನವಿ ಸಲ್ಲಿಸಲಾಯಿತು.

ನಗರದ  ಸಿದ್ಧಾರ್ಥ ಲೇಔಟ್ ನಲ್ಲಿರುವ ಜೆಎಸ್ ಎಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಮೈಸೂರು ಜವಳಿ ಮತ್ತು ಸಿದ್ಧ ಉಡುಪುಗಳ ವರ್ತಕರ ಸಂಘದ ಅಧ್ಯಕ್ಷ  ಆರ್ ಎನ್ ರಮೇಶ್  ಅವರು ಸರ್ಕಾರದ ಮಾರ್ಗಸೂಚಿ ಪ್ರಕಾರ ಮಾರ್ಕೆಟಿನ ಕೆಲವು ಅಂಗಡಿಗಳು ಪ್ರಾರಂಭವಾಗುತ್ತಿವೆ. ಅದರಲ್ಲಿ ಬಟ್ಟೆ ಅಂಗಡಿಗಳು ಪಾರಂಭಿಸಲು ಅನುಮತಿ ಇಲ್ಲ. ನಾವು ಕಳೆದ ವರ್ಷ 2020 ಅತಿ ಹೆಚ್ಚು ವ್ಯಾಪಾರ ವಿರುವ ಸಮಯ ಏಪ್ರಿಲ್, ಮೇ ತಿಂಗಳಲ್ಲಿ ಲಾಕ್‍ಡೌನ್ ಆಗಿ ವ್ಯಾಪಾರ ಕಳೆದುಕೊಂಡಿದ್ದೇವೆ. ಈ ವರ್ಷ ಅದೇ ರೀತಿ ವ್ಯಾಪಾರವಿಲ್ಲದೆ ಕಷ್ಟದಲ್ಲಿದ್ದೇವೆ. ನಮಗೆ ಸರ್ಕಾರದಿಂದ ಯಾವುದೇ ರೀತಿಯ ಸಹಾಯವಾಗಿಲ್ಲ. ನಾವು ವಿದ್ಯುತ್ ಬಿಲ್, ಮಹಾನಗರ ಪಾಲಿಕೆಯ ತೆರಿಗೆ, ನೀರಿನ ಕರ, ಬ್ಯಾಂಕಿನ ಬಡ್ಡಿ, ಸಹಿತ ಎಲ್ಲವನ್ನೂ ಪಾವತಿಸಿದ್ದೇವೆ. ನಮ್ಮಲ್ಲಿ ದುಡಿಯುವ ಜನರಿಗೆ ಇದುವರೆಗೂ ಸರಕಾರದಿಂದ ಯಾವುದೇ ಆರ್ಥಿಕವಾಗಿ ಅನುಕೂಲವಾಗಿಲ್ಲ ಅವರಿಗೆ ನಾವೇ ವೇತನ ನೀಡಿದ್ದೇವೆ. ಆದ ಕಾರಣ ತಮಗೆ ವಾರದಲ್ಲಿ 4 ದಿನವಾದರೂ ನಮಗೆ ವ್ಯಾಪಾರ ಮಾಡಲು ಅನುಮತಿ ನೀಡಬೇಕೆಂದು ಹೇಳಿದರು.

ಇದೇ ಸಂದರ್ಭದಲ್ಲಿ .ಮೈಸೂರು ಜವಳಿ ಮತ್ತು ಸಿದ್ಧ ಉಡುಪುಗಳ ವರ್ತಕರ ಸಂಘದ ನೇಮಿಚಂದ್ರ ಪಡೋಲ್ಲ,  ಕುಮಾರ್ ಪಡೊಲ್ಲ, ಪ್ರಕಾಶ್, ಬನ್ನೂರು ಮಹೇಂದ್ರಸಿಂಗ್ ಕಾಳಪ್ಪ, ಜನಕ್ ಸಿಂಗ್ ಭಾಟಿ ಇನ್ನಿತರರು ಇದ್ದರು

By admin