ಮೈಸೂರು: ಸುವರ್ಣ ಬೆಳಕು ಫೌಂಡೇಷನ್ ಹಾಗೂ ಹಿಮಾಲಯ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ಬಸವ ಜಯಂತಿ ಪ್ರಯುಕ್ತ ಕೊರೋನಾ ವಾರಿಯರ್ಸ್ ಗೆ ಬಸವ ರತ್ನ ಪ್ರಶಸ್ತಿಯನ್ನು ನಗರದಲ್ಲಿಂದು ಪ್ರದಾನ ಮಾಡಲಾಯಿತು.
ನಗರದ ಗನ್ ಹೌಸ್ ಬಳಿಯ ಶ್ರೀ ಬಸವೇಶ್ವರ ಪ್ರತಿಮೆ ಮುಂಭಾಗ ನಡೆದ ಸರಳ ಕಾರ್ಯಕ್ರಮದಲ್ಲಿ ಮಾಜಿ ಶಾಸಕ.ಎಂ.ಕೆ. ಸೋಮಶೇಖರ್ ಬಸವಣ್ಣನವರ ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸಿದರು.
ಇದೇ ವೇಳೆ ಕೊರೋನಾ ವಾರಿಯರ್ಸ್ ಗಳಾದ ರಾಜಾರಾಂ (ಸಮಾಜಸೇವೆ), ಎಸ್.ಇ.ಗಿರೀಶ್ (ಜೀವಧಾರ ರಕ್ತನಿಧಿ), ಡಾ.ಎಸ್.ಪ್ರಭುಶಂಕರ್ (ವೈದ್ಯಕೀಯ ಸೇವೆ) ಅವರುಗಳಿಗೆ ಬಸವ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ನಂತರ ಮಾತನಾಡಿದ ಅವರು,     ಬಸವಣ್ಣ ನವರ ಕಾಯಕ ಮತ್ತು ದಾಸೋಹ ತತ್ವಗಳನ್ನು ಜೀವನದಲ್ಲಿ ಪ್ರತಿಯೊಬ್ಬರು ಅಳವಡಿಸಿಕೊಂಡು ಬದುಕಿದರೆ ಸಮಾನತೆಯ ಸಮಾಜ ಸಾಧ್ಯವಾಗುತ್ತದೆ ಎಂದರು.

ನಂತರ ಮಾತನಾಡಿದ ಹಿರಿಯ ಸಮಾಜ ಸೇವಕ ಡಾ. ರಘುರಾಂ ವಾಜಪೇಯಿ ೧೨ ನೇ ಶತಮಾನದಲ್ಲಿ ಉದಯಿಸಿದ ದಿವ್ಯ ಪುರಷ ಬಸವಣ್ಣನವರು ಎಂದು ಅಭಿಪ್ರಾಯ ಪಟ್ಟರು. ಅವರು .ಅಂದಿನ ಕಾಲಘಟ್ಟದಲ್ಲಿ ಜಾತಿ ಅಸಮಾನತೆ ವಿರುದ್ಧ ಹೋರಾಡಿ ಸಮಾನತೆಯ ತತ್ವ ಹಾಗೂ ಕಾಯಕ ನಿಷ್ಟೆಯನ್ನು ಎಂದು ಪ್ರತಿಪಾದಿಸಿದರು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ. ಇದೇ ಸಂಧರ್ಭ ಅಶಕ್ತ ರಂಗಭೂಮಿ ಕಲಾವಿದರಿಗೆ ರಘುರಾಂ ವಾಜಪೇಯಿ ಅವರು ಧನ ಸಹಾಯದ ನೆರವನ್ನು ನೀಡಿದರು.ನಂತರ ದಾರಿಹೋಖರಿಗೆ ನಂದಿನಿ ಮಜ್ಜಿಗೆಯನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸುವರ್ಣ ಬೆಳಕು ಫೌಂಡೇಷನ್ ಅಧ್ಯಕ್ಷ ಮಹೇಶ್, ಹಿಮಾಲಯ ಫೌಂಡೇಷನ್ ಅಧ್ಯಕ್ಷ ಎನ್.ಅನಂತ್, ಮೈಸೂರು ಯೋಗ ಅಸೋಸಿಯೇಷನ್ ಉಪಾಧ್ಯಕ್ಷ ಯೋಗಪ್ರಕಾಶ್, ಖ್ಯಾತ ವ್ಯಂಗ್ಯ ಚಿತ್ರಗಾರ ಹಾಗೂ ಫುಲ್ ಬ್ರೈಟ್ ರ್ ಎಂ.ವಿ ನಾಗೇಂದ್ರಬಾಬು, ಹರ್ಷವರ್ಧನ, ರವಿ,ಸ್ವಾಮಿ, ಶಿವು, ಶ್ರೀಕಾಂತ್, ಬಾಬು, ಮಂಜುನಾಥ.ಚಿ.ಮ., ಬಿ.ಆರ್.ರಾಮಚಂದ್ರ.ಸಿ.ಜಿ. ಮುಂತಾದವರು ಉಪಸ್ಥಿತರಿದ್ದರು.

By admin