ಚಾಮರಾಜನಗರ: ಜಗತ್ತಿಗೆ ಸಮಾನತೆಯ ಮಂತ್ರ ಭೋದಿಸಿದ ಮಹಾನ್ ಮಾನವತಾವಾದಿ ಬಸವಣ್ಣನವರು ವಚನಗಳ ಮೂಲಕ ಕ್ರಾಂತಿಕಾರಿಬದಲಾವಣೆ ತಂದರು ಎಂದು ಜಿಪಂ ಮಾಜಿಅಧ್ಯಕ್ಷೆ ಜಿ.ನಾಗಶ್ರೀಪ್ರತಾಪ್ ಹೇಳಿದರು.
ನಗರದ ರೋಟರಿಭವನದಲ್ಲಿ ಅಖಿಲ ಕರ್ನಾಟಕ ಕನ್ನಡಮಹಾಸಭೆ ವತಿಯಿಂದ ನಡೆದ ಮಹಾನ್ ಮಾನವತಾವಾದಿ ಜಗಜ್ಯೋತಿಬಸವೇಶ್ವರರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಸವಣ್ಣ ನವರು ೧೨ ನೇ ಶತಮಾನದಲ್ಲಿ ಸಮಾಜದಲ್ಲಿ ತಾಂಡವವಾಡುತ್ತಿದ್ದ ಮೌಡ್ಯಾಚಾರ, ಕಟ್ಟುಕಂದಾಚಾರಗಳನ್ನು ಖಂಡಿಸುವ ಮೂಲಕ ಆಡುಭಾಷೆಯಲ್ಲಿ ವಚನರಚಿಸಿ ಜನರಲ್ಲಿ ಜಾಗೃತಿ ಮೂಡಿಸಿದರು.
ಇಂದಿನ ಮಹಿಳೆಯರು ಅಕ್ಕಮಹಾದೇವಿ ಅವರ ಆತ್ಮಸ್ಥೈರ್ಯ ವನ್ನು ಬೆಳೆಸಿಕೊಳ್ಳಬೇಕು, ಅದೇರೀತಿ ಬಸವಣ್ಣ ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆಯಬೇಕು ಎಂದರು.
ಸಾಹಿತಿ ಬನ್ನೂರು ರಾಜು ಮಾತನಾಡಿ, ಇಂದು ದುಡಿದು, ತಿನ್ನುವವರಿಗಿಂತ ಇನ್ನೊಬ್ಬರನ್ನು ಹಿಂಸಿಸಿ ತಮ್ಮ ಹೊಟ್ಟೆ ಹೊರೆಯುವವರ ಸಂಖ್ಯೆ ಹೆಚ್ಚಿದೆ, ಇದಕ್ಕೆ ಬಸವಣ್ಣ ವಿರೋಧವಾಗಿದ್ದರು. ಇಂದಿನ ಪೀಳಿಗೆಗೆ ಬಸವಣ್ಣನವರ ತತ್ವಗಳನ್ನು ಬಿತ್ತುವ ಕೆಲಸವಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ದಲಿತಮಹಾಸಭೆ ಮುಖಂಡ ವೆಂಕಟರಮಣಸ್ವಾಮಿ(ಪಾಪು) ಮಾತನಾಡಿ, ಬಸವಣ್ಣನವರು
ಇವನಾರವ ಇವನಾರವ ಎಂದೆನಿಸದಿರಯ್ಯ,. ಇವನಮ್ಮವ ಕೂಡಲಸಂಗನಮನೆಯ ಮಗನೆಂದಿಸಯ್ಯ ಎಂಬ ಜಾತಿರಹಿತ ಸಮಾಜಪರಿಕಲ್ಪನೆಯ ವಚನರಚಿಸಿ, ಜನರಲ್ಲಿ ಜಾಗೃತಿ ಮೂಡಿಸಿದರು. ಬುದ್ದನ ನಂತರ ಬೆಳಕುನೀಡಿದವರೆಂದರೆ ಬಸವಣ್ಣ ಎಂದರು.
ಚಾಮರಾಜನಗರ ಸಿದ್ದಮಲ್ಲೇಶ್ವರ ವಿರಕ್ತಮಠದ ಚನ್ನಬಸವಸ್ವಾಮೀಜಿ ಆಶೀರ್ವಚನ ನೀಡಿದರು.
ಇದೇವೇಳೆ ನಗರದ ಪ್ರಸಿದ್ದ ವೈದ್ಯ ಡಾ.ಎ.ಆರ್.ಬಾಬು, ಜೆಎಸ್‌ಎಸ್ ಕಾಲೇಜಿನ ರಸಾಯನಶಾಸ್ತ್ರವಿಭಾಗದ ಮುಖ್ಯಸ್ಥ ಸಿದ್ದರಾಜು, ಕದಳಿವೇದಿಕೆ ಅಧ್ಯಕ್ಷೆ ವಸಂತಮ್ಮ, , ಚಿತ್ರನಟ ಶಿವು, ಜಾನಪದ ಕಲಾವಿದೆ ತುಳಸಮ್ಮ ಅವರನ್ನು ಸನ್ಮಾನಿಸಲಾಯಿತು.
ವೀರಶೈವಮಹಾಸಭೆ ಜಿಲ್ಲಾಧ್ಯಕ್ಷ ಮೂಡ್ಲುಪುರನಂದೀಶ್ ಪುಷ್ಪಾರ್ಚನೆ ನೆರವೇರಿಸಿದರು.
ರೋಟರಿ ಅಧ್ಯಕ್ಷ ಶ್ರೀನಿವಾಸ್, ಅಖಿಲ ಕರ್ನಾಟಕ ಕನ್ನಡಮಹಾಸಭೆ ರಾಜ್ಯಾಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ, ಗೌರವಾಧ್ಯಕ್ಷ ಶಾ.ಮುರಳಿ, ನಿಜಧ್ವನಿಗೋವಿಂದರಾಜು, ಪದಾಧಿಕಾರಿಗಳಾದ ಪಣ್ಯದಹುಂಡಿರಾಜು, ಸಾಗರ್ ರಾವತ್, ಅರುಣ್ ಕುಮಾರ್ ಗೌಡ, ಚಾ.ರಾ.ಕುಮಾರ್, ತಾಂಡವಮೂರ್ತಿ, ವೀರಭದ್ರ, ದೊರೆ, ನಗರಸಭೆ ಮಾಜಿಅಧ್ಯಕ್ಷ ಮಹದೇವನಾಯಕ, ಜಯರಾಮನಾಯಕ, ಮರಿಯಾಲದ ಹುಂಡಿ ಕುಮಾರ್,ರವಿಚಂದ್ರಪ್ರಸಾದ್ ಹಾಜರಿದ್ದರು.