ಚಾಮರಾಜನಗರ: ಸರ್ವರಿಗೂ ಸಮಬಾಳು, ಪ್ರತಿಯೊಬ್ಬರು ಕಾಯಕಜೀವಿಗಳಾಗಬೇಕು, ದೇಹವನ್ನೇ ದೇವಾಲಯವಾಗಿಸಿಕೊಳ್ಳಬೇಕು ಎಂಬ ಸಂದೇಶ ಸಾರಿದವರು ಮಹಾನ್ ಮಾನವತಾವಾದಿ ಬಸವಣ್ಣ ಎಂದು ಚಾಮರಾಜನಗರ ಗ್ರಾಮಾಂತರ ಠಾಣೆ ವೃತ್ತನಿರೀಕ್ಷಕ ಪುಟ್ಟಸ್ವಾಮಿ ಬಣ್ಣಿಸಿದರು.
ನಗರದ ರೋಟರಿಭವನದಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯ ಗಾನಗಂಧರ್ವ ಕಲಾವೇದಿಕೆ. ರೋಟರಿ ಸಹಯೋಗದಲ್ಲಿ ನಡೆದ’ ಜಗಜ್ಯೋತಿಬಸವೇಶ್ವರರ ೮೮೯ ನೇ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.
೧೨ ನೇ ಶತಮಾನದಲ್ಲಿ ಸಮಾಜದಲ್ಲಿ ತಾಂಡವವಾಡುತ್ತಿದ್ದ ಮೌಡ್ಯ. ಕಟ್ಟು, ಕಂದಾಚಾರಗಳನ್ನು ತೊಡೆದು ಹಾಕುವಲ್ಲಿ ಬಸವಣ್ಣನವರ ಕೊಡುಗೆ ಅಪಾರ ಎಂದರು.
ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಸಿ.ಎಂ.ನರಸಿಂಹಮೂರ್ತಿ ಮಾತನಾಡಿ, ಮಹಿಳೆಯರಿಗೆ ಸಮಾನತೆ ಸೇರಿದಂತೆ ಹಲವಾರು ಸಮಾಜಸುಧಾರಣೆ ಕಾರ್ಯಕ್ರಮಗಳನ್ನು ಬಸವಣ್ಣ ೧೨ ನೇ ಶತಮಾನದಲ್ಲೇ ಅನುಭವಮಂಟಪದಲ್ಲಿ ಜಾರಿಗೊಳಿಸಿದ್ದರು.
ಎಂದರು.
ಪ್ರದಾನಭಾಷಣ ನೆರವೇರಿಸಿದ ಸರಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನ ಇತಿಹಾಸ ಉಪನ್ಯಾಸಕ ಡಾ.ಜಯಣ್ಣ’ ಬಸವಣ್ಣನವರು ತಮ್ಮ ಅನುಭವಮಂಟಪದಲ್ಲಿ ಪ್ರಜಾಪ್ರಭುತ್ವದ ಮಹತ್ವದ ಬಗ್ಗೆ ವಚನಗಳಲ್ಲಿ ಅರಿವು ಮೂಡಿಸಿದ್ದರು.
ಅಂಬೇಡ್ಕರ್ ಅವರು ಬಸವಣ್ಣ ಅವರ ಪರಿಕಲ್ಪನೆಯನ್ನು ಸಂವಿಧಾನದಲ್ಲಿ ಸಾಕಾರಗೊಳಿಸಿದ್ದಾರೆ ಎಂದರು.
ಜಿಪಂ ಮುಖ್ಯಲೆಕ್ಕಾಧಿಕಾರಿ ಎಚ್.ಎಸ್. ಗಂಗಾಧರ್, ರೋಟರಿ ಅಧ್ಯಕ್ಷ ಎ.ಶ್ರೀನಿವಾಸನ್, ನಗರಸಭೆ ಸದಸ್ಯೆ ಕುಮುದಾ, ಉದ್ಯಮಿ ಬಿರಾದರ್, ಕನ್ನಡಪರಸಂಘಟನೆ ಮುಖಂಡ ಮಿಂಚುನಾಗೇಂದ್ರ, ಎಸ್‌ಪಿಬಿ ಸಾಂಸ್ಕೃತಿಕ ವೇದಿಕೆ ಗೌರವಾಧ್ಯಕ್ಷ ಸುರೇಶ್‌ಗೌಡ, ಅಧ್ಯಕ್ಷ ಎಚ್.ಎಂ.ಶಿವಣ್ಣ, ಉಪಾಧ್ಯಕ್ಷೆ ಮಂಗಳಾ, ಸಂಘಟನಾ ಕಾರ್ಯದರ್ಶಿ ದೇವರಾಜ್, ಮೂರ್ತಿ, ಸಿ.ಡಿ.ಪ್ರಕಾಶ್ ಹಾಜರಿದ್ದರು.
