ಬೆಂಗಳೂರು: ಕರ್ನಾಟಕ ಔಷಧ ಪರೀಕ್ಷಾ ಪ್ರಯೋಗಾಲಯದ ಸರ್ಕಾರಿ ವಿಶ್ಲೇಷಕರು ಹಲವು ಔಷಧಿಗಳು ಉತ್ತಮ ಗುಣಮಟ್ಟ ಹೊಂದಿಲ್ಲದ ಕಾರಣ ಮಾರಾಟ ಮಾಡದಂತೆ ಸೂಚನೆ ನೀಡಿದ್ದು, ಗ್ರಾಹಕರಿಗೆ ಆ ಮಾತ್ರೆಗಳನ್ನು ನೀಡಿದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.

ಕೂಲ್ 24 (ಪ್ಯಾಂಟೋಪ್ರಜೋಲ್ ಗ್ಯಾಸ್ಟ್ರೋ-ರಿಸಿಸ್ಟೆಂಟ್ ಟ್ಯಾಬ್ಲೆಟ್ಸ್ ಐ.ಪಿ), ಟ್ರೋಯ್‍ಪಾಡ್ಡ್ರೈ ಸಿರಪ್ (ಸೆಪೋಡ್ಯಾಕ್ಸಿಮ್ ಪ್ರೋಕ್ಸಿಟಿಲ್‍ಓರಲ್ ಸಶ್‍ಪೆನ್‍ಶನ್ ಐ.ಪಿ) ಟ್ವೀಟ್ ಕಾಲ್-500 (ಕ್ಯಾಲ್‍ಷಿಯಂ, ಮೆಗ್ನೀಷಿಯಂ, ಜಿಂಕ್ & ವಿಟಮಿನ್ ಡಿ3 ಟ್ಯಾಬ್ಲೆಟ್ಸ್), ಟ್ರೂಎಸ್-ಸ್ಪಾಸ್ (ಅಸೆಕ್ಲೋಫೆನಕ್ & ಡ್ರೋಟವೆರಿನ್ ಹೈಡ್ರೋಕ್ಲೋರೈಡ್ ಟ್ಯಾಬ್ಲೆಟ್ಸ್), ಎಡೋಕ್ಲೋಪ್-ಪಿ (ಅಸೇಕ್ಲೋಫೆನಕ್ & ಪ್ಯಾರಸೆಟಮೋಲ್ ಟ್ಯಾಬ್ಲೆಟ್ಸ್) ರಾಬ್‍ವೆಬ್-ಡಿಎಸ್‍ಆರ್ (ರಾಬಪ್ರಜೋಲ್ ಸೋಡಿಯಂಗ್ಯಾಸ್ಟ್ರೋ-ರಿಸಿಸ್ಟೆಂಟ್ ಅಂಡ್‍ಡೋಮ್‍ಫೆರಿಡನ್ ಪ್ರೋಲಾಂಗಡ್‍ರೀಲಿಸ್ ಕ್ಯಾಪ್ಸೂಲ್ಸ್), ಎರಿಥ್ರೋಮೈಸಿನ್ ಸ್ಟಿರೆಟ್ ಟ್ಯಾಬ್ಲೆಟ್ಸ್ ಐ.ಪಿ 500 ಎಮ್‍ಜಿ (ಎರಾಕ್ಸಿಡ್-500), ಅಮೋಕ್ಸಿಸಿಲಿನ್ ಕ್ಲವುಲಾನಿಕ್ ಆಸಿಡ್ ವಿಥ್ ಲ್ಯಾಕ್‍ಟಿಕ್ ಆಸಿಡ್ ಬ್ಯಾಸಿಲಸ್ ಟ್ಯಾಬ್ಲೆಟ್ಸ್ (ಓರಿಕ್ಲೇವ್-625 ಎಲ್‍ಬಿ), ಪ್ಯಾರಸೆಟಮೋಲ್ ಇನ್‍ಪೂಶನ್ ಐಪಿ (1.0%  w/v) ಕ್ರಿಟ್‍ಪಾರ್, ರೊಲ್ಡ್ ಬ್ಯಾಂಡೇಜ್ ಶಡ್ಯೂಲ್‍ಏಪ್ ಈ ಔಷಧಿಗಳನ್ನು ಕಾಂತಿವರ್ಧಕ, ಉತ್ತಮ ಗುಣಮಟ್ಟದಲ್ಲವೆಂದು ಔಷಧ ನಿಯಂತ್ರಕರು ಘೋಷಿಸಿದ್ದಾರೆ.

ಹಾಗಾಗಿ ಈ ಔಷಧಿಗಳನ್ನು ಕಾಂತಿವರ್ಧಕ ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಂನವರು ದಾಸ್ತಾನು ಮಾಡುವುದಾಗಲೀ, ಮಾರಾಟ ಮಾಡುವುದಾಗಲೀ ಅಥವಾ ಉಪಯೋಗಿಸುವುದಾಗಲೀ ಮಾಡಬಾರದಂತೆ ಎಚ್ಚರಿಕೆ ನೀಡಲಾಗಿದೆ.

ಒಂದು ವೇಳೆ ಆದೇಶವನ್ನು ಉಲ್ಲಂಘಿಸಿ ಔಷಧಿಗಳ ದಾಸ್ತಾನನ್ನು ಹೊಂದಿದ್ದಲ್ಲಿ ಸಂಬಂಧಪಟ್ಟ ಕ್ಷೇತ್ರದ ಔಷಧ ಪರಿವೀಕ್ಷಕರು, ಸಹಾಯಕ ಔಷಧ ನಿಯಂತ್ರಕರ ಗಮನಕ್ಕೆ ಸಾರ್ವಜನಿಕರು ತರಬಹುದೆಂದು ಔಷಧ ನಿಯಂತ್ರಕರು ತಿಳಿಸಿದ್ದಾರೆ.

By admin